ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶೀಘ್ರದಲ್ಲಿ ಟಿಬೆಟ್ ಪ್ರವಾಸಿಗರಿಗೆ ಮುಕ್ತ
ಕಳೆದ ತಿಂಗಳಿನಿಂದ ಚೀನಾ ವಿರೋಧಿ ನೀತಿಯ ಪ್ರತಿಭಟನೆಯ ಕಾರಣ ಪ್ರಕ್ಷುಬ್ಧವಾಗಿದ್ದ ಟಿಬೆಟ್‌‍ಗೆ ಮುಂದಿನ ತಿಂಗಳಿನಿಂದ ವಿದೇಶಿ ಪ್ರವಾಸಿಗರು ಭೇಟಿ ನೀಡಬಹುದು ಎಂದು ಪ್ರಾಂತೀಯ ಸರಕಾರ ತಿಳಿಸಿದೆ.

ಹಿಮಾಲಯ ಪರ್ವತ ಪ್ರದೇಶದಲ್ಲಿ ಇರುವ ಟಿಬೆಟ್‌ನಲ್ಲಿ ಇರುವ ಮಂದಿರಗಳಲ್ಲಿ ಎಂದಿನಂತೆ ಧಾರ್ಮಿಕ ಚಟುವಟಿಕೆಗಳು ಮುಂದಿನ ತಿಂಗಳಿನಿಂದ ಪ್ರಾರಂಭವಾಗಲಿವೆ. ಕಳೆದ ತಿಂಗಳು ಟಿಬೆಟ್ ನಾಗರಿಕರು ಇರುವ ಸ್ಥಳದಲ್ಲಿ ಹಿಂಸಾಚಾರ ಸಂಭವಿಸಿದೆ. ಟಿಬೆಟ್ ಸ್ವಾತಂತ್ರ್ಯಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ ನಾಗರಿಕರನ್ನು ಚೀನಾ ಸರಕಾರವು ಮಿಲಿಟರಿ ಬಲಪ್ರಯೋಗ ಮಾಡುವ ಮೂಲಕ ಪ್ರತಿಭಟನೆಯನ್ನು ಹತ್ತಿಕ್ಕಿತ್ತು.

ಸರಕಾರಿ ಒಡೆತನದ ಸುದ್ದಿಸಂಸ್ಥೆಯು ಮುಂದಿನ ತಿಂಗಳಿನಿಂದ ಟಿಬೆಟ್ ವಿದೇಶಿ ಪ್ರವಾಸಿಗರಿಗೆ ಮುಕ್ತವಾಗಲಿದೆ ಎಂದು ಹೇಳಿದ್ದು ಇದಕ್ಕೆ ವ್ಯತಿರಿಕ್ತವಾಗಿ ಪ್ರಾಂತೀಯ ಸರಕಾರವು ಟಿಬೆಟ್‌ಗೆ ವಿದೇಶಿ ಪ್ರವಾಸಿಗರ ಭೇಟಿಯ ಅವಕಾಶವನ್ನು ಮುಂದೂಡುವುದಕ್ಕೆ ಯೋಚನೆ ಮಾಡಿದೆ ಎಂದು ತಿಳಿದು ಬಂದಿದೆ.

ಕಳೆದ ವರ್ಷ ಅಂದಾಜು ನಾಲ್ಕು ಲಕ್ಷ ವಿದೇಶಿ ಪ್ರವಾಸಿಗರು ಟಿಬೆಟ್‌ಗೆ ಭೇಟಿ ನೀಡಿದ್ದರು. ಪ್ರಕೃತಿ ಸೌಂದರ್ಯದಿಂದ ಸಮೃದ್ಧವಾಗಿರುವ ಟಿಬೆಟ್‌ನಲ್ಲಿ ಪ್ರವಾಸೋದ್ಯಮ ಪ್ರಮುಖ ಆದಾಯವಾಗಿದೆ.
ಮತ್ತಷ್ಟು
ಇರಾಕ್ ಯುದ್ದ ದೊಡ್ಡ ಹಿನ್ನಡೆ; ಪೆಂಟಗಾನ್
ಶೀಘ್ರದಲ್ಲಿ ಬ್ರೌನ್ ಉತ್ತರಾಧಿಕಾರಿ ಆಯ್ಕೆ
ದ್ವಿಪಕ್ಷೀಯ ಮಾತುಕತೆಗಾಗಿ ಮುಖರ್ಜಿ ದುಬೈ ಪ್ರವಾಸ
ಸರಕಾರಕ್ಕೆ ಕ್ಷಮೆ ಕೋರಿದ ಮಲೇಶಿಯಾದ ತಮಿಳು ಪತ್ರಿಕೆ
ಭಾರತ-ಮೆಕ್ಸಿಕೊ ದ್ವಿಪಕ್ಷೀಯ ಒಪ್ಪಂದ
ಉಗ್ರರೊಂದಿಗೆ ಆರು ಬ್ರಿಟಿಷ್ ಮುಸ್ಲೀಂರ ನಂಟು