ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಜ್ಞಾನಿಗಳನ್ನು ಬೆಚ್ಚಿ ಬಿಳಿಸಿದ ಬಾಲಕ
ಭೂಮಿಗೆ ಅಪ್ಪಳಿಸಬಹುದಾದ ಆಕಾಶ ಕಾಯಗಳ ವೇಗ ಮತ್ತು ದಿಕ್ಕನ್ನು ನಿಖರವಾಗಿ ಲೆಕ್ಕ ಹಾಕಿದ 13 ವರ್ಷದ ಬಾಲಕನೊಬ್ಬ ನಾಸಾ ವಿಜ್ಞಾನಿಗಳನ್ನು ಬೆಚ್ಚಿ ಬಿಳಿಸಿದ್ದಾನೆ.

ವರದಿಗಳ ಪ್ರಕಾರ ನಿಕೊ ಮಾರ್ಕುರ್ಡಟ್, ಪೊಟ್ಸ್‌ಡ್ಯಾಮ್‌ನಲ್ಲಿ ಇರುವ ಇನ್ಸಟ್ಯಿಟ್ಯೂಟ್ ಆಫ್ ಅಸ್ಟ್ರೋಫಿಸಿಕ್ಸ್‌ನಲ್ಲಿ ಕೇವಲ ಟೆಲಿಸ್ಕೊಪ್ ಸಹಾಯದಿಂದ ಅಪೊಫಿಸ್ ಎಂಬ ಆಕಾಶ ಕಾಯ ಭೂಮಿಗೆ ಅಪ್ಪಳಿಸುವ ಸಾಧ್ಯತೆಯನ್ನು ಲೆಕ್ಕ ಹಾಕಿದ್ದು. ಅವನ ಪ್ರಕಾರ 450 ಸಂಭವನೀಯತೆಗಳಲ್ಲಿ ಒಂದು ಸಂಭವನೀಯತೆ, ಭೂಮಿಗೆ ಆಕಾಶಕಾಯ ಅಪ್ಪಳಿಸಬಹುದು ಎಂದು ಲೆಕ್ಕ ಹಾಕಿದ್ದಾನೆ.

ಸನ್ ಪತ್ರಿಕೆಯಲ್ಲಿ ವರದಿಯಾಗಿರುವ ಪ್ರಕಾರ 45 ಸಾವಿರ ಸಂಭವನಿಯತೆಗಳಲ್ಲಿ ಅಪೊಫಿಸ್ ಭೂಮಿಗೆ ಅಪ್ಪಳಿಸುವ ಒಂದು ಸಾಧ್ಯಾಸಾಧ್ಯತೆ ಇದೆ ಎಂದು ಈ ಹಿಂದೆ ನಾಸಾ ವಿಜ್ಞಾನಿಗಳು ತಮ್ಮ ಸಂಶೋಧನೆಯಲ್ಲಿ ಹೇಳಿದ್ದಾರೆ. ನಾಸಾದ ಸಹ ಸಂಸ್ಥೆ ಯುರೋಪಿಯನ್ ಸ್ಪೇಸ್ ಏಜೆನ್ಸಿಗೆ ಬರೆದಿರುವ ಪತ್ರದಲ್ಲಿ ಶಾಲಾ ವಿದ್ಯಾರ್ಥಿ ಮಾರ್ಕುರ್ಡಟ್ ಕಂಡು ಹಿಡಿದಿದ್ದು ಸರಿಯಾಗಿದೆ ಎಂದು ಹೇಳಿದೆ.

ಏಪ್ರಿಲ್ 13, 2029ರಂದು ಭೂಮಿಗೆ ಅತಿ ಸಮೀಪದಲ್ಲಿ ಸಾಗಲಿರುವ ಅಪೋಫಿಸ್ ಆಕಾಶಕಾಯವು ಭೂಮಿಯ ಸುತ್ತ ತಿರುಗುತ್ತಿರುವ ಅಂದಾಜು 40 ಸಾವಿರಕ್ಕೂ ಹೆಚ್ಚು ಉಪಗ್ರಹಗಳ ಪೈಕಿ ಕೆಲವುಗಳಿಗೆ ಡಿಕ್ಕಿ ಹೊಡೆಯಬಹುದು ಎಂದು ಸಂಭವನೀಯತಾ ಸಿದ್ದಾಂತದ ಆಧಾರದ ಮೇಲೆ ಬಾಲಕ ಹೇಳಿದ್ದಾನೆ.

ಈ ಡಿಕ್ಕಿಯಿಂದ ಆಕಾಶ ಕಾಯವು ಉರಿಯುವ ಕಬ್ಬಿಣದ ಗಡ್ಡೆಯಾಗಲಿದ್ದು ಸರಿಸುಮಾರು 320 ಮೀಟರ್ ಅಡಿ 200 ಬಿಲಿಯನ್ ಟನ್ ಭಾರದ ಕಬ್ಬಿಣವು ಅಟ್ಲಾಂಟಿಕ್ ಸಮುದ್ರದಲ್ಲಿ 2036ರಲ್ಲಿ ಬೀಳಲಿದೆ. ಬೃಹತ್ ಆಕಾಶ ಕಾಯ ಸಮುದ್ರದಲ್ಲಿ ಬೀಳುವುದರಿಂದ ಅಟ್ಲಾಂಟಿಕ್ ಸಮುದ್ರದಲ್ಲಿ ತ್ಸುನಾಮಿ ಮತ್ತು ವಾಯು ಮಂಡಲದಲ್ಲಿ ಅಪಾರ ಪ್ರಮಾಣದಲ್ಲಿ ದೂಳು ಆವರಿಸಿಕೊಳ್ಳುವ ಸಾಧ್ಯತೆ ಇದೆ.
ಮತ್ತಷ್ಟು
ಸದ್ಯವೇ ರಾಜಪ್ರಭುತ್ವ ಅಂತ್ಯ: ಪ್ರಚಂಡ
ನೇಪಾಳ ರಾಜಕೀಯದಲ್ಲಿ ಮದೇಶಿಗಳ ಎಂಟ್ರಿ
ಏ.21ಕ್ಕೆ ದಲೈಲಾಮ-ಅಮೆರಿಕಾ ಪ್ರತಿನಿಧಿ ಮಾತುಕತೆ
ಕಾಶ್ಮೀರಿಗರ ಇಚ್ಛೆಗನುಸಾರ ಸಮಸ್ಯೆ ಪರಿಹಾರವಾಗಲಿ: ಗಿಲಾನಿ
ಕೊಲಂಬಿಯಾದಲ್ಲಿ ಜ್ವಾಲಾಮುಖಿ ಸ್ಫೋಟ
ನೇಪಾಳ: ಚುನಾವಣೆ ಗೆದ್ದ 'ಮೋಸ್ಟ್ ವಾಂಟೆಡ್' ಆರೋಪಿ