ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇರಾಕ್ ಯುದ್ದ ದೊಡ್ಡ ಹಿನ್ನಡೆ; ಪೆಂಟಗಾನ್
ಇರಾಕ್ ಯುದ್ದ ಒಂದು ಘೋರ ದುರಂತ. ಈ ದುರಂತದಿಂದಾಗಿ ಇರಾಕ್‌ನಲ್ಲಿ ಭಯೋತ್ಪಾದನೆ ಮತ್ತು ಅಶಾಂತಿ ಹೆಚ್ಚಲು ಕಾರಣವಾಯಿತು ಎಂದು ಪೆಂಟಗನ್‌ನ ಮಾಜಿ ಹಿರಿಯ ಅಧಿಕಾರಿಗಳು ಕಟುವಾಗಿ ವಿಶ್ಲೇಶಿಸಿದ್ದಾರೆ.

ಇರಾಕ್ ಯುದ್ದದಲ್ಲಿ ಉಂಟಾಗಿರುವ ಸಾವುನೋವು ಮತ್ತು ಆಸ್ತಿಪಾಸ್ತಿ ಹಾನಿಯನ್ನು ಲೆಕ್ಕಿಸಿದರೆ. ಇರಾಕ್ ಪ್ರಮುಖ ಯುದ್ದ ಮತ್ತು ಘೋರ ದುರಂತಗಳಿಗೆ ಪ್ರಥಮ ಸ್ಥಾನವನ್ನು ಪಡೆದಿದೆ ಎಂದು ಜೋಸೆಫ್ ಕೊಲಿನ್ ಬರೆದಿರುವ `ದಿ ಡಿಸಿಜನ್ ಟು ಇನ್‌ವೇಡ್ ಇರಾಕ್ ಅಂಡಾ ಇಟ್ಸ್ ಆಫ್ಟರ್‍‌ಮಾಥ್' ಎಂಬ ವರದಿಯಲ್ಲಿ ತಿಳಿಸಿದ್ದಾರೆ.

ಅಮೆರಿಕದ ನ್ಯಾಷನಲ್ ಡಿಫೆನ್ಲ್ ವಿಶ್ವವಿದ್ಯಾಲಯ ಪ್ರಕಟಿಸಿರುವ ಕೊಲಿನ್‌ರ ಪತ್ರಿಕೆಯಲ್ಲಿ 2001ರಿಂದ 2004ರಲ್ಲಿ ಸರಕಾರ ತೆಗೆದುಕೊಂಡ ತೀರ್ಮಾನ ಇರಾಕ್ ಯುದ್ದಕ್ಕೆ ದಾರಿ ಮಾಡಿಕೊಟ್ಟಿತು. ಎಂದು ಅವರು ಪತ್ರಿಕೆಯಲ್ಲಿ ಮಾಹಿತಿ ನೀಡಿದ್ದಾರೆ.

ಅಮೆರಿಕ ಇರಾನ್ ಮೇಲೆ ದಾಳಿ ಮಾಡಿದಾಗ, ಸೇನೆ ಸ್ಥಿರವಾಗಿ ಕಾರ್ಯಾಚರಣೆ ನಡೆಸಲು ಅವರು ಸೇನೆಯ ಉಪ ಸಹಾಯಕ ಕಾರ್ಯದಶಿಯಾಗಿದ್ದರು.

ಇರಾಕ್ ಯುದ್ಧದಿಂದಾಗಿ ಅಮೆರಿಕ ಜಗತ್ತಿನಾದ್ಯಂತ ತೀವ್ರ ಟೀಕೆಗೆ ಗುರಿಯಾಗಿದೆ, ಅಮೆರಿಕ ಸೇನೆಯ ಮೇಲೆ ಒತ್ತಡ ಹೆಚ್ಚಾಗಿದೆ ಮತ್ತು ಯುದ್ಧದಿಂದ ಭಯೋತ್ಪಾದನೆಗೆ ದಾರಿಯಾಗಿದೆ. ಅಲ್ಲದೆ ಅಮೆರಿಕದ ಸೇನೆಯಲ್ಲಿ ಸೈನಿಕರ ಕೊರತೆ ಸೇರಿದಂತೆ ಇತರೇ ಸರಕುಗಳ ಕೋರತೆ ಕಂಡುಬಂದಿದೆ ಎಂದು ಕೊಲಿನ್ ತಿಳಿಸಿದರು.

