ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತ-ನೇಪಾಳ ಒಪ್ಪಂದ ರದ್ದು : ಪ್ರಚಂಡ
ನೇಪಾಳದ ಅಧಿಕಾರದ ಗದ್ದುಗೆಗೆ ತೀರ ಹತ್ತಿರವಾಗಿರುವ ನೇಪಾಳಿ ಮಾವೋವಾದಿ ಪಕ್ಷವು ಅಧಿಕಾರಕ್ಕೆ ಬಂದ ನಂತರ ಭಾರತದೊಂದಿಗೆ ಸ್ನೇಹ ಸಂಬಂಧ ಒಪ್ಪಂದವನ್ನು ಏಕ ಪಕ್ಷೀಯವಾಗಿ ರದ್ದುಗೊಳಿಸಲು ತೀರ್ಮಾನಿಸಿದೆ. 50 ವರ್ಷಗಳ ಹಿಂದಿನ ಒಪ್ಪಂದವನ್ನು ರದ್ದಗೊಳಿಸಿ ಬದಲಾದ ಕಾಲಕ್ಕೆ ತಕ್ಕಂತೆ ನೂತನ ದ್ವಿಪಕ್ಷೀಯ ಒಪ್ಪಂದ ಭಾರತ ಮತ್ತು ನೇಪಾಳ ನಡುವೆ ಆಗಬೇಕು ಎಂದು ಮಾವೋವಾದಿಗಳು ಹೇಳಿದ್ದಾರೆ.

ಮಾವೋವಾದಿ ನಾಯಕ ಪ್ರಚಂಡ ಅವರು ಈ ಕುರಿತು ಸುದ್ದಿಗಾರರೊಂದಿಗೆ ನಡೆಸಿದ ಸಂವಾದದಲ್ಲಿ 1950ರಲ್ಲಿ ಭಾರತ ಮತ್ತು ನೇಪಾಳ ನಡುವೆ ಮಾಡಿಕೊಳ್ಳಲಾಗಿರುವ ಒಪ್ಪಂದದ ಬಗ್ಗೆ ಈ ಹಿಂದೆ ನಾವು ಅನುಸರಿಸಿದ ನೀತಿಗೆ ಬದ್ಧವಾಗಿದ್ದೇವೆ. ಸ್ನೇಹ ಸಂಬಂಧದ ಒಪ್ಪಂದದ ಜೊತೆಗೆ ಭಾರತ ಮತ್ತು ನೇಪಾಳ ನಡುವೆ ಮಾಡಿಕೊಂಡಿರುವ ಇತರ ಒಪ್ಪಂದಗಳನ್ನು ಪರಿಶೀಲಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾರತ ಮತ್ತು ನೇಪಾಳ ನಡುವೆ ಮಾಡಿಕೊಳ್ಳಲಾಗಿರುವ ಒಪ್ಪಂದದಲ್ಲಿ ಎರಡು ದೇಶಗಳ ನಾಗರಿಕರು ಮುಕ್ತವಾಗಿ ವಾಸಿಸಲು ಮತ್ತು ಉದ್ಯೋಗ ಮಾಡಲು ಅನುಕೂಲ ಮಾಡಿಕೊಡಲಾಗಿದೆ. ಭಾರತದ ಸುರಕ್ಷತೆಗೆ ದಕ್ಕೆ ಬರುವ ಸಾಧ್ಯತೆ ಇದ್ದಲ್ಲಿ ಒಪ್ಪಂದವನ್ನು ರದ್ದುಗೊಳಿಸುವ ಅವಕಾಶ ಇದೆ. 2005 ರಲ್ಲಿ ಮಾಡಿಕೊಳ್ಳಲಾಗಿರುವ 12 ಅಂಶಗಳ ಒಪ್ಪಂದವನ್ನು ಈಗ ಗಮನಿಸಿದಲ್ಲಿ ನೇಪಾಳದಲ್ಲಿ ಚುನಾವಣೆಯ ನಂತರ ಬದಲಾಗಿದೆ. ಕಾರಣ ಭಾರತದೊಂದಿಗೆ ಮಾಡಿಕೊಳ್ಳುವ ಒಪ್ಪಂದವು ವಸ್ತುಸ್ಥಿತಿಗೆ ಅನುವಾಗಿರಬೇಕು ಎಂದು ಪ್ರಚಂಡ ಅಭಿಪ್ರಾಯ ವ್ಯಕ್ತಪಡಿಸಿದರು.

ಸಂಯುಕ್ತ ರಾಷ್ಟ್ರ ಸಂಘದ ಅಧಿಕಾರಿಗಳೊಂದಿಗೆ ಮಾತನಾಡಿರುವ ಅವರು ಶಾಂತಿ ಪ್ರಕ್ರಿಯೆಯು ತಾರ್ಕಿಕವಾಗಿ ಅಂತ್ಯಗೊಂಡ ನಂತರವೇ ಮಾವೋವಾದಿಗಳು ಹಿಂಸೆಯನ್ನು ಸಂಪೂರ್ಣವಾಗಿ ಕೈಬಿಡಲಿದ್ದಾರೆ ಎಂದು ಘೋಷಿಸಿದ್ದಾರೆ.

ನೂತನ ಸಂವಿಧಾನ ಜಾರಿಗೆ ಬಂದ ನಂತರ ಮಾವೋವಾದಿಗಳನ್ನು ಸೈನ್ಯಕ್ಕೆ ಸೇರ್ಪಡೆ ಮಾಡಲಾಗುವುದು ಎಂದು ಹೇಳಿದ್ದು. ರಾಜಕೀಯವಾಗಿ ಪ್ರೇರಿತ ವ್ಯಕ್ತಿಗಳನ್ನು ಸೈನ್ಯಕ್ಕೆ ಸೇರ್ಪಡೆಗೊಳಿಸಬಾರದು ಎಂದು ನೇಪಾಳಿ ಮಿಲಿಟರಿ ಹೇಳಿದೆ.
ಮತ್ತಷ್ಟು
ನೇಪಾಳ: ಇಂದು ಮತ ಎಣಿಕೆ ಮುಕ್ತಾಯ
ಸರಭ್‌ಜೀತ್ ಪರವಾಗಿ ಕ್ಷಮೆಯಾಚನೆ ಅರ್ಜಿ: ಬರ್ನೆ
ವಂಚನೆ ಪ್ರಕರಣದಲ್ಲಿ ಮೂವರು ಅನಿವಾಸಿ ಭಾರತೀಯರು
ಅಣು ಒಪ್ಪಂದಕ್ಕೆ ಹೈಡ್ ಆಕ್ಟ್ ಅನ್ವಯವಾಗುವುದಿಲ್ಲ: ಯುಎಸ್
ಎಲ್‌ಟಿಟಿಇ ಶ್ರೀಲಂಕಾ ಬಿಕ್ಕಟ್ಟು 150 ಸಾವು
ದೂರದ ಚಿಲಿಯಲ್ಲಿ ಕೇಳಿ ಬರುವ ಜನಗಣ ಮನ...