ಆಫ್ಘಾನಿಸ್ತಾನದಲ್ಲಿ ಇರುವ ಪಾಕ್ ರಾಯಭಾರಿಯನ್ನು ಒತ್ತೆಯಾಳಾಗಿ ಇಟ್ಟುಕೊಂಡಿರುವ ಉಗ್ರರು ಲಾಲ್ ಮಸೀದಿಯ ಮೌಲ್ವಿ ಮೌಲಾನಾ ಅಬ್ದುಲ್ ಅಜೀಜ್ ಸೇರಿದಂತೆ ಬೆನಜೀರ್ ಬುಟ್ಟೊ ಅವರ ಹತ್ಯಾ ಆರೋಪಿಗಳನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ.
ಕಳೆದ ಫೆಬ್ರವರಿ 11ರಂದ ಪಾಕ್ ರಾಯಭಾರಿ ತಾರಿಖ್ ಅಜೀಜುದ್ದಿನ್ ಸೇರಿದಂತೆ ಅವರ ಅಂಗರಕ್ಷಕ ಮತ್ತು ವಾಹನ ುಚಾಲಕನನ್ನು ಆಫ್ಘಾಲಿಸ್ತಾನ ಮೂಲದ ಉಗ್ರರು ಅಪಹರಿಸಿದ್ದಾರೆ.
ಬಿಬಿಸಿ ವರದಿ ಮಾಡಿರುವಂತೆ ಉಗ್ರರು, ತೆಹ್ರೀಕ್-ಎ-ನಿಫಾಜ್-ಎ-ಶರೀಯತ್ ಸಂಘಟನೆಯ ಮುಖ್ಯಸ್ಥ ಮೌಲಾನಾ ಸೂಫಿ, ಐವರು ಆಫ್ಘನ್ ಮೂಲದ ತಾಲಿಬಾನ್ ಉಗ್ರರು ಮತ್ತು ಬೆನಜೀರ್ ಬುಟ್ಟೊ ಅವರ ಹತ್ಯೆಯ ಸಂಶಯಿತ ಆರೋಪಿಗಳಾದ ಐತಾಜ್ ಶಹಾ, ಹುಸ್ನೇನ್ ಮತ್ತು ರಫಾಖತ್ ಅವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ.
ತಾಲಿಬಾನ್ ಉಗ್ರರ ಬಿಡುಗಡೆ ಸೇರಿದಂತೆ ಉಗ್ರರು ಮಾಡಿರುವ ಬೇಡಿಕೆಗಳನ್ನು ಈಡೇರಿಸುವಂತೆ ಪಾಕಿಸ್ತಾನದ ರಾಯಭಾರಿ ತಾರಿಖ ಅಜೀಜುದ್ದಿನ್ ಅವರು ಅಲ್ ಅರೇಬಿಯಾ ಟಿವಿ ಚಾನೆಲ್ ಮೂಲಕ ಪ್ರಸಾರವಾದ ವೀಡಿಯೋದಲ್ಲಿ ಕೇಳಿಕೊಂಡಿದ್ದಾರೆ.
ಪಾಕಿಸ್ತಾನದಲ್ಲಿ ಇರುವ ತೆಹ್ರಿಕ್ ಎ ತಾಲಿಬಾನ್ ಸಂಘಟನೆಯ ಮುಖ್ಯಸ್ಥ ಮೌಲ್ವಿ ಉಮರ್ ಅವರು, ಅಜೀಜುದ್ದೀನ್ ಅಪಹರಣದಲ್ಲಿ ತಮ್ಮ ಸಂಘಟನೆಯ ಪಾತ್ರ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
|