ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಒಬಾಮ ವಿರುದ್ಧ ಕ್ಲಿಂಟನ್ ವಾಗ್ದಾಳಿ
ವಾಷಿಂಗ್ಟನ್: ಪ್ರತಿಸ್ಪರ್ಧಿ ಬರಾಕ್ ಒಬಾಮಾ ಅವರ ಬಗ್ಗೆ ತೀವ್ರ ವಾಗ್ದಾಳಿ ಮಾಡಿರುವ ಹಿಲೇರಿ ಕ್ಲಿಂಟನ್, ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಅಭ್ಯರ್ಥಿಯಾಗಿ ಒಬಾಮಾ ಆಯ್ಕೆಯಾದರೆ ಅನೇಕ ವಿಷಯಗಳಲ್ಲಿ ಅವರು ದುರ್ಬಲ ಅಭ್ಯರ್ಥಿಯಾಗಲಿದ್ದಾರೆ ಎಂದು ಹೇಳಿದ್ದಾರೆ.

ಪೆನ್ಸಿಲ್‌ವೇನಿಯ ಡೆಮಾಕ್ರಟಿಕ್ ಪ್ರೈಮರಿಗೆ 6 ದಿನಗಳ ಮುಂಚೆ ಒಬಾಮಾ ಜತೆ ನಡೆದ ಮುಖಾಮುಖಿ ಚರ್ಚೆಯಲ್ಲಿ , ಒಬಾಮಾ ತಮ್ಮ ಮಾಜಿ ಧರ್ಮಗುರು ರೆವರೆಂಡ್ ಜೆರೆಮಿಯ ಎ ರೈಟ್ ಜೂ ಜತೆ ಸಂಬಂಧ ಮತ್ತು ಹಿಂದಿನ ಮೂಲಭೂತವಾದಿ ಸಂಘಟನೆ ವೆದರ್ ಅಂಡರ್‌ಗ್ರೌಂಡ್ ನಾಯಕ ವಿಲಿಯಂ ಅಯರೆಸ್ ಜತೆ ಸಂಪರ್ಕದ ಬಗ್ಗೆ ರಿಪಬ್ಲಿಕನ್‌ಗಳು ಒಬಾಮಾ ಅವರನ್ನು ಕೆಣಕುತ್ತಿದ್ದಾರೆಂದು ಕ್ಲಿಂಟನ್ ಹೇಳಿದರು.

ಅಮೆರಿಕದ ಮೇಲೆ ಭಯೋತ್ಪಾದನೆ ದಾಳಿಗಳು ನಡೆದ ಬಳಿಕ ಅವರಿಬ್ಬರೂ ಅಮೆರಿಕವನ್ನು ಟೀಕಿಸಿದ್ದರು. ಆದರೆ ಒಬಾಮಾ ತಮ್ಮನ್ನು ಸಮರ್ಥಿಸಿಕೊಂಡಿದ್ದು, ಅಲ್ಪಕಾಲೀನ ಸಂಬಂಧ ಹೊಂದಿದ್ದ ಕೆಲವರ ಅಭಿಪ್ರಾಯಗಳಿಗೆ ತಾನು ಜವಾಬ್ದಾರಿಯಲ್ಲ ಎಂದು ಹೇಳಿದರು.
ಮತ್ತಷ್ಟು
ಡಯನಾ ಸಾವು ವಿಚಾರಣೆಗೆ 12.5 ಮಿಲಿಯನ್
ನೇಪಾಳ: ಪದತ್ಯಾಗಕ್ಕೆ ದೊರೆಗೆ ಕರೆ
ವಿಜ್ಞಾನಿಗಳನ್ನು ಬೆಚ್ಚಿ ಬಿಳಿಸಿದ ಬಾಲಕ
ಸದ್ಯವೇ ರಾಜಪ್ರಭುತ್ವ ಅಂತ್ಯ: ಪ್ರಚಂಡ
ನೇಪಾಳ ರಾಜಕೀಯದಲ್ಲಿ ಮದೇಶಿಗಳ ಎಂಟ್ರಿ
ಏ.21ಕ್ಕೆ ದಲೈಲಾಮ-ಅಮೆರಿಕಾ ಪ್ರತಿನಿಧಿ ಮಾತುಕತೆ