ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉಗ್ರರೊಂದಿಗೆ ಆರು ಬ್ರಿಟಿಷ್ ಮುಸ್ಲೀಂರ ನಂಟು
ಇಂಗ್ಲೆಂಡ್‌‌ನ ನಿವೃತ್ತ ಗೃಹ ಕಾರ್ಯದರ್ಶಿ ಜಾನ್ ರೀಡ್ ಲೈವ್ ಅವರ ವಿರುದ್ಧ ಆಕ್ರಮಣಕಾರಿಯಾಗಿ ಮಾತನಾಡಿದ್ದ ಅಬ್ದುಲ್ ಇಜಾದ್ದೀನ್ ಸೇರಿದಂತೆ ಆರು ಜನ ಬ್ರಿಟಿಷ್ ಮೂಲದ ಮಸಲ್ಮಾನರು ಭಯೋತ್ಪಾದನೆಗೆ ಧನ ಸಂಗ್ರಹ ಮತ್ತು ವಿದೇಶಗಳಲ್ಲಿ ಭಯೋತ್ಪಾದನೆ ಹರಡಿದ ಆರೋಪದಲ್ಲಿ ತಪ್ಪಿತಸ್ಥರು ಎಂದು ನ್ಯಾಯಾಲಯ ತೀರ್ಪು ನೀಡಿದೆ.

ಕಿಂಗ್ಸ್‌ಟನ್ ನ್ಯಾಯಾಲಯದಲ್ಲಿ ಕಳೆದ ಮೂರು ತಿಂಗಳು ನಡೆದ ವಿಚಾರಣೆಯಲ್ಲಿ ಸರಕಾರಿ ವಕೀಲ ಜೊನಾಥನ್ ಲೈಡಲಾವ್ ಅವರು ಆಪಾದಿತ ಸ್ಥಾನದಲ್ಲಿ ನಿಂತಿರುವ ಈ ಆರೋಪಿಗಳು ಇರಾಕ್‌ನಲ್ಲಿ ಅಮೆರಿಕ ವಿರುದ್ಧ ನಡೆಯುತ್ತಿರುವ ಹೋರಾಟಕ್ಕೆ ತನು-ಮನ-ಧನಗಳಿಂದ ಸಹಕರಿಸಬೇಕು ಎಂದು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿರುವುದು ದೃಢಪಟ್ಟಿದೆ.

ಆಪಾದಿತ ಸ್ಥಾನದಲ್ಲಿ ನಿಂತಿರುವ ಆರು ಜನ ಮುಸ್ಮೀಂರು ಅಲ್-ಮುಹಾಜಿರೌನ್ ಎಂಬ ಉಗ್ರ ಸಂಘಟನೆಯ ಸದಸ್ಯರಾಗಿದ್ದು, ಈಗ ಇಂಗ್ಲೆಂಡ್‌ನ್ನು ತೊರೆದಿರುವ ಒಮರ್ ಬಕ್ರಿ ಈ ಗುಂಪಿಗೆ ನಾಯಕನಾಗಿದ್ದನು

ಜಮೈಕನ್ ಮೂಲದ ಕ್ರಿಶ್ಚಿಯನ್ ಕುಟುಂಬದಲ್ಲಿ ಜನಿಸಿದ ಇಜಾದ್ದೀನ್ (32) ಅವರು ಜಾನ್ ರೀಡ್ ನೀಡುತ್ತಿದ್ದ ರೇಡಿಯೋ ಕಾರ್ಯಕ್ರಮವೊಂದರಲ್ಲಿ ಇಸ್ಲಾಮ ವಿರೋಧಿ ಎಂದು ಜರೆದಿದ್ದನು.
ಮತ್ತಷ್ಟು
ನೇಪಾಳ: 80 ಟಿಬೆಟ್ ನಿರಾಶ್ರಿತರ ಬಂಧನ
ಒಬಾಮ ವಿರುದ್ಧ ಕ್ಲಿಂಟನ್ ವಾಗ್ದಾಳಿ
ಡಯನಾ ಸಾವು ವಿಚಾರಣೆಗೆ 12.5 ಮಿಲಿಯನ್
ನೇಪಾಳ: ಪದತ್ಯಾಗಕ್ಕೆ ದೊರೆಗೆ ಕರೆ
ವಿಜ್ಞಾನಿಗಳನ್ನು ಬೆಚ್ಚಿ ಬಿಳಿಸಿದ ಬಾಲಕ
ಸದ್ಯವೇ ರಾಜಪ್ರಭುತ್ವ ಅಂತ್ಯ: ಪ್ರಚಂಡ