ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯ ಸ್ಪರ್ಧೆಯಿಂದ ಹಿಂದೆ ಬೀಳುವ ಆತಂಕ ಎದುರಿಸುತ್ತಿದ್ದ ಹಿಲರಿ ಕ್ಲಿಂಟನ್ ಅವರು ಪೆನ್ಸಿಲ್ವೆನಿಯಾದ ಪ್ರೈಮರಿ ಚುನಾವಣೆಯಲ್ಲಿ ಭಾರಿ ಜಯ ಸಾಧಿಸುವ ಮೂಲಕ ಅಮೆರಿಕದ ಅಧ್ಯಕ್ಷೀಯ ಪದವಿಗೆ ನಡೆಯಲಿರುವ ಚುನಾವಣೆ ಕಣದಲ್ಲಿ ಉಳಿದುಕೊಂಡಿದ್ದಾರೆ. ಪೆನ್ಸಿಲ್ವೆನಿಯಾದಲ್ಲಿ ಸಾಧಿಸಿದ ಭಾರಿ ಗೆಲುವಿನಿಂದ ಉತ್ತೇಜಿತರಾದ ಹಿಲರಿ ಕ್ಲಿಂಟನ್ ಅವರು, ಕೆಲವರು ಚುನಾವಣಾ ಕಣದಿಂದ ಹಿಂದೆ ನಾನು ಬೀಳುತ್ತೇನೆ ಎಂದು ಭಾವಿಸಿದ್ದರು. ಅಮೆರಿಕದ ಜನತೆ ಪಲಾಯನ ಮಾಡುವುದಿಲ್ಲ ಎನ್ನುವ ಅರ್ಥದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪೆನ್ಸಿಲ್ವೆನಿಯಾದ ಪ್ರೈಮರಿ ಚುನಾವಣೆಯ ನಂತರ ಇಂಡಿಯಾನಾ ಮತ್ತು ನಾರ್ಥ್ ಕೆರೊಲಿನಾದಲ್ಲಿ ಪ್ರೈಮರಿ ಚುನಾವಣೆಗಳು ನಡೆಯಲಿವೆ. ಈ ಎರಡು ಪ್ರಾಂತ್ಯಗಳಲ್ಲಿ ಕಪ್ಪು ವರ್ಣಿಯರು ಬಹುಸಂಖ್ಯಾತರಾಗಿರುವ ಕಾರಣ ಕಪ್ಪು ಜನಾಂಗದ ಅಭ್ಯರ್ಥಿ ಬರಾಕ್ ಒಬಾಮಾ ಸ್ಪಷ್ಟ ಗೆಲುವು ಸಾಧಿಸಬಹುದು ಎಂಬ ನಿರೀಕ್ಷೆ ಇದೆ.
ಪೆನ್ಸಿಲ್ವೆನಿಯಾದಲ್ಲಿ ಪರಾಭವ ಅನುಭವಿಸಿದ ನಂತರ ಬರಾಕ್ ಒಬಾಮಾ ಅವರು ಈಗ ನನ್ನನ್ನು ಚುನಾವಣಾ ಕಣದಲ್ಲಿ ಇಂಡಿಯಾನಾ ಮತ್ತು ನಾರ್ಥ್ ಕೆರೋಲಿನಾ ಪ್ರಾಂತ್ಯದವರು ಮಾತ್ರ ಉಳಿಸಬಹುದು ಎಂದು ಹೇಳಿದ್ದಾರೆ.
|