ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕ್ವಿಟೋ ಅಗ್ನಿ ದುರಂತಕ್ಕೆ 15 ಬಲಿ
ಕ್ವಿಟೋ: ಇಲ್ಲಿನ ನೈಟ್ ಕ್ಲಬ್‌‌ವೊಂದರಲ್ಲಿ ಶನಿವಾರ ರಾತ್ರಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಸುಮಾರು 15ಮಂದಿ ಬಲಿಯಾಗಿದ್ದು, 35ಮಂದಿ ಗಾಯಗೊಂಡಿರುವುದಾಗಿ ತುರ್ತುರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.

ಕ್ಲಬ್‌‌ ಒಳಗೆ ಏಕಾಏಕಿ ಹೊತ್ತಿಕೊಂಡ ಬೆಂಕಿಯಿಂದಾಗಿ ಜನರು ದಿಕ್ಕೆಟ್ಟು ಹೊರಗೋಡಿದ್ದರು, ಆದರೂ 15ಮಂದಿ ಸಾವನ್ನಪ್ಪಿದ್ದು, ರಕ್ಷಣಾ ಪಡೆಗಳು ಮೃತ ದೇಹವನ್ನು ಹೊರತೆಗೆಯುವ ಕಾರ್ಯದಲ್ಲಿ ನಿರತರಾಗಿದ್ದಾರೆ. ನಗರಗಳಲ್ಲಿರುವ ರೆಸ್ಟೋರೆಂಟ್ ಮತ್ತು ಕ್ಲಬ್‌ಗಳಲ್ಲಿ ಹೊರಹೋಗಲು ತುರ್ತು ನಿರ್ಗಮನ ಬಾಗಿಲುಗಳ ವ್ಯವಸ್ಥೆ ಇಲ್ಲದಿರುವುದು ಹೆಚ್ಚಿನ ಸಾವಿಗೆ ಕಾರಣವಾಗುತ್ತಿದೆ ಎಂದು ರಕ್ಷಣಾ ಇಲಾಖೆ ಆರೋಪಿಸಿದೆ.

ಕ್ಲಬ್‌‌ನಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ಕೆಲವರು ಆ ಕೋಣೆಯೊಳಗೆ ಸಿಕ್ಕಿಬಿದ್ದಿರುವುದಾಗಿ ಕ್ವಿಟೋ ಅಗ್ನಿಶಾಮಕ ವರಿಷ್ಠ ಜೈಮ್ ಬೆನಾಲ್‌‌ಕಾಝರ್ ಅವರು ಸ್ಥಳೀಯ ರೇಡಿಯೊಂದಕ್ಕೆ ತಿಳಿಸಿದ್ದಾರೆ.

ಮುಖ್ಯವಾಗಿ ಕ್ಟಿಟೋ ಕ್ಲಬ್‌‌ನಲ್ಲಿ ತುರ್ತು ನಿರ್ಗಮನ ಬಾಗಿಲೇ ಬಂದ್ ಆದ ಪರಿಣಾಮ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿರುವುದಾಗಿ ಅವರು ಹೇಳಿದರು.

ಅಗ್ನಿಶಾಮಕ ದಳದವರು ಜನರ ಸಹಾಯದೊಂದಿಗೆ ಬ್ಲೇಡ್ ಹಾಗೂ ಹ್ಯಾಮರ್‌‌ಗಳನ್ನು ಉಪಯೋಗಿಸಿ ಗೋಡೆಯನ್ನು ಒಡೆದು ಜನರನ್ನು ರಕ್ಷಿಸುವ ಕಾರ್ಯಕ್ಕೆ ಮುಂದಾಗಿದೆ. ಕ್ಲಬ್ ಒಳಗೆ ಸುಮಾರು 300 ಮಂದಿ ಸಿಲುಕಿಕೊಂಡಿದ್ದಾರೆ.
ಬೆಂಕಿಯ ಕೆನ್ನಾಲೆಗೆ ಸಿಲುಕಿರುವ ಜನರು ಸಹಾಯ ಮಾಡಿ ಎಂದು ಬೊಬ್ಬಿರಿಯುತ್ತಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದು, ಜನರ ರಕ್ಷಣೆಗಾಗಿ ಪ್ರಯತ್ನಿಸುವುದಾಗಿ ಅಗ್ನಿ ಶಾಮಕ ವರಿಷ್ಠರು ತಿಳಿಸಿದ್ದಾರೆ.
ಮತ್ತಷ್ಟು
ನೇಪಾಳ: ಮಾವೋವಾದಿಗಳ ನೇತೃತ್ವದಲ್ಲಿ ಸರಕಾರ
ಬಾಂಗ್ಲಾ ರಸ್ತೆ ಅಪಘಾತ: 15ಜನರ ಸಾವು, 50 ಮಂದಿಗೆ ಗಾಯ
ನೇಪಾಳದಲ್ಲಿ ಯುನ್ ಅವಶ್ಯಕತೆ ಇಲ್ಲ: ಮಾವೋ
ರಾಷ್ಟ್ರಪತಿ ಭಾಷಣ ರದ್ದು: ಮೆಕ್ಸಿಕೊ ವಿಷಾದ
ಶೀಘ್ರದಲ್ಲಿ ಟಿಬೆಟ್ ಪ್ರವಾಸಿಗರಿಗೆ ಮುಕ್ತ
ಇರಾಕ್ ಯುದ್ದ ದೊಡ್ಡ ಹಿನ್ನಡೆ; ಪೆಂಟಗಾನ್