ಅಫಘಾನಿಸ್ತಾನ ಅತಿಕ್ರಮಣದ ಹಿನ್ನೆಲೆಯಲ್ಲಿ ಪಾಕಿಸ್ತಾನ ಸರಕಾರವು ಬಂಧಿಸಿದ್ದ ತಾಲಿಬಾನ್ ಉಗ್ರಗಾಮಿ ಸಂಘಟನೆಯ ಮುಖಂಡ ನಾದ ಸೂಫಿ ಮುಹಮ್ಮದ್ನನ್ನು ಬಿಡುಗಡೆಗೊಳಿಸುವಂತೆ ಪಾಕ್ ಸರಕಾರವು ಆದೇಶ ಹೊರಡಿಸಿದೆ.
ಪ್ರಸ್ತುತ ಮುಹಮ್ಮದ್ ಅವರನ್ನು 2002ರಲ್ಲಿ ಬಂಧಿಸಲಾಗಿದ್ದು, ಕಳೆದ ಐದು ತಿಂಗಳ ಹಿಂದೆ ಅನಾರೋಗ್ಯ ನಿಮಿತ್ತ ಸೂಫಿಯನ್ನು ಪೇಶಾವರ ಆಸ್ಪತ್ರೆ ಯೊಂದಕ್ಕೆ ದಾಖಲಿಸಲಾಗಿತ್ತು.
ಇದೀಗ ಪಾಕ್ ಸರಕಾರವು ತಕ್ಷಣ ಮುಹಮ್ಮದ್ನನ್ನು ಬಂಧಮುಕ್ತಗೊಳಿಸಬೇಕೆಂಬ ಆದೇಶ ಹೊರಡಿಸಿದ ಮೇರೆಗೆ ಅವರನ್ನು ಬಿಡುಗಡೆಗೊಳಿಸಲಾ ಯಿತು ಎಂಬುದಾಗಿ ಪೇಶಾವರ ಬಂಧಿಖಾನೆಯ ಸಹಾಯಕ ವರಿಷ್ಠಾಧಿಕಾರಿಯಾದ ಅಜ್ಮಲ್ ಖಾನ್ ಹೇಳಿದ್ದಾರೆ. ಆ ಬಗ್ಗೆ ಯಾವುದೇ ಹೆಚ್ಚಿನ ವಿಷಯಗಳು ಬಹಿರಂಗಗೊಂಡಿಲ್ಲ.
ತೆಹರಿಕ್ ನಿಫಾಜ್- ಇ-ಶರಿಯಾ ಮೊಹಮ್ಮದ್ ಎಂಬ ಸಂಘಟನೆಯ ಸಂಸ್ಥಾಪಕನಾದ ಮುಹಮ್ಮದ್ 2001ನೇ ಇಸವಿಯಲ್ಲಿ ಅಮೆರಿಕದ ವಿರುದ್ದ ಹೋರಾಟ ನಡೆಸಲು ಸಾವಿರಾರು ಉಗ್ರರನ್ನು ಅಫಘಾನಿಸ್ತಾನಕ್ಕೆ ಕಳುಹಿಸಿದ್ದ. ಅಫಘಾನಿಸ್ತಾನದ ಮೇಲೆ ಅತಿಕ್ರಮಣ ನಡೆಸುವಲ್ಲಿ ಪ್ರಧಾನ ಪಾತ್ರ ವಹಿಸಿದ ಈ ತಾಲಿಬಾನ್ ಮುಖಂಡನು ಪಾಕಿಸ್ತಾನದ ಸ್ವಾತ್ ಕಣಿವೆಯ ಉಗ್ರರ ಮುಖಂಡನ ನಿಕಟ ಸಂಬಂಧಿಯಾಗಿದ್ದಾನೆ.
ಮುಹಮ್ಮದ್ನ ಅಳಿಯನಾದ ಮೌಲಾನಾ ಫಜುಲುಲ್ಲಾ ಸ್ವಾತ್ ಕಣಿವೆಯ ಭೂಭಾಗದಲ್ಲಿ ಆಡಳಿತ ನಡೆಸುತ್ತಿದ್ದು, ಕಳೆದ ವರ್ಷ ಪಾಕಿಸ್ತಾನದ ಸೇನಾಪಡೆಯು ಪ್ರಸ್ತುತ ಪ್ರದೇಶವನ್ನು ವಶಪಡಿಸಿಕೊಂಡಿತ್ತು. ಅದರಂತೆಯೇ ಈ ತಾಲಿಬಾನ್ ಉಗ್ರ ಸಂಘಟನೆಯು ಪಾಕಿಸ್ತಾನದಲ್ಲಿಯೂ ತಾಲಿಬಾನ್ ರೀತಿ ನೀತಿಗಳನ್ನು ಅನುಸರಿಸುವಂತೆ ಒತ್ತಡ ಹೇರುತ್ತಿವೆ.
ಏತನ್ಮಧ್ಯೆ ಮುಹಮ್ಮದ್ ಅವರ ಬಂಧಮುಕ್ತ ವಿಷಯಕ್ಕೆ ಸಂಬಂಧಿತ ಸರಕಾರದ ತೀರ್ಮಾನದಲ್ಲಿ ಸೇನಾಪಡೆ ಭಾಗಿಯಾಗಿಲ್ಲ ಎಂಬುದಾಗಿ ಸೇನಾ ವಕ್ತಾರ ಮೇಜರ್ ಜನರಲ್ ಅಥರ್ ಅಬ್ಬಾಸ್ ತಿಳಿಸಿದ್ದಾರೆ.
|