ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತ-ಮೆಕ್ಸಿಕೊ ದ್ವಿಪಕ್ಷೀಯ ಒಪ್ಪಂದ
ನಾಗರಿಕ ವೈಮಾನಿಕ ಸೇವೆ ಮತ್ತು ಶಕ್ತಿ ಸಂಪನ್ಮೂಲಗಳಲ್ಲಿ ಸಹಕಾರ ಮತ್ತು ವ್ಯಾಪಾರವನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಭಾರತ ಮತ್ತು ಮೆಕ್ಸಿಕೊ ಸರಕಾರಗಳು ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿವೆ.

ರಾಷ್ಟ್ರಪತಿ ಪ್ರತಿಭಾದೇವಿ ಪಾಟೀಲ್ ಅವರೊಂದಿಗೆ ಲ್ಯಾಟಿನ್ ಅಮೆರಿಕ ಪ್ರವಾಸಕ್ಕೆ ತೆರಳಿರುವ ಅಸಾಂಪ್ರದಾಯಿಕ ಇಂಧನ ಖಾತೆ ಸಚಿವ ವಿಲಾಸರಾವ್ ಮುತ್ತೆಮವರ್ ಅವರು ಭಾರತೀಯ ಸರಕಾರದ ಪರವಾಗಿ ಒಪ್ಪಂದಕ್ಕೆ ಸಹಿ ಹಾಕಿದರು. ಮೆಕ್ಸಿಕೊ ಸರಕಾರದ ಪರವಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಪ್ಯಾಟ್ರಿಸಿಯಾ ಎಸ್ಪಿನೋಜಾ ಮತ್ತು ಇಂಧನ ಕಾರ್ಯದರ್ಶಿ ಜಾರ್ಜನಾ ಕೆಸೆಲ್ ಒಪ್ಪಂದಕ್ಕೆ ಸಹಿ ಹಾಕಿದರು.

ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರೊಂದಿಗೆ ಉಪಸ್ಥಿತರಿದ್ದ ಮೆಕ್ಸಿಕೊ ಅಧ್ಯಕ್ಷ ಫೆಲಿಪ್ ಕಾಲ್ಡರೋನ್ ಅವರು ಏಷಿಯಾ ಪ್ಯಾಸಿಪಿಕ್ ವಲಯದಲ್ಲಿ ಭಾರತ, ಮೆಕ್ಸಿಕೊದ ಪ್ರಮುಖ ಪಾಲುದಾರ ರಾಷ್ಟ್ರ ಎಂದು ಹೇಳಿದರು.
ಮತ್ತಷ್ಟು
ಉಗ್ರರೊಂದಿಗೆ ಆರು ಬ್ರಿಟಿಷ್ ಮುಸ್ಲೀಂರ ನಂಟು
ನೇಪಾಳ: 80 ಟಿಬೆಟ್ ನಿರಾಶ್ರಿತರ ಬಂಧನ
ಒಬಾಮ ವಿರುದ್ಧ ಕ್ಲಿಂಟನ್ ವಾಗ್ದಾಳಿ
ಡಯನಾ ಸಾವು ವಿಚಾರಣೆಗೆ 12.5 ಮಿಲಿಯನ್
ನೇಪಾಳ: ಪದತ್ಯಾಗಕ್ಕೆ ದೊರೆಗೆ ಕರೆ
ವಿಜ್ಞಾನಿಗಳನ್ನು ಬೆಚ್ಚಿ ಬಿಳಿಸಿದ ಬಾಲಕ