ಮೆಕ್ಸಿಕೊದ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಬೇಕಿದ್ದ ಭಾರತದ ರಾಷ್ಟ್ರಪತಿ ಪ್ರತಿಭಾದೇವಿ ಪಾಟೀಲ್ ಅವರ ಭಾಷಣ ರದ್ದುಗೊಂಡಿದ್ದು, ಅಲ್ಲಿನ ಎಡ ಪಕ್ಷಗಳ ಪ್ರತಿಭಟನೆ ಕಾರಣ ಬಾಷಣ ರದ್ದಾಗಿರುವುದಕ್ಕೆ ಮೆಕ್ಸಿಕನ್ ಸರಕಾರ ವಿಷಾದ ವ್ಯಕ್ತಪಡಿಸಿದೆ.
ಭಾರತದ ರಾಷ್ಟ್ರಪತಿ ಸಂಸತ್ತಿಗೆ ಪ್ರವೇಶಿಸಲು ಸಾಧ್ಯವಾಗದ ಬಗ್ಗೆ ತಾವು ತೀವ್ರವಾಗಿ ವಿಷಾದಿಸುತ್ತೇವೆ ಎಂದು ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಪ್ಯಾಟ್ರಿಸಿಯಾ ಎಸ್ಪಿನೋಸಾ ಹೇಳಿಕೆ ಉಲ್ಲೇಖಿಸಿ ಮೆಕ್ಸಿಕನ್ ಸುದ್ದಿಪತ್ರಿಕೆ "ದ ನ್ಯೂಸ್" ವರದಿ ಮಾಡಿದೆ.
ಜಂಟಿ ಅಧಿವೇಶನದ ಭಾಷಣಕ್ಕೆ ಪ್ರತಿಭಾಪಾಟೀಲ್ ಅವರಿಗೆ ನೀಡಿದ್ದ ಆಹ್ವಾನವನ್ನು ಎಡ ಸದಸ್ಯರ ಬಲಾತ್ಕಾರದ ಬಳಿಕ ಹಿಂಪಡೆದಿದ್ದರಿಂದ ಮೆಕ್ಸಿಕೊ ಅಧ್ಯಕ್ಷ ಫೆಲೈಪ್ ಕ್ಯಾಲ್ಡೆರಾನ್ ಕೂಡ ಸಹನೆ ಕಳೆದುಕೊಂಡವರಂತೆ ಕಂಡುಬಂದರು ಎಂದು ವರದಿ ತಿಳಿಸಿದೆ.
ಮೆಕ್ಸಿಕೊ ಸ್ವಾಮ್ಯದ ತೈಲ ಕಂಪೆನಿಗೆ ಕೆಲಸ ಮಾಡುವ ಖಾಸಗಿ ಕಂಪೆನಿಗಳ ಮೇಲಿನ ಕೆಲವು ನಿರ್ಬಂಧಗಳನ್ನು ಸಡಿಲಮಾಡುವ ಕ್ಯಾಲ್ಡೆರಾನ್ ಪ್ರಸ್ತಾವನೆ ವಿರುದ್ಧ ಪ್ರತಿಭಟಿಸಲು ಎಡಶಾಸಕರು ಪ್ರವೇಶದ್ವಾರಕ್ಕೆ ಅಡ್ಡಲಾಗಿ ನಿಂತು ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದರು.
|