ಸರಭಜೀತ್ ಸಿಂಗ್ ಅವರನ್ನು ಉಳಿಸುವ ಪ್ರಯತ್ನ ಮಾಡುತ್ತಿರುವ ಪಾಕಿಸ್ತಾನದ ಮಾಜಿ ಮಾನವಹಕ್ಕುಗಳ ಸಚಿವ ಅನ್ಸಾರ್ ಬರ್ನಿ ಅವರು ಸರಭಜೀತ್ ಸಿಂಗ್ ಅವರ ಕ್ಷಮಾಪಣೆಯ ಪತ್ರವನ್ನು ಅಧ್ಯಕ್ಷ ಪರ್ವೇಜ್ ಮುಷರಫ್ ಅವರಿಗೆ ಸಲ್ಲಿಸಿದ್ದಾರೆ. ಭಾರತೀಯ ನಾಗರಿಕನಾಗಿರುವುದೇ ಸರಭಜೀತ್‌ನ ಅತಿ ದೊಡ್ಡ ಅಪರಾಧ ಎಂದು ಹೇಳಿದ್ದಾರೆ.
ಸರಭಜೀತ್ ಸಿಂಗ್‌ಗೆ ಗಲ್ಲು ಶಿಕ್ಷೆಯಿಂದ ವಿನಾಯಿತಿ ನೀಡುವಂತೆ ಪರ್ವೇಜ್ ಮುಷರಫ್ ಅವರಿಗೆ ಸಲ್ಲಿಸಿರುವ ಕ್ಷಮಾಪಣೆಯ ಪತ್ರದಲ್ಲಿ ಸರಭಜೀತ್ ವಿಧಿಸಲಾಗಿರುವ ಮರಣದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಬೇಕು. ಇಲ್ಲವೇ ಸರಭಜೀತ್ ವಿರುದ್ಧ ದುರ್ಬಲ ಸಾಕ್ಷಿಗಳು ಇದ್ದು, ಅವು ಮರಣದಂಡನೆಯನ್ನು ಪುಷ್ಠಿಕರಿಸುವುದಿಲ್ಲ ಎನ್ನುವ ಆಧಾರದ ಮೇಲೆ ಬಿಡುಗಡೆ ಮಾಡಬೇಕು ಎಂದು ಕೇಳಿಕೊಂಡಿದ್ದಾರೆ.
1990ರ ಬಾಂಬ್ ಸ್ಫೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ನ್ಯಾಯಾಲವು 1991ರಲ್ಲಿ ಭಾರತೀಯ ಮೂಲದ ನಾಗರಿಕ ಸರಭಜೀತ್ ಸಿಂಗ್ ಅವರಿಗೆ ಮರಣ ದಂಡನೆ ಶಿಕ್ಷೆಯನ್ನು ವಿಧಿಸಿದೆ.
ಸಂಯುಕ್ತ ರಾಷ್ಟ್ರ ಸಂಘದ ಮಾನವಹಕ್ಕು ಆಯೋಗದ ಸಲಹಾ ಸಮಿತಿಯ ಸದಸ್ಯರಾಗಿರುವ ಅನ್ಸಾರಿ ಬರ್ನಿ ಅವರು ಸರಭಜೀತ್ ಸಿಂಗ್ ಅವರ ಪರವಾಗಿ ಇಷ್ಟೊಂದು ಸಾಕ್ಷಿಗಳು ಇದ್ದರೂ ಗಲ್ಲು ಶಿಕ್ಷೆ ನೀಡಿರುವುದು ಸರಿಯಲ್ಲ ಎಂದು ವಾದಿಸಿದ್ದಾರೆ.
|