ಕೊಲಂಬಿಯಾದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿದ್ದು ಲಾವಾರಸ ಚಿಮ್ಮುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳನ್ನು ಅಧಿಕಾರಿಗಳು ಸ್ಥಳಾಂತರಿಸುತ್ತಿದ್ದಾರೆ.
ಬೊಗೊಟಾದ 150 ಮೈಲಿ ನೈರುತ್ಯಕ್ಕಿರುವ ನೆವಡೊ ಡೆಲ್ ಹುಯ್ಲಾ ಎಂಬಲ್ಲಿ ಜ್ವಾಲಾಮುಖಿ ಸಿಡಿದಿದ್ದು, ಯಾವುದೇ ಹಾನಿಯ ಕುರಿತು ವರದಿಯಾಗಿಲ್ಲ.
ಜ್ವಾಲಾಮುಖಿ ಸ್ಫೋಟಗೊಂಡ ಜಾಗದ ಸುತ್ತಮುತ್ತ ಜೀವಿಸುವ ಸುಮಾರು 13ರಿಂದ 15 ಸಾವಿರದಷ್ಟು ಮಂದಿಯನ್ನು ತೆರವುಗೊಳಿಸಲಾಗಿದೆ. ಮಂಗಳವಾರ ಸ್ಥಳೀಯ ಕಾಲಮಾನ 1.08ರ ವೇಳೆಗೆ ಈ ದುರ್ಘಟನೆ ಸಂಭವಿಸಿದೆ ಎಂದು ಹವಾಮಾನ ಮತ್ತು ಭೂಗರ್ಭ ಸಂಸ್ಥೆಯು ತಿಳಿಸಿದೆ.
ಹೊರಚಿಮ್ಮಿರುವ ಜ್ವಾಲಾಮುಖಿಯ ಗಾತ್ರವನ್ನು ಅಳೆಯಲು ಸಾಧ್ಯವಾಗಿಲ್ಲ ಎಂದು ಭೂಗರ್ಭ ಇಲಾಖೆಯ ಉಪನಿರ್ದೇಶಕ ಮಾರ್ತಾ ಕಾವ್ಲಚೆ ಅವರು ಕಾರಕೋಲ್ ರೇಡಿಯೋಗೆ ತಿಳಿಸಿದ್ದಾರೆ.
|