ಜಮುನಾ ಅಣೆಕಟ್ಟು ಸಮೀಪದ ತಂಗಳಿ ಜಿಲ್ಲೆಯಲ್ಲಿ ಶನಿವಾರ ಬೆಳಿಗ್ಗೆ ಪ್ರಯಾಣಿಕರ ಬಸ್ಸೊಂದು ಪಲ್ಟಿ ಹೊಡೆದು ಬಿದ್ದ ಪರಿಣಾಮವಾಗಿ ಸುಮಾರು 18 ಜನ ಮೃತಪಟ್ಟಿದ್ದು, ಇತರೇ 51 ಮಂದಿಗೆ ಗಾಯಗಳಾಗಿವೆ ಎಂದು ಇಲ್ಲಿನ ಪೊಲೀಸರು ಮತ್ತು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಈ ಅಪಘಾತ ಇಂದು ಬೆಳಿಗ್ಗೆ 6.45ರ ಸಮಯದಲ್ಲಿ ನಡೆದಿದ್ದು, ಬಸ್ ಚಾಲಕನ ನಿಯಂತ್ರಣ ತಪ್ಪಿದ್ದರಿಂದ, ಬಸ್ಸು ತಲೆಕೆಳಗಾಗಿ ರೈಲ್ವೆ ಹಳಿ ಮೇಲೆ ಬಿದ್ದಿತು ಎಂದು ಗಾಯಗೊಂಡ ಪ್ರಯಾಣಿಕರು ತಿಳಿಸಿದರು. Sixteen people died ಅಪಘಾತದಲ್ಲಿ ಆರು ಜನರು ಸ್ಥಳದಲ್ಲೇ ಮೃತ ಪಟ್ಟರು ಮತ್ತು ಇನ್ನಿಬ್ಬರು ತಂಗಳಿ ಆಸ್ಪತ್ರೆಯಲ್ಲಿ ನಿಧನರಾದರು. ಗಾಯಗೊಂಡ ಐವತ್ತೊಂದು ಜನರನ್ನು ತಂಗಳಿ ಆಸ್ಪತ್ರೆಗೆ ಸೇರಿಸಲಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಪಘಾತದಲ್ಲಿ ಗಾಯಗೊಂಡವರಲ್ಲಿ ಬಹುತೇಕರು ಎಂದು ಕೃಷಿ ಕಾರ್ಮಿಕರು ಎಂದು ತಿಳಿದು ಬಂದಿದ್ದು. ಈ ಕೃಷಿ ಕಾರ್ಮಿಕರು ಪಕ್ಕದ ಭುರಂಗಮಾರಿ ಜಿಲ್ಲೆಯಿಂದ ಢಾಕಾ ಮತ್ತು ನರ್ಶಿಂಗಂಧಿ ಜಿಲ್ಲೆಗಳಲ್ಲಿನ ಬತ್ತದ ಕೊಯ್ಲಿಗೆ ಆಗಮಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ಕಳೆದ ಮೂರು ದಿನಗಳಲ್ಲಿ ಈ ಜಿಲ್ಲೆಯಲ್ಲಿ ಎರಡು ಬಾರಿ ಬಸ್ ಅಪಘಾತ ಸಂಭವಿಸಿದೆ. ಕಳೆದ ಬುಧವಾರ ರಾಜಬಾರಿಯ ಕಾಲಹಟ್ಟಿ ಬಳಿ ರೈಲು-ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ 17 ಜನ ಮೃತಪಟ್ಟು, 21 ಮಂದಿ ಗಾಯಗೊಂಡಿದ್ದರು.
|