ಭಾರತದೊಂದಿಗೆ ಮಾಡಿಕೊಂಡಿರುವ ನಾಗರಿಕ ಅಣು ಒಪ್ಪಂದವು 123 ಒಪ್ಪಂದದ ಅನ್ವಯ ಜಾರಿಗೆ ಬರಲಿದೆ ವಿನಃ ಅಮೆರಿಕದಲ್ಲಿ ಇರುವ ಹೈಡ್ ಆಕ್ಟ್ ಪ್ರಕಾರ ಅಲ್ಲ ಎಂದು ಅಮೆರಿಕದ ಸಹಾಯಕ ಗೃಹ ಕಾರ್ಯದರ್ಶಿ ರಿಚರ್ಡ್ ಬೌಷರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ರಿಚರ್ಡ್ ಬೌಷರ್ ಅವರು ಈ ಹಿಂದೆ ತಾನು 123 ಒಪ್ಪಂದವು ಹೈಡ್ ಆಕ್ಟ್ ಪ್ರಕಾರ ಜಾರಿಗೆ ಬರಲಿದೆ ಎಂದು ಹೇಳಿಲ್ಲ ಎಂದು ವಾದಿಸಿದರು. ಹೈಡ್ ಆಕ್ಟ್ ಮತ್ತು ಭಾರತ ಮತ್ತು ಅಮೆರಿಕದ ನಡುವೆ ಮಾಡಿಕೊಂಡಿರುವ 123 ಒಪ್ಪಂದದ ನಡುವೆ ಯಾವುದೇ ಸಂಬಂಧವಿಲ್ಲ.
ಹೈಡ್ ಆಕ್ಟ್ ಅಮೆರಿಕದ ನೆಲಕ್ಕೆ ಮಾತ್ರ ಸಿಮೀತವಾದದ್ದು. ಇಲ್ಲದೇ ಹೋದಲ್ಲಿ ಅಮೆರಿಕ, ಭಾರತದೊಂದಿಗೆ ಒಪ್ಪಂದ ಮಾಡಿಕೊಳ್ಳುವುದು ಸಾಧ್ಯವಾಗದ ಸಂಗತಿಯಾಗುತ್ತಿತ್ತು. ಹೈಡ್ ಆಕ್ಟ್ ಅಡಿಯಲ್ಲಿ ಅಮೆರಿಕ ಒಪ್ಪಂದಕ್ಕೆ ಸಹಿ ಹಾಕಿದೆ. ಮಾಡಿಕೊಳ್ಳಲಾಗಿರುವ ಒಪ್ಪಂದಕ್ಕೆ ಮಾತ್ರ ಎರಡು ದೇಶಗಳು ಬದ್ಧವಾಗಿರಬೇಕು. ಹೈಡ್ ಆಕ್ಟ್ ಅಮೆರಿಕಕ್ಕೆ ಮಾತ್ರ ಅನ್ವಯವಾಗಲಿದೆ.
ಭಾರತ ಮತ್ತು ಅಮೆರಿಕ ನಡುವೆ ಮಾಡಿಕೊಳ್ಳಲಾಗುತ್ತಿರುವ ನಾಗರಿಕ ಅಣು ಒಪ್ಪಂದದಲ್ಲಿ ಯಾವುದೇ ರಾಜಕೀಯ ಅಡಗಿಲ್ಲ ಎಂದು ಹೇಳಿರುವ ಅಮೆರಿಕದ ಹಿರಿಯ ಅಧಿಕಾರಿಗಳೊಬ್ಬರು. ಅಮೆರಿಕದ ಅಧ್ಯಕ್ಷೀಯ ಚುನಾವಣೆಗಳು ಸಮೀಪಿಸುತ್ತಿರುವ ಕಾರಣ ಅಧ್ಯಕ್ಷ ಬುಷ್ ಅವರು ಒಪ್ಪಂದ ಶೀಘ್ರ ಜಾರಿಯಾಗುವುದಕ್ಕೆ ಒಲವು ತೋರಿದ್ದಾರೆ ಎಂದು ಹೇಳಿದರು.
|