ಕಠ್ಮಂಡು: ನೇಪಾಳದಲ್ಲಿ ನಡೆದ ಪ್ರಧಾನ ಚುನಾವಣೆಯಲ್ಲಿ ಮಾಜಿ ಮಾವೋವಾದಿ ಬಂಡುಕೋರರು ಅರ್ಧದಷ್ಟು ಸ್ಥಾನಗಳನ್ನು ಗೆದ್ದಿದ್ದಾರೆ.
ನೇಪಾಳದ 240 ನೇರ ಚುನಾಯಿತ ಸ್ಥಾನಗಳಲ್ಲಿ ಮಾಜಿ ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ (ಮಾವೋವಾದಿಗಳು) ಪಕ್ಷವು 120 ಸ್ಥಾನಗಳನ್ನು ಗೆದ್ದುಕೊಂಡಿದೆ. ಇತರ ಮೂರು ಸ್ಥಾನಗಳ ಮತಎಣಿಕೆ ಮುಂದುವರಿದಿದ್ದು, ಇದರಲ್ಲಿ ಮಾವೋವಾಗಿಗಳು ಗೆಲ್ಲುವ ಭರವಸೆ ಹೊಂದಿಲ್ಲ.
ನೇರ ಚುನಾಯಿತ ಸ್ಥಾನಗಳು ಸಂಸತ್ತಿನ ಒಟ್ಟು ಶೇ.40 ಆಗಿದ್ದರೂ, ಅರ್ಧಕ್ಕರ್ಧ ಸ್ಥಾನಗಳಲ್ಲಿನ ಗೆಲುವು ಅವರಿಗೆ ಲಭಿಸಿರುವ ಬೆಂಬಲಕ್ಕೆ ಸಾಕ್ಷಿಯಾಗಿದೆ.
ಇತರ ಹೆಚ್ಚುವರಿ ಸ್ಥಾನಗಳನ್ನು, ಪಕ್ಷಗಳು ಗಳಿಸಿರುವ ಮತಗಳ ಆಧಾರದ ಮೇಲೆ ಮಂಜೂರು ಮಾಡಲಾಗುವುದು. ಈ ಸ್ಥಾನಗಳ ಫಲಿತಾಂಶಗಳನ್ನು ಮುಂದಿನವಾರ ನಿರೀಕ್ಷಿಸಲಾಗಿದೆ. ಒಟ್ಟಿನಲ್ಲಿ ಮಾವೋವಾದಿಗಳು ಅಧಿಕಾರದ ಚುಕ್ಕಾಣಿ ಹಿಡಿಯುವ ಎಲ್ಲಾ ಲಕ್ಷಣಗಳು ಗೋಚರವಾಗಿದೆ.
ಅಸ್ಸೆಂಬ್ಲಿಯು ನೇಪಾಳ ಸಂವಿಧಾನವನ್ನು ಮರುರಚಿಸಲಿದೆ. ಏಪ್ರಿಲ್ 10ರಂದು ಚುನಾವಣೆ ನಡೆಯಲಿದೆ.
|