ನೇಪಾಳದ ಸಾರ್ವತ್ರಿಕ ಚುನಾವಣೆಯಲ್ಲಿ ಭಾರೀ ಜಯಗಳಿಸಿರುವ ಮಾವೋವಾದಿಗಳ ಹಿರಿಯ ನಾಯಕ, ದೊರೆ ತಾವಾಗಿಯೇ ಗೌರವದಿಂದ ಪದತ್ಯಾಗ ಮಾಡಲಿ ಎಂದಿದ್ದಾರೆ.
ಪ್ರಜಾಪ್ರಭುತ್ವದ ಹಾದಿ ಸುಗಮಗೊಳಿಸಲು ದೊರೆ ಜ್ಞಾನೇಂದ್ರ ತನ್ನ ಸ್ಥಾನ ಬಿಟ್ಟು ಗೌರವದಿಂದ ಕೆಳಕ್ಕಿಳಿಯಬೇಕು ಎಂದು ಮಾವೋವಾದಿಗಳ ನಾಯಕ ಬಬುರಾಂ ಭಟ್ಟಾರಾಯ್ ಹೇಳಿದ್ದಾರೆ.
ಮಾವೋವಾದಿಗಳು ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಪ್ರಾಬಲ್ಯ ಮೆರೆದಿದ್ದು, ಅವರ ಪ್ರಥಮ ಕಾರ್ಯವು ದೊರಯನ್ನು ವಜಾಗೊಳಿಸಿ, 240 ವರ್ಷಗಳಷ್ಟು ಹಳೆಯ ರಾಜಪ್ರಭುತ್ವಕ್ಕೆ ತೆರೆಎಳೆಯುವುದಾಗಿದೆ ಎಂದು ಹೇಳಿದ್ದಾರೆ.
|