ಇರಾಕ್ ಯುದ್ಧದಲ್ಲಿ ಪಾಲ್ಗೊಂಡಿರುವ ಪಾಶ್ಚಿಮಾತ್ಯ ರಾಷ್ಟ್ರಗಳನ್ನು ಗುರಿಯಾಗಿರಿಸಿಕೊಂಡು ಆಲ್ ಖೈದಾ ತನ್ನ ದಾಳಿಯನ್ನು ಮುಂದುವರಿಸಲಿದೆ ಎಂದು ಒಸಾಮಾ ಬಿನ್ ಲಾಡೇನ್ ನಿಕಟವರ್ತಿ ಬಿಡುಗಡೆ ಮಾಡಿರುವ ವೀಡಿಯೋ ಟೇಪ್‌ನಲ್ಲಿ ಹೇಳಿದ್ದಾನೆ.
ಆಲ್ ಖೈದಾ ಉಗ್ರರೊಂದಿಗೆ ನಡೆದ ಸಂಭಾಷಣೆಯಂತಿರುವ ವೀಡಿಯೋ ಟೇಪ್‌ನ್ನು ಇಸ್ಲಾಮಿಕ್ ವೆಬ್ ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ವೀಡಿಯೋ ಟೇಪ್‍ನಲ್ಲಿ ಒಸಾಮಾ ನಿಕಟವರ್ತಿ ಅಲ್ ಜವಾಹರಿ ಮಾತನಾಡಿದ ಹಾಗಿದ್ದು. ಟೇಪ್ ತುಂಬ ಹಳೆಯದು ಆಗಿರಬಹುದು ಎಂಬ ಸಂಶಯ ವ್ಯಕ್ತಪಡಿಸಲಾಗಿದೆ.
ಉಗ್ರವಾದಿಗಳ ಇಂಟರ್ನೆಟ್ ತಾಣದ ಮೂಲಕ ಆಲ್ ಜವಾಹರಿಗೆ ತಲುಪಿರುವ 900ಕ್ಕೂ ಹೆಚ್ಚು ಪ್ರಶ್ನೆಗಳಿಗೆ ಉತ್ತರಿಸಲಾಗಿದೆ. ಈ ಎಲ್ಲ ಪ್ರಶ್ನೆಗಳನ್ನು ಆಲ್ ಖೈದಾ ಬೆಂಬಲಿಗರು ಮತ್ತು ಪತ್ರಕರ್ತರು ಡಿಸೆಂಬರ್ ತಿಂಗಳಿನಲ್ಲಿ ಆಲ್ ಖೈದಾದ ನಾಯಕರಿಗೆ ಹಾಕಿದ್ದರು.
ಅಮೆರಿಕ ನೆತೃತ್ವದಲ್ಲಿ ಇರಾಕ್ ಮೇಲೆ ದಾಳಿ ಮಾಡಿದ ಪಾಶ್ಚಿಮಾತ್ಯ ರಾಷ್ಟ್ರಗಳನ್ನು ಗುರಿಯಾಗಿರಿಸಿಕೊಂಡು ದಾಳಿ ಮಾಡುವುದು ನಮ್ಮ ಕರ್ತವ್ಯ. ಎಕೆಂದರೆ ಮುಸ್ಲಿಂ ರಾಷ್ಟ್ರದ ವಿರುದ್ಧ ದಾಳಿ ಮಾಡುವ ಯಾವುದೇ ರಾಷ್ಟ್ರಕ್ಕೆ ಆಲ್ ಖೈದಾದ ಕಾರ್ಯಕರ್ತರು ಉತ್ತರ ನೀಡಬೇಕು ಎಂದು ಜವಾಹಿರಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾನೆ.
ಕಾಫೀರಗಳ ಕಾನೂನಿನಡಿಯಲ್ಲಿ ಬರುವ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಯಾವುದೇ ಮುಸಲ್ಮಾನ ಶಾಶ್ವತವಾಗಿ ವಾಸಿಸುವುದು ಇಸ್ಲಾಮ್ ಧರ್ಮಕ್ಕೆ ವಿರುದ್ಧವಾದುದು ಎಂದು ಇನ್ನೊಂದು ಪ್ರಶ್ನೆಗೆ ಜವಾಹಿರಿ ಉತ್ತರ ನೀಡಿದ್ದಾನೆ.
|