ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಣು ಶಕ್ತಿ ಒಪ್ಪಂದಕ್ಕೆ ಅಮೆರಿಕ, ಯುಎಇ ಸಹಿ
ಅಮೆರಿಕ ಮತ್ತು ಯುಎಇ ಸೋಮವಾರ ನಾಗರಿಕ ಪರಮಾಣು ಇಂಧನ ಬಳಕೆಗೆ ಸಂಬಂಧಿಸಿದಂತೆ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಮೂಲಕ ತೈಲ ಸಮೃದ್ಧ ನೆರೆಹೊರೆ ರಾಷ್ಟ್ರಗಳಿಗೆ ಯುಎಇ ಅತ್ಯುತ್ತಮ ಉದಾಹರಣೆಯಾಗುವುದಾಗಿ ಯುಎಇ ವಿದೇಶಾಂಗ ಸಚಿವ ಎಚ್.ಎಚ್. ಶೇಕ್ ಅಬ್ದುಲ್ಲಾ ಬಿನ್ ಜಾಯೇದ್ ಅಲ್-ನಾಯೇನ್ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಕಾಂಡೋಲೀಸಾ ರೈಸ್ ಅವರಿಗೆ ತಿಳಿಸಿದರು.

ಈ ದ್ವಿಪಕ್ಷೀಯ ಒಪ್ಪಂದವು ಅಣ್ವಸ್ತ್ರ ಪೂರೈಕೆ ರಾಷ್ಟ್ರಗಳೊಂದಿಗೆ ಸಹಕಾರ, ಸಂಬಂಧಗಳನ್ನು ಅಭಿವೃದ್ದಿ ಪಡಿಸಲು ನೆರವಾಗುವುದರಿಂದ ಯುಎಇ ಆಶಯಕ್ಕೆ ಉತ್ತಮ ಉದಾಹರಣೆಯಾಗಿದೆ ಎಂದು ಶೇಖ್ ಅಬ್ದುಲ್ಲಾ ಅವರ ಹೇಳಿಕೆ ಉಲ್ಲೇಖಿಸಿ ಅಧಿಕೃತ ಎಮೀರೇಟ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಯುಎಇನ ದೇಶೀಯ ಅಣು ಶಕ್ತಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಸಹಕಾರ ಹೆಚ್ಚಳದಿಂದ ಉಭಯ ರಾಷ್ಟ್ರಗಳಿಗೂ ಪರಸ್ಪರ ಅನುಕೂಲವಾಗಲಿದೆ ಎಂದು ಅವರು ನುಡಿದರು.ಶಾಂತಿಯುತ ಪರಮಾಣು ಸಹಕಾರಕ್ಕೆ ವ್ಯಾಪಕ ದ್ವಿಪಕ್ಷೀಯ ಒಪ್ಪಂದದ ಬಗ್ಗೆ ಯುಎಇ ಮಾತುಕತೆ ಪ್ರಕ್ರಿಯೆಯಲ್ಲಿ ನಿರತವಾಗಿದೆ ಎಂದು ಸಚಿವರು ಹೇಳಿದರು.

ಈ ಒಪ್ಪಂದದಿಂದ ಉಭಯ ರಾಷ್ಟ್ರಗಳ ನಡುವೆ ಮಹತ್ವದ ಪರಮಾಣು ವಸ್ತುಗಳ ವ್ಯಾಪಾರಕ್ಕೆ ಅಗತ್ಯ ಕಾನೂನಿನ ಆಧಾರ ಸ್ಥಿರಪಡುತ್ತದೆಯೆಂದು ಹೇಳಲಾಗಿದೆ.
ಮತ್ತಷ್ಟು
ನೇಪಾಳ ತೊರೆಯುವುದಿಲ್ಲ: ಜ್ಞಾನೇಂದ್ರ
ಭದ್ರತಾ ಮಂಡಳಿ ಸದಸ್ಯತ್ವ ಭಾರತ ಪರ ಚಿಲಿ
ಸರಭಜೀತ್ ಕ್ಷಮಾಪಣೆಗೆ ಬರ್ನಿ ಅರ್ಜಿ
ಪೋಪ್ ಬೆನಡಿಕ್ಟ್‌ರ ಅಮೆರಿಕ ಪ್ರವಾಸ ಮುಕ್ತಾಯ
ಪಾಕ್‌ನಿಂದ ಎರಡನೇ ಬಾರಿ ಶಾಹೀನ್ ಪರೀಕ್ಷೆ
ಆಫ್ಘಾನಿಸ್ತಾನ: ಮೌಲಾನಾ ಅಜೀಜ್ ಬಿಡುಗೆಡಗೆ ಉಗ್ರರ ಒತ್ತಾಯ