ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಲ್‌ಟಿಟಿಇ ಶ್ರೀಲಂಕಾ ಬಿಕ್ಕಟ್ಟು 150 ಸಾವು
ಶ್ರೀಲಂಕಾ ಮತ್ತು ಎಲ್‌ಟಿಟಿಇ ನಡುವೆ ಉತ್ತರ ಜಾಫ್ನಾದಲ್ಲಿ ನಡೆದ ಘರ್ಷಣೆಯಲ್ಲಿ ನೂರೈವತ್ತು ಹೆಚ್ಚು ಸಾವು ನೋವುಗಳು ವರ್ಷದ ಅವಧಿಯಲ್ಲಿ ಸಂಭವಿಸಿವೆ ಎಂದು ಶ್ರೀಲಂಕಾದ ಮಿಲಿಟರಿ ಮೂಲಗಳು ಹೇಳಿವೆ.

ನೂರಕ್ಕೂ ಹೆಚ್ಚು ಎಲ್‌ಟಿಟಿಇ ಉಗ್ರರು ಶ್ರೀಲಂಕಾದ ಮಿಲಿಟರಿ ಪಡೆಗೆ ಬಲಿಯಾಗಿದ್ದು. ಎಲ್‌ಟಿಟಿಇ ಉಗ್ರರು ನಡೆಸಿದ ಪ್ರತಿದಾಳಿಯಲ್ಲಿ 43 ಶ್ರಿಲಂಕಾದ ಜವಾನರು ಹತರಾಗಿದ್ದಾರೆ. ಮಿಲಿಟರಿ ಕಾರ್ಯಾಚರಣೆಯಲ್ಲಿ 33 ಯೋಧರು ಕಾಣೆಯಾಗಿದ್ದಾರೆ ಎಂದು ಮಿಲಿಟರಿ ವಕ್ತಾರರು ಮಾಹಿತಿ ನೀಡಿದ್ದಾರೆ.

ಶ್ರೀಲಂಕಾದ ಮಿಲಿಟರಿ ಪಡೆಗಳು ನೀಡಿರುವ ಮಾಹಿತಿಗೆ ವ್ಯತಿರಿಕ್ತವಾಗಿ ಎಲ್‌ಟಿಟಿಇ ಹೇಳಿಕೆ ನೀಡಿದ್ದು, ನೂರಕ್ಕೂ ಹೆಚ್ಚು ಯೋಧರನ್ನು ಶ್ರೀಲಂಕಾದ ಮಿಲಿಟರಿ ಪಡೆ ಕಳೆದುಕೊಂಡಿದ್ದು, ಎಲ್‌ಟಿಟಿಇ ಸಂಘಟನೆಯಲ್ಲಿ ಕೇವಲ 16 ಸಾವುಗಳು ಸಂಭವಿಸಿವೆ. 500ಕ್ಕೂ ಹೆಚ್ಚು ಜವಾನರು ಎಲ್‌ಟಿಟಿಇ ದಾಳಿಗೆ ಸಿಲುಕಿ ಗಾಯಗೊಂಡಿದ್ದಾರೆ ಎಂದು ಎಲ್‌ಟಿಟಿಇ ಹೇಳಿದೆ.

ಒಂದು ವರ್ಷದ ಅವಧಿಯಲ್ಲಿ ಒಟ್ಟು 43 ಯೋಧರು ತಮ್ಮ ಪ್ರಾಣವನ್ನು ಬಲಿದಾನ ಮಾಡಿದ್ದು, 120 ಸೈನಿಕರು ಯುದ್ಧದಲ್ಲಿ ಗಾಯಗೊಂಡಿದ್ದಾರೆ. ಎದುರಾಳಿ ಪಡೆಯಲ್ಲಿ ನೂರಕ್ಕೂ ಹೆಚ್ಚು ಸಾವುಗಳ ಜೊತೆಗೆ ಅಪಾರ ಪ್ರಮಾಣದಲ್ಲಿ ಎಲ್‌ಟಿಟಿಇ ಉಗ್ರರು ಗಾಯಗೊಂಡಿದ್ದಾರೆ. ಬುಧವಾರ ರಾತ್ರಿ ಎರಡು ಪಡೆಗಳ ನಡುವೆ ಭೀಕರ ಕದನ ಪ್ರಾರಂಭವಾಗಿದ್ದು, ಒಟ್ಟು 25 ಉಗ್ರರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಮತ್ತಷ್ಟು
ದೂರದ ಚಿಲಿಯಲ್ಲಿ ಕೇಳಿ ಬರುವ ಜನಗಣ ಮನ...
ಮಹ್ಮದ ಸೂಫಿ ಬಿಡುಗಡೆಗೆ ಪಾಕ್ ಆದೇಶ
ಉಗಾಂಡ ಉಗ್ರರಿಂದ ಮುನ್ನೂರಕ್ಕೂ ಹೆಚ್ಚು ಅಪಹರಣ ಪ್ರಕರಣ
ಇಸ್ರೇಲ್‍‌‍ಗೆ ಮಾನ್ಯತೆ ನೀಡಲಾಗದು: ಖಾಲೀದ್
ಅಧ್ಯಕ್ಷೀಯ ಚುನಾವಣೆ: ಪೆನ್ಸಿಲ್ವೆನಿಯಾದಲ್ಲಿ ಹಿಲರಿ ಜಯಭೇರಿ
ಒಲಿಂಪಿಕ್ ಜ್ಯೋತಿಯ ವಿರುದ್ದ ಇಂಡೊನೇಷಿಯಾದಲ್ಲಿ ಪ್ರತಿಭಟನೆ