ಅಮೆರಿಕ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಅವರ ವಿಶೇಷ ಪ್ರತಿನಿಧಿಯು ಟಿಬೆಟ್ ಧರ್ಮಗುರು ದಲೈಲಾಮ ಜತೆ ಮುಂದಿನ ವಾರ ಮಾತುಕತೆ ನಡೆಸಲಿದೆ ಎಂದು ವಿದೇಶಾಂಗ ಇಲಾಖೆ ಉಪ ವಕ್ತಾರ ಟಾಮ್ ಕೇಸಿ ತಿಳಿಸಿದ್ದಾರೆ.
ಟಿಬೆಟ್‌ನಲ್ಲಿನ ಗಂಭೀರ ಸಮಸ್ಯೆ ಕುರಿತು ಮಾತುಕತೆ ವೇಳೆ ಚರ್ಚಿಸಲಾಗುವುದು. ಹಿಮಾಲಯ ಪ್ರದೇಶದಲ್ಲಿ ಅಶಾಂತಿಯ ವಾತಾವರಣ ಉಂಟಾದ ಬಳಿಕ ದಲೈಲಾಮ ಹಾಗೂ ಅಮೆರಿಕದ ಆಡಳಿತದ ನಡುವಿನ ಉನ್ನತ ಮಟ್ಟದ ಸಂಪರ್ಕ ಇದಾಗಿದೆ ಎಂದು ಅಮೆರಿಕ ಮಂಗಳವಾರ ಹೇಳಿದೆ.
ಉದ್ದೇಶಿತ ಭೇಟಿಯಲ್ಲಿ ಯಾವುದೇ ಹೊಸ ಉಪಕ್ರಮಗಳು ಚರ್ಚೆಯಾಗುವುದಿಲ್ಲ. ಟಿಬೆಟ್ ಸಮಸ್ಯೆ ಬಗ್ಗೆ ಚೀನಾದ ಅಧಿಕಾರಿಗಳು ದಲೈಲಾಮಾ ಜತೆ ಮಾತುಕತೆ ನಡೆಸಬೇಕೆನ್ನುವ ಅಮೆರಿಕದ ಚಿಂತನೆ ಕುರಿತು ಉಭಯ ಬಣದವರು ಚರ್ಚಿಸಲಿದ್ದಾರೆ. ಟಿಬೆಟ್‌ಗೆ ವಿಶೇಷ ಪ್ರತಿನಿಧಿಯಾಗಿರುವ ಅಧೀನ ಕಾರ್ಯದರ್ಶಿ ಪಾಲ್ ದೋಬ್ರಿಯಾನ್‌ಸ್ಕಿ ಏ.21ರಂದು ಮಿಚಿಗನ್‌ನಲ್ಲಿ ದಲೈಲಾಮಾ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಕೇಸಿ ತಿಳಿಸಿದ್ದಾರೆ.
ಈ ಮಧ್ಯೆ, ವಿದೇಶಾಂಗ ಕಾರ್ಯದರ್ಶಿ ಕಾಂಡೋಲಿಸಾ ರೈಸ್ ಒಲಿಂಪಿಕ್ ಒಂದು ಕ್ರೀಡಾಕೂಟವೆಂದು ತಿಳಿಸಿದ್ದು, ಅಫ್ಘಾನಿಸ್ತಾನದ ಮೇಲೆ ಸೋವಿಯತ್ ದಾಳಿ ಮಾಡಿದಾಗ ಅಮೆರಿಕ ಮಾಸ್ಕೊ ಒಲಂಪಿಕ್ ಕ್ರೀಡಾಕೂಡ ಬಹಿಷ್ಕಾರ ಹಾಕುವುದಕ್ಕೆ ತಾವು ಒಲವು ವ್ಯಕ್ತಪಡಿಸಲಿಲ್ಲ ಎಂದು ಹೇಳಿದ್ದಾರೆ.
|