ಇರಾಕ್ ಯುದ್ಧದ ಸಮಸ್ಯೆಗಳೊಂದಿಗೆ, ರಾಷ್ಟ್ರದ ಸುರಕ್ಷತೆಯನ್ನು ಕಾಪಾಡಬೇಕಾದ ಅನಿವಾರ್ಯತೆ ಭಯೋತ್ಪಾದನೆಯ ಕಾರಣ ಎದುರಾಯಿತು. ತಾತ್ಕಾಲಿಕವಾಗಿ ಸಮಸ್ಯೆಗಳಿಗೆ ಪರಿಹಾರ ದೊರೆತಂತೆ ಕೆಲಕಾಲ ಅನ್ನಿಸಿದರೂ. ಅಂತಿಮವಾಗಿ ಇರಾಕ್ ಯುದ್ಧ ಇರಾಕ್ ಪಾಲಿಗೆ ವರವಾಗಿ ಪರಿಣಮಿಸಿತು. ಇರಾಕ್ ಮಧ್ಯ ಏಷಿಯಾದ ತನ್ನ ಪ್ರಭಾವ ಬೆಳೆಸಿಕೊಳ್ಳಲು ಸಹಕಾರಿಯಾಗಿ ಪರಿಣಮಿಸಿತು ಎಂದು ಕೊಲಿನ್ ಹೇಳಿದ್ದಾರೆ.


ಅಮೆರಿಕ ಯುದ್ದದಲ್ಲಿ ಪರಾಭವಗೊಳ್ಳಲು, ಅಮೆರಿಕ ಇರಾನ್ ಮೇಲೆ ದಾಳಿ ಮಾಡಿದ ಬಳಿಕ, ನಂತರದ ಯುದ್ದಕ್ಕೆಸರಿಯಾದ ಯೋಜನೆಗಳನ್ನು ರೂಪಿಸಲಿಲ್ಲ ಮತ್ತು ನಿಯಮ ರಚನಾಕಾರರು ತಮ್ಮ ಸೇನೆಯ ಮೇಲೆ ಅತೀ ಹೆಚ್ಚು ನಂಬಿಕೆ ಇಟ್ಟು ಸೇನೆಗೆ ಬೇಕಾದ ನೈನಿಕರನ್ನು ನಿಯೋಜಿಸಲಿಲ್ಲ ಎಂದು ಕೊಲಿನ್ ತಿಳಿಸಿದ್ದಾರೆ.
ಮತ್ತಷ್ಟು
ಶೀಘ್ರದಲ್ಲಿ ಬ್ರೌನ್ ಉತ್ತರಾಧಿಕಾರಿ ಆಯ್ಕೆ
ದ್ವಿಪಕ್ಷೀಯ ಮಾತುಕತೆಗಾಗಿ ಮುಖರ್ಜಿ ದುಬೈ ಪ್ರವಾಸ
ಸರಕಾರಕ್ಕೆ ಕ್ಷಮೆ ಕೋರಿದ ಮಲೇಶಿಯಾದ ತಮಿಳು ಪತ್ರಿಕೆ
ಭಾರತ-ಮೆಕ್ಸಿಕೊ ದ್ವಿಪಕ್ಷೀಯ ಒಪ್ಪಂದ
ಉಗ್ರರೊಂದಿಗೆ ಆರು ಬ್ರಿಟಿಷ್ ಮುಸ್ಲೀಂರ ನಂಟು
ನೇಪಾಳ: 80 ಟಿಬೆಟ್ ನಿರಾಶ್ರಿತರ ಬಂಧನ