ಇರಾನ್ನೊಂದಿಗೆ ವಿದೇಶಾಂಗ ಸಂಬಂಧಗಳ ಕುರಿತು ಸೂಚನೆ ನೀಡಿ ಭಾರತದಿಂದ ಕಟುವಾದ ಉತ್ತರ ಪಡೆದ ಅಮೆರಿಕ ತನ್ನ ನಿಲುವನ್ನು ಬದಲಿಸಿ ಭಾರತ ತನಗೆ ಸರಿ ಎನಿಸಿದ ರೀತಿಯಲ್ಲಿ ಇರಾನ್‌ನೊಂದಿಗೆ ವಿದೇಶಾಂಗ ಸಂಬಂಧಗಳನ್ನು ಮುಂದುವರಿಸಬಹುದು ಎಂದು ಹೇಳಿದೆ.
ಅಮೆರಿಕವು ಭಾರತಕ್ಕೆ ಯಾವುದೇ ರೀತಿಯ ಸಲಹೆ ಸೂಚನೆಗಳನ್ನು ನೀಡಿಲ್ಲ ಮತ್ತು ಭಾರತ ತನಗೆ ಸರಿ ಎನಿಸಿದ ರೀತಿಯಲ್ಲಿ ಇರಾನ್‍ನೊಂದಿಗೆ ದ್ವಿಪಕ್ಷೀಯ ಸಂಬಂಧಗಳನ್ನು ಮುಂದುವರಿಸಬಹುದು ಎಂದು ಸಹಾಯಕ ಗೃಹ ಕಾರ್ಯದರ್ಶಿ ರಿಚರ್ಡ್ ಬೌಷರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇರಾನ್ ಅಧ್ಯಕ್ಷ ಮಹ್ಮೂದ್ ಅಹ್ಮದಿನೇಜಾದ್ ಅವರ ನವದೆಹಲಿಯ ಭೇಟಿಯ ಕುರಿತು ಅಮೆರಿಕ ಮಾತನಾಡಿದ್ದು ನಿಜ ಎಂದು ಹೇಳಿದ ಅವರು, ಅಹ್ಮದಿನೇಜಾದ್ ಭೇಟಿಯಿಂದ ಹೊರಬರುವ ಫಲಿತಾಂಶಗಳನ್ನು ತಾನು ಗಮನಿಸಲಾಗುವುದು. ಈ ತನ್ನ ನೇರೆಯ ದೇಶ ಅಣ್ವಸ್ತ್ರ ಪ್ರಬಲ ರಾಷ್ಟ್ರವಾಗಬಾರದು ಎಂದು ಈ ಹಿಂದೆ ಭಾರತ ನೀಡಿದ್ದ ಹೇಳಿಕೆಯನ್ನು ನೋಡಿ ಅಮೆರಿಕ ಭಾರತಕ್ಕೆ ಇರಾನ್ ಅಣ್ವಸ್ತ್ರ ಕಾರ್ಯಕ್ರಮಕ್ಕೆ ನಿಯಂತ್ರಣ ವಿಧಿಸಲು ಸೂಚಿಸಬೇಕು ಎಂದು ಹೇಳಿತ್ತು ಎಂದು ಬೌಷರ್ ಹೇಳಿದ್ದಾರೆ.
ಬುಧವಾರದಂದು ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಅವರು ಅಣ್ವಸ್ತ್ರ ಪ್ರಸರಣಕ್ಕೆ ಸಂಬಂಧಿಸಿದ ವಿಚಾರಗಳನ್ನು ನೋಡಿಕೊಳ್ಳಲು ಅಂತಾರಾಷ್ಟ್ರೀಯ ಅಣು ಪ್ರಾಧಿಕಾರ ಇದ್ದು ವಿನಾಕಾರಣ ಬೇರೆ ದೇಶಗಳಲ್ಲಿ ತಲೆಹಾಕುವುದು ಬೇಡ ಎಂದು ಅಮೆರಿಕಕ್ಕೆ ಕಟುವಾದ ಶಬ್ಧಗಳಲ್ಲಿ ಹೇಳಿದ್ದರು.
|