ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇಸ್ರೇಲ್‍‌‍ಗೆ ಮಾನ್ಯತೆ ನೀಡಲಾಗದು: ಖಾಲೀದ್
ಇಸ್ರೇಲ್ ಮತ್ತು ಹಮಾಸ್ ನಡುವಿನ ದ್ವೇಷ ಮುಂದುವರಿದಿರುವಂತೆಯೇ 1967ರ ಗಡಿಭಾಗದ ಪ್ಯಾಲೀಸ್ತೀನ್ ರಾಜ್ಯವನ್ನು ಒಪ್ಪಿಕೊಳ್ಳಲು ಸಿದ್ದ ಎಂದು ಹಮಾಸ್ ಹೇಳಿದ್ದು, ಇಸ್ರೇಲ್ ಅನ್ನು ನಾವು ಮಾನ್ಯತೆ ಮಾಡುವುದಿಲ್ಲ ಎಂದು ಇಸ್ಲಾಮಿಸ್ಟ್ ಚಳವಳಿಯ ಮಾಜಿ ವರಿಷ್ಠ ಖಾಲೀದ್ ಮೇಶಾಲ್ ತಿಳಿಸಿದ್ದಾರೆ.

ಆ ನಿಟ್ಟಿನಲ್ಲಿ ನಾವು ಜೂನ್ 4, 1967ರ ಗಡಿಭಾಗದ ಜೆರುಸಲೇಂ ಜತೆಗೂಡಿದಂತೆ ಪ್ಯಾಲೇಸ್ತೀನ್ ರಾಜ್ಯವನ್ನು ಒಪ್ಪಲು ಸಿದ್ದರಿದ್ದೇವೆ, ಹಾಗೆಯೇ ಪ್ಯಾಲೇಸ್ತೇನಿಯನ್ ನಿರಾಶ್ರಿತರು ವಾಪಸಾಗುವ ಹಕ್ಕು ಪಡೆಯುತ್ತಾರೆ, ಆದರೆ ಅದು ಇಸ್ರೇಲ್ ಮಾನ್ಯತೆಯೊಂದಿಗೆ ಅಲ್ಲ ಎಂದು ಸ್ಪಷ್ಟಪಡಿಸಿದೆ.

ವಿವಾದಕ್ಕೆ ಸಂಬಂಧಿಸಿದಂತೆ ಅಮೆರಿಕದ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್ ಅವರೊಂದಿಗೆ ಡಮಾಸ್ಕ್‌ಸ್‍‌‌ನಲ್ಲಿ ಎರಡು ಸಭೆಗಳನ್ನು ನಡೆಸಿದ ಬಳಿಕ ಮೇಶಲ್ ಪ್ರಥಮ ಬಾರಿಗೆ ಸಾರ್ವಜನಿಕವಾಗಿ ಟೀಕಿಸಿದ್ದಾರೆ. ಇಸ್ರೇಲ್ ಹಕ್ಕನ್ನು ಹಮಾಸ್ ಒಪ್ಪಿಕೊಳ್ಳುತ್ತದೆಂದು ಸೋಮವಾರ ಹೇಳಿದವರು ಯಾರು ಎಂದು ಅವರು ಪ್ರಶ್ನಿಸಿದ್ದಾರೆ.

ಇಸ್ರೇಲ್ ಜತೆ ನಾವು ನೇರ ಮಾತುಕತೆಯನ್ನು ನಾವು ತಿರಸ್ಕರಿಸುತ್ತೇವೆ ಎಂದು ಕಟುವಾಗಿ ಪ್ರತಿಕ್ರಿಯಿಸಿ, ಪ್ಯಾಲಿಸ್ತೇನಿಯನ್ ಮುಖಂಡರು ಈಗಾಗಲೇ ಹಮಾಸ್-ಇಸ್ರೇಲ್‌‌ ಪರ ವಹಿಸಿ ಮಾತನಾಡಿರುವ ಅಮೆರಿಕದ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್ ಅವರು ಸಲಹೆಯನ್ನು ತಿರಸ್ಕರಿಸಿರುವುದಾಗಿ ಹಮಾಸ್ ವರಿಷ್ಠ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ಮತ್ತಷ್ಟು
ಅಧ್ಯಕ್ಷೀಯ ಚುನಾವಣೆ: ಪೆನ್ಸಿಲ್ವೆನಿಯಾದಲ್ಲಿ ಹಿಲರಿ ಜಯಭೇರಿ
ಒಲಿಂಪಿಕ್ ಜ್ಯೋತಿಯ ವಿರುದ್ದ ಇಂಡೊನೇಷಿಯಾದಲ್ಲಿ ಪ್ರತಿಭಟನೆ
ಪಾಶ್ಟಿಮಾತ್ಯ ರಾಷ್ಟ್ರಗಳ ಮೇಲೆ ದಾಳಿ: ಆಲ್ ಖೈದಾ
ಅಣು ಶಕ್ತಿ ಒಪ್ಪಂದಕ್ಕೆ ಅಮೆರಿಕ, ಯುಎಇ ಸಹಿ
ನೇಪಾಳ ತೊರೆಯುವುದಿಲ್ಲ: ಜ್ಞಾನೇಂದ್ರ
ಭದ್ರತಾ ಮಂಡಳಿ ಸದಸ್ಯತ್ವ ಭಾರತ ಪರ ಚಿಲಿ