ಭಾರತೀಯ ಭೂಪ್ರದೇಶಗಳ ಮೇಲೆ ದಾಳಿ ಮಾಡಲು ಸಾಮರ್ಥ್ಯವಿರುವ ಮತ್ತು ಅಣ್ವಸ್ತ್ರ ಸಿಡಿತಲೆಯನ್ನು ಹೊಂದಿರುವ ಶಾಹೀನ್ -|| ಕ್ಷೀಪಣಿಯನ್ನು ಕಳೆದ ಮೂರು ದಿನಗಳ ಅವಧಿಯಲ್ಲಿ ಪಾಕಿಸ್ತಾನ ಎರಡನೇ ಬಾರಿ ಪರೀಕ್ಷಿಸಿದೆ.
ಪಾಕಿಸ್ತಾನ ಮಿಲಿಟರಿ ಸ್ಟ್ರ್ಯಾಟಜಿಕ್ ಕಮಾಂಡ್ ಭೂಮಿಯಿಂದ ಭೂಮಿಗೆ ದಾಳಿ ಮಾಡುವ ಸಾಮರ್ಥ್ಯ ಹೊಂದಿರುವ ಶಾಹೀನ್-|| ಮತ್ತು ಹಾಟ್ಫ್-|| ಮಾದರಿಯ ಕ್ಷೀಪಣಿಗಳ ಪರೀಕ್ಷಾರ್ಥ ಬಳಸಿದ್ದು, 2000 ಕಿಮಿ ದೂರವನ್ನು ಮೊದಲ ಬಾರಿಗೆ ಯಶಸ್ವಿಯಾಗಿ ಕ್ರಮಿಸಿವೆ ಎಂದು ಮಿಲಿಟರಿ ಪ್ರಕಟಣೆಯಲ್ಲಿ ತಿಳಿಸಿದೆ.
ಪಾಕಿಸ್ತಾನ ನೌಕಾದಳದ ಮುಖ್ಯಸ್ಥ ಆಡ್ಮಿರಲ್ ಮುಹ್ಮದ್ ಅಫ್ಜಲ್ ತಾಹೀರ್ ಸೇರಿದಂತೆ ಇತರ ಹಿರಿಯ ಮಿಲಿಟರಿ ಅಧಿಕಾರಿಗಳು ಕ್ಷೀಪಣಿ ಪರೀಕ್ಷೆಯನ್ನು ವೀಕ್ಷಿಸಿದರು.
ಪಾಕಿಸ್ತಾನ ಮಿಲಿಟರಿ ಪರೀಕ್ಷಿಸಿರುವ ಶಾಹೀನ್-II ಕ್ಷೀಪಣಿಯು ನಿಖರ ಗುರಿಯೊಂದಿಗೆ ಅಣ್ವಸ್ತ್ರ ಮತ್ತು ಸಾಂಪ್ರದಾಯಿಕ ಸಿಡಿತಲೆಗಳನ್ನು ಹೊಂದಿದ್ದು ಅಂದಾಜು 2 ಸಾವಿರ ಕಿಮಿ ದೂರ ಇರುವ ಗುರಿಯನ್ನು ಯಶಸ್ವಿಯಾಗಿ ತಲುಪಬಲ್ಲದು.
|