ಕಳೆದ ಎರಡು ದಶಕಗಳಿಂದ ಪರಿಹಾರವಾಗದೇ ಉಳಿದಿರುವ ಶಾಂತಿ ಪ್ರಕ್ರಿಯೆ ಮುರಿದು ಬಿದ್ದ ಕಾರಣ ಕಳೆದ ಒಂದು ವಾರದ ಅವಧಿಯಲ್ಲಿ ಉಗಾಂಡದ ಲಾರ್ಡ್ಸ್ ರೆಸಿಟೆನ್ಸಿ ಆರ್ಮಿ(ಎಲ್‌ಆರ್‌ಎ) ಉಗ್ರರು ಸುಮಾರು 350ಕ್ಕೂ ಹೆಚ್ಚು ಜನರನ್ನು ಅಪಹರಿಸಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾನವ ಹಕ್ಕು ಸಂಘಟನೆ ತಿಳಿಸಿದೆ.
ಅಮ್ನೆಸ್ಟಿ ಇಂಟರನ್ಯಾಷನಲ್ ಹೇಳಿಕೆಯ ಪ್ರಕಾರ, ಎಲ್‌ಆರ್‌ಎ ಬಂಡುಕೋರರು ನೆರೆಯ ಸೆಂಟ್ರಲ್ ಆಫ್ರಿಕ ರಿಪಬ್ಲಿಕ್(ಸಿಎಆರ್), ಡೆಮೋಕ್ರೆಟಿಕ್ ರಿಪಬ್ಲಿಕ್ ಆಫ್ ಕಾಂಗೋ(ಡಿಆರ್‌ಸಿ) ಮತ್ತು ದಕ್ಷಿಣ ಸೂಡಾನ್ ಪ್ರದೇಶಗಳಿಂದ ಜನರನ್ನು ಅಪಹರಿಸಿರುವುದಾಗಿ ತಿಳಿಸಿದೆ.
ಅಪಹೃತಗೊಂಡವರಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದು, ಅವರನ್ನು ಕೂಲಿಗೆ ಹಾಗೂ ಲೈಂಗಿಕ ಗುಲಾಮಗಿರಿಗೆ ಬಳಸಿ ಕೊಳ್ಳಲಾಗುತ್ತಿರುವುದಾಗಿ ತಿಳಿಸಿದ ಸರಕಾರ, ಬಂಧಿತರನ್ನು ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಸರಕಾರ ಪ್ರಯತ್ನಿಸಲಿದೆ ಎಂದು ಅಮ್ನೆಸ್ಟಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಆಫ್ರಿಕಾದ ದೀರ್ಘ ಕಾಲದ ಸಮಸ್ಯೆಯೊಂದು ಬಗೆಹರಿಯುವುದಾಗಿ ನಿರೀಕ್ಷಿಸಲಾಗಿತ್ತು. ಆ ನಿಟ್ಟಿನಲ್ಲಿ ಎಲ್‌ಆರ್‌ಎ ಮುಖಂಡ ಜೋಸೆಫ್ ಕೋನಿ ಅವರೊಂದಿಗೆ ಮಾತುಕತೆ ನಡೆಸಿದರೂ ಅದು ವಿಫಲಗೊಂಡಿತ್ತು.
ಉಗಾಂಡದ ಲೋರ್ಡ್ಸ್ ರೆಸಿಟೆನ್ಸಿ ಆರ್ಮಿ(ಎಲ್‌ಆರ್‌ಎ) ಬಂಡುಕೋರರು ಈವರೆಗೆ ನಡೆಸಿದ ರಕ್ತಪಾತದಲ್ಲಿ ಸುಮಾರು ಹತ್ತು ಸಾವಿರಕ್ಕೂ ಅಧಿಕ ಜನರು ಬಲಿಯಾಗಿದ್ದರು.
|