ಅಮೆರಿಕದ ಅರು ದಿನಗಳ ಪ್ರವಾಸವನ್ನು ಅಂತ್ಯಗೊಳಿಸಿದ ಹದಿನಾರನೇ ಪೊಪ್ ಬೆನಡಿಕ್ಟ್ ಅವರು ಅಮೆರಿಕದಲ್ಲಿ ಇರುವ ಕ್ಯಾಥೋಲಿಕ್ ರಾಜಕಾರಣಿಗಳು ಯಾವುದೇ ಕಾರಣಕ್ಕೂ ಗರ್ಭಪಾತ ಮತ್ತು ಪುರುಷ ಸಲಿಂಗ ವಿವಾಹಕ್ಕೆ ಆಸ್ಪದ ನೀಡಕೂಡದು ಎಂದು ಕರೆ ನೀಡಿದ್ದಾರೆ.
75 ಸಾವಿರ ಜನರು ಸೇರಿದ್ದ ಬೃಹತ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪೋಪ್ ಬೆನಡಿಕ್ಟ್ ಅವರು ರಾಜಕೀಯ ಜೀವನ ಮತ್ತು ನಂಬಿಕೆಗಳ ನಡುವೆ ಸತ್ಯಕ್ಕೆ ದೂರವಾಗಿರುವ ದ್ವಂದ ನಿಲುವುಗಳನ್ನು ಟೀಕಿಸಿ, 65 ದಶಲಕ್ಷಕ್ಕೂ ಹೆಚ್ಚಿಗೆ ಇರುವ ಕ್ಯಾಥೋಲಿಕ್ ಅನುಯಾಯಿಗಳು ವ್ಯಾಟಿಕನ್ ನಿಲುವನ್ನು ಗರ್ಭಪಾತ ಮತ್ತು ಪುರುಷ ಸಲಿಂಗ ವಿವಾಹಗಳ ಕುರಿತು ತಳೆದಿರುವ ನಿಲುವನ್ನು ಅನುಸರಿಸಬೇಕು ಎಂದು ಹೇಳಿದರು.
ಯಾವುದೇ ಸುರಕ್ಷತೆ ಇಲ್ಲದೇ ತಾಯಿಯ ಗರ್ಭದಲ್ಲಿ ಇರುವ ಮಗುವನ್ನು ರಕ್ಷಿಸಬೇಕಾದ ಅನಿವಾರ್ಯತೆ ಇದೆ ಎಂದು ತಮ್ಮ ಭಾಷಣದುದ್ದಕ್ಕೂ 81 ವರ್ಷದ ಪೋಪ್ ಅವರು ಕ್ಯಾಥೋಲಿಕ್ ಸಂಪ್ರದಾಯಗಳನ್ನು ಕಾಪಾಡಬೇಕಿದೆ ಎಂದರು.
ಅರ್ಚಕರಿಂದ ಚಿಕ್ಕ ಮಕ್ಕಳ ಮೇಲೆ ಆಗುತ್ತಿರುವ ಲೈಂಗಿಕ ಅತ್ಯಾಚಾರದ ವಿಷಯವನ್ನು ಪ್ರಸ್ತಾಪಿಸಿದ ಪೋಪ್ ಅವರು ಕಳೆದ ಎರಡು ದಶಕಗಳಲ್ಲಿ ಚರ್ಚ್ ಅಂದಾಜು ಎರಡು ದಶಲಕ್ಷ ಡಾಲರುಗಳನ್ನು ಕಾನೂನು ಶುಲ್ಕ ಮತ್ತು ಪರಿಹಾರ ರೂಪದಲ್ಲಿ ನೀಡಿದೆ. ಇದೇ ಕಾರಣದಿಂದ ಕೆಲವು ಚರ್ಚ್‌ಗಳನ್ನು ಮುಚ್ಚಬೇಕಾದ ಪರಿಸ್ಥಿತಿ ಎದುರಾಯಿತು.
|