ನೇಪಾಳದಲ್ಲಿ ನಡೆದ ಐತಿಹಾಸಿಕ ಸಾರ್ವತ್ರಿಕ ಚುನಾವಣೆಯ ಮತಎಣಿಕೆ ಕಾರ್ಯ ಗುರುವಾರ ಮುಕ್ತಾಯಗೊಳ್ಳು ನಿರೀಕ್ಷೆಯಿದ್ದು, ಈವ ರೆಗಿನ ಫಲಿತಾಂಶದಲ್ಲಿ ಮಾಜಿ ಮಾವೋವಾದಿ ಬಂಡುಕೋರರು ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಸರಕಾರ ರಚನೆ ಮಾಡುವಲ್ಲಿ ಕಾರ್ಯಪ್ರವೃತ್ತವಾಗಿವೆ.
2006ರಲ್ಲಿ ಮಾವೋವಾದಿ ಮತ್ತು ಪ್ರಮುಖ ರಾಜಕೀಯ ಪಕ್ಷಗಳೊಂದಿಗೆ ನಡೆದ ಶಾಂತಿ ಮಾತುಕತೆ ಪ್ರಕ್ರಿಯೆಯಂತೆ, ಚುನಾವಣಾ ಅಖಾಡಕ್ಕೆ ಧುಮುಕ್ಕಿದ್ದ ಮಾವೋವಾದಿಗಳು ಅತ್ಯಧಿಕ ಸೀಟುಗಳನ್ನು ಗಳಿಸುವ ಮೂಲಕ ನೂನತ ಸಂವಿಧಾನ ರಚಿಸುವಲ್ಲಿ ಮಹತ್ತರ ಪಾತ್ರವಹಿಸುವುದಲ್ಲದೆ, 240ವರ್ಷಗಳ ರಾಜಾಡಳಿತಕ್ಕೆ ತೆರೆ ಬೀಳಲಿದೆ.
ಚುನಾವಣೆಯ ಅಂತಿಮ ಫಲಿತಾಂಶ ಗುರುವಾರ ಸಂಜೆಯೊಳಗೆ ಘೋಷಿಸಲಾಗುತ್ತದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ನೇ ಪಾಳಿ ಮಾಧ್ಯಮ ಮತ ಎಣಿಕೆ ಕಾರ್ಯ ಮುಕ್ತಾಯಗೊಂಡಿದ್ದು, ಮಾವೋವಾದಿಗಳು 601ಸದಸ್ಯ ಬಲದ ಶಾಸನ ಸಭೆಯ ಸೀಟುಗಳಲ್ಲಿ 220 ಸ್ಥಾನ ಗಳನ್ನು ಗೆದ್ದಿರುವುದಾಗಿ ತಿಳಿಸಿದೆ.
ಕಾಠ್ಮಂಡು ಪೋಸ್ಟ್ ಡೈಲಿ ಮತ್ತು ಅವೆನ್ಯೂಸ್ ಟೆಲಿವಿಷನ್ ಸ್ಟೇಶನ್ ವರದಿ ಪ್ರಕಾರ, ನೇಪಾಳಿ ಕಾಂಗ್ರೆಸ್ 110 ಸೀಟು ಮತ್ತು ಕಮ್ಯೂನಿಷ್ಟ್ ಪಾರ್ಟಿ ಆಫ್ ನೇಪಾಳಿ(ಸಿಪಿಎಂ-ಎಲ್) 103 ಸೀಟುಗಳಲ್ಲಿ ಜಯಗಳಿಸಿದೆ. ಪ್ರಾದೇಶಿಕ ಪಕ್ಷವಾದ ದಕ್ಷಿಣ ಮಾದೇಶಿ ಪಕ್ಷ 52ಸೀಟುಗಳಲ್ಲಿ ಗೆಲುವು ಸಾಧಿಸಿದೆ.
ಆದರೆ ಇದು ಅಧಿಕೃತ ಅಂಕಿ-ಅಂಶಗಳಲ್ಲ ಎಂಬುದಾಗಿ ಮಾಧ್ಯಮದ ವರದಿ ಸ್ಪಷ್ಟಪಡಿಸಿದ್ದು, ಅಂತಿಮ ಫಲಿತಾಂಶ ಇನ್ನಷ್ಟೇ ಹೊರಬೀಳಬೇಕಾಗಿದೆ.
|