ಒಲಿಂಪಿಕ್ ಜ್ಯೋತಿಯ ಪಯಣದ ವಿರುದ್ಧ ಪ್ರತಿಭಟಿಸುತ್ತಿದ್ದ ಎಂಟು ಜನ ಟಿಬೆಟ್ ಪ್ರತಿಭಟನಾಕಾರರನ್ನು ಇಂಡೊನೇಷಿಯಾದ ಪೊಲೀಸರು ಕೆಲ ತಮ್ಮ ವಶಕ್ಕೆ ತೆಗೆದುಕೊಂಡರು.
ರಾಷ್ಟ್ರೀಯ ರಾಜಧಾನಿ ಜಕಾರ್ತಾದ ಪ್ರಮುಖ ಕ್ರೀಡಾ ಸಂಕೀರ್ಣದಲ್ಲಿ ಆಯ್ದ ನಾಗರಿಕರ ನಡುವೆ ಒಲಿಂಪಿಕ್ ಜ್ಯೋತಿಯ ರಿಲೆ ಪ್ರಾರಂಭವಾಯಿತು. ಜಕಾರ್ತಾದ ಗವರ್ನರ್ ಅವರು ಜ್ಯೋತಿ ರಿಲೆಗೆ ಹಸಿರು ನಿಶಾನೆ ತೋರಿದರು.
ಒಲಿಂಪಿಕ್ ಜ್ಯೋತಿಯು ಜಕಾರ್ತಾದ ಪ್ರಮುಖ ಬೀದಿಗಳಲ್ಲಿ ಸಾಗದೇ ಮೈದಾನವನ್ನು ಐದು ಬಾರಿ ಪ್ರದಕ್ಷಿಣೆ ಹಾಕುವ ಮೂಲಕ ಇಂಡೊನೇಷಿಯಾದಲ್ಲಿನ ಒಲಿಂಪಿಕ್ ಜ್ಯೋತಿಯ ರಿಲೆ ಅಂತ್ಯಗೊಂಡಿತು. ರಿಲೆಯಲ್ಲಿ ಒಟ್ಟು 80 ಜನರು ಒಲಿಂಪಿಕ್ ಜ್ಯೋತಿಯನ್ನು ಹಿಡಿದು ಸಾಗಿದರು.
ಇಂಡೊನೇಷಿಯಾದಲ್ಲಿ ಇರುವ ಚೀನಾದ ರಾಯಭಾರಿ ಕಚೇರಿಯು ರಿಲೆಯ ಕ್ರಮವನ್ನು ಕಡಿತಗೊಳಿಸಿ ಆಯ್ದ ಐದು ಸಾವಿರ ಅತಿಥಿಗಳಿಗೆ ಮಾತ್ರ ರಿಲೆಯ ಸಮಾರಂಭದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಬೇಕು ಎಂದು ಕೇಳಿಕೊಂಡಿತ್ತು. ಇದಕ್ಕೂ ಮುನ್ನ ಪಾಕಿಸ್ತಾನವು ಭದ್ರತೆಯ ಕಾರಣ ನೀಡಿ ಒಲಿಂಪಿಕ್ ರಿಲೆ ಸಮಾರಂಭವನ್ನು ಆಯ್ದ ಅತಿಥಿಗಳಿಗೆ ಮಾತ್ರ ಆಯೋಜಿಸಿತ್ತು.
|