ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನೇಪಾಳ: ಮಾವೋವಾದಿಗಳ ನೇತೃತ್ವದಲ್ಲಿ ಸರಕಾರ
ನೇಪಾಳದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಜಯಭೇರಿ ಗಳಿಸುವುದರೊಂದಿಗೆ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಮಾವೋವಾದಿ ಪಕ್ಷ , ಮುಂದಿನ ಸರಕಾರವನ್ನು ನಾವೇ ಮುನ್ನೆಡೆಸುವುದಾಗಿ ಶನಿವಾರದಂದು ಘೋಷಿಸಿವೆ.

2006ರಲ್ಲಿ ಬಂಡುಕೋರ ಮಾವೋವಾದಿ ಸಂಘಟನೆ ಮತ್ತು ಪ್ರಮುಖ ರಾಜಕೀಯ ಪಕ್ಷಗಳೊಂದಿಗೆ ನಡೆದ ಶಾಂತಿ ಮಾತುಕತೆಯ ಒಪ್ಪಂದದಂತೆ ನಡೆದ ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟು, ಚುನಾವಣಾ ಅಖಾಡಕ್ಕೆ ದುಮುಕಿದ ಮಾವೋವಾದಿಗಳು ಸ್ಪಷ್ಟ ಬಹುಮತ ಪಡೆಯುವ ಮೂಲಕ ಎರಡು ಶತಮಾನಗಳಷ್ಟು ಪುರಾತನವಾದ ರಾಜಾಡಳಿತಕ್ಕೆ ಇತಿಶ್ರೀ ಹಾಡಿದಂತಾಗಿದೆ.

ನೇಪಾಳದಲ್ಲಿನ ರಾಜಾಡಳಿತದ ವಿರುದ್ಧ ಶಸ್ತ್ರಾಸ್ತ್ರ ಸಹಿತ ಚಳವಳಿಯ ಮೂಲಕ ಹೋರಾಟ ಆರಂಭಿಸಿದ್ದ ಮಾವೋವಾದಿಗಳು, ದಶಕಗಳ ನಂತರ ಇದೀಗ ರಾಜಕೀಯವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ,ಮುಖ್ಯವಾಹಿನಿಗೆ ಬಂದಿರುವ ಮಾವೋಗಳು ಪ್ರಜಾಸತ್ತೆಯನ್ನು ಸ್ಥಾಪಿಸುವುದಾಗಿ ತಿಳಿಸಿವೆ.

ಆ ನಿಟ್ಟಿನಲ್ಲಿ ಚುನಾವಣೆಯ ಅಂತಿಮ ಫಲಿತಾಂಶದ ಬಳಿಕ ನಾವು ನೇಪಾಳ ಸರಕಾರವನ್ನು ಮುನ್ನೆಡಸಲಿದ್ದೇವೆ ಎಂದು ತಿಳಿಸಿದ್ದು, ಇಲ್ಲಿನ ಜನರು ನಮಗೆ ಸಂಪೂರ್ಣವಾಗಿ ಜವಾಬ್ದಾರಿಯನ್ನು ವಹಿಸಿದ್ದಾರೆ ಎಂದು ಮಾವೋವಾದಿ ಸಚಿವ ಕೃಷ್ಣ ಬಹದ್ದೂರ್ ಮಾಹರಾ ತಿಳಿಸಿದ್ದಾರೆ.

ಮಾರುಕಟ್ಟೆ ಪ್ರದೇಶದಲ್ಲಿ ಆಯೋಜಿಸಿದ್ದ ರಾಲಿಯಲ್ಲಿ ಮಾವೋ ಮುಖಂಡ ಪ್ರಚಂಡ ಅವರನ್ನು ಲಕ್ಷಾಂತರ ಜನರು ಅಭಿನಂದಿಸಿದ್ದಲ್ಲದೆ, ಕಿಟಕಿ, ಕಟ್ಟಡದ ಅಂತಸ್ತುಗಳಲ್ಲಿ ನಿಂತು ಪ್ರಚಂಡ ಅವರಿಗೆ ಕರತಾಡನದ ಮೂಲಕ ಅಭಿನಂದನೆ ಸಲ್ಲಿಸಿದರು.
ಮತ್ತಷ್ಟು
ಬಾಂಗ್ಲಾ ರಸ್ತೆ ಅಪಘಾತ: 15ಜನರ ಸಾವು, 50 ಮಂದಿಗೆ ಗಾಯ
ನೇಪಾಳದಲ್ಲಿ ಯುನ್ ಅವಶ್ಯಕತೆ ಇಲ್ಲ: ಮಾವೋ
ರಾಷ್ಟ್ರಪತಿ ಭಾಷಣ ರದ್ದು: ಮೆಕ್ಸಿಕೊ ವಿಷಾದ
ಶೀಘ್ರದಲ್ಲಿ ಟಿಬೆಟ್ ಪ್ರವಾಸಿಗರಿಗೆ ಮುಕ್ತ
ಇರಾಕ್ ಯುದ್ದ ದೊಡ್ಡ ಹಿನ್ನಡೆ; ಪೆಂಟಗಾನ್
ಶೀಘ್ರದಲ್ಲಿ ಬ್ರೌನ್ ಉತ್ತರಾಧಿಕಾರಿ ಆಯ್ಕೆ