ಸರಕಾರ ರೂಪಿಸಿರುವ ನಿಯಮಗಳನ್ನು ಉಲ್ಲಂಘಿಸಿದ ಕಾರಣ ಮಲೇಷಿಯಾ ಸರಕಾರದ ನಿಷೇಧಕ್ಕೆ ಒಳಗಾಗಿದ್ದ ಅಲ್ಲಿನ ತಮಿಳು ಪತ್ರಿಕೆ "ಮಕ್ಕಳ್ ಒಸೈ" ಪತ್ರಿಕೆಯು ತನ್ನ ಪ್ರಕಾಶನ ಪರವಾನಗಿಯನ್ನು ರದ್ದುಗೊಳಿಸುವ ಆದೇಶವನ್ನು ಹಿಂದೆಗೆದುಕೊಳ್ಳಬೇಕು ಎಂದು ಸರಕಾರವನ್ನು ಕೇಳಿಕೊಂಡಿದೆ.
ನಮಗೆ ತಿಳಿದಿರುವಂತೆ, ನಾವು ಸರಕಾರದ ನಿಯಮಗಳನ್ನು ಪಾಲಿಸಿದ್ದೇವೆ. ಒಂದು ವೇಳೆ ತಮ್ಮಿಂದ ಈ ನಿಯಮಗಳು ಉಲ್ಲಂಘನೆ ಆಗಿದ್ದಲ್ಲಿ ಅದಕ್ಕೆ ಕ್ಷಮೆ ಕೋರುತ್ತೇವೆ ಎಂದು ಪತ್ರಿಕೆಯ ಮುಖ್ಯ ವ್ಯವಸ್ಥಾಪಕ ಎಸ್. ಎಂ. ಪೆರಿಯಾಸ್ವಾಮಿ ತಿಳಿಸಿದರು.
ಪುತ್ರಾಜಯದಲ್ಲಿರುವ ಗೃಹ ಸಚಿವಾಲಯಕ್ಕೆ ಈ ಕುರಿತು ಸಲ್ಲಿಸಲಾಗಿರುವ ಮನವಿ ಪತ್ರದಲ್ಲಿ ಕ್ಷಮೆ ಕೋರಿದ್ದು ಸೋಮವಾರದಂದು ಗೃಹ ಸಚಿವ ಸೈಯದ್ ಹಮೀದ್ ಆಲ್ಬರ್‌ರನ್ನ ಭೇಟಿಯಾಗುವುದಾಗಿ ಅವರು ತಿಳಿಸಿದರು.
ಮಕ್ಕಳ್ ಒಸೈ ಪತ್ರಿಕೆಯು ವಾರದ ದಿನಗಳಲ್ಲಿ 52,000 ಸಾವಿರ ಪ್ರತಿಗಳು ಮಾರಾಟವಾಗುತ್ತಿದ್ದು, ವಾರಾಂತ್ಯದ ದಿನದಂದು 95,000 ಸಾವಿರ ಪ್ರತಿಗಳು ಮಾರಾಟವಾಗುತ್ತಿದ್ದ ಪತ್ರಿಕೆಯನ್ನು ಕಳೆದ ಬುಧವಾರ ಪ್ರಕಾಶನ ಮಾನ್ಯತೆಯನ್ನು ಸರಕಾರ ರದ್ದು ಮಾಡಿತ್ತು.
ಸಮಾಜ ಮತ್ತು ಮಲೇಷಿಯಾದ ಏಕತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪತ್ರಿಕೆಗಳ ಕಾಣಿಕೆಯನ್ನು ಸರಕಾರ ಪ್ರತಿ ವರ್ಷ ಪರಿಶೀಲಿಸುತ್ತಿದ್ದು, ಈ ನಿಯಮವನ್ನು ಮಕ್ಕಳ್ ಒಸೈ ಪತ್ರಿಕೆಯು ಪಾಲಿಸದೇ ಇರುವ ಕಾರಣ ಪ್ರಕಾಶನ ಮಾನ್ಯತೆಯನ್ನು ರದ್ದುಗೊಳಿಸಬೇಕಾಯಿತು ಎಂದು ಗೃಹ ಸಚಿವಾಲಯ ಪ್ರಕಟಣೆಯಲ್ಲಿ ಹೇಳಿದೆ.
1981ರಲ್ಲಿ `ತಮಿಳ್ ಒಸೈ' ಎಂದು ಪ್ರಕಾಶನವಾಗುತ್ತಿದ್ದ ಪತ್ರಿಕೆಯು 2005ರಂದು `ಮಕ್ಕಳ್ ಒಸೈ' ಎಂದು ಮರುನಾಮಕರಣ ಮಾಡಲಾಯಿತು. 2008 ಮಾರ್ಚ್ ತಿಂಗಳಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯ ನಂತರ ಪತ್ರಿಕೆಯವರು ಸರಕಾರದ ವಿರುದ್ದ ವರದಿಗಳನ್ನು ಪ್ರಕಟಿಸಿದಲ್ಲದೆ ವಿರೋಧ ಪಕ್ಷದ ಪರವಾಗಿ ವರದಿಗಳನ್ನು ಪ್ರಕಟಿಸುತ್ತಿತ್ತು ಎಂದು ಸರಕಾರ ತಿಳಿಸಿದೆ.
|