ಇಸ್ಲಾಮಾಬಾದ್: ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸುವ ಪ್ರಸ್ತಾಪದ ಕುರಿತು ಪಾಕಿಸ್ತಾನ ಸರಕಾರವು ಕ್ರಿಯಾತ್ಮವಾಗಿ ಪರಿಗಣಿಸುತ್ತಿರುವ ಹಿನ್ನೆಲೆಯಲ್ಲಿ, ಭಾರತೀಯ ಪ್ರಜೆ ಸರಬ್‌ಜಿತ್ ಸಿಂಗ್ ಸೇರಿದಂತೆ ಮರಣದಂಡನೆ ಅನುಭವಿಸುತ್ತಿರುವ ಕೈದಿಗಳು ಜೀವದಾನ ಪಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಈ ಕುರಿತು ಆಂತರಿಕ ಸಚಿವಾಲಯವು ಸಾರಾಂಶವೊಂದನ್ನು ತಯಾರಿಸಿದ್ದು, ಅದರ ಪರಿಗಣನೆಯು ಪ್ರಗತಿಯಲ್ಲಿದೆ ಎಂದು ಮೂಲವೊಂದನ್ನು ಉಲ್ಲೇಖಿಸಿ ಪಾಕಿಸ್ತಾನದ ಮಾಧ್ಯಮ ವರದಿಮಾಡಿದೆ.
ಈ ಬೆಳವಣಿಗೆಯಿಂದಾಗಿ ಸರಬ್‌ಜಿತ್ ಸಿಂಗ್ ಇದರ ಪ್ರಮುಖ ಫಲನಾನುಭವಿ ಆಗಲಿದ್ದಾರೆ ಎಂದು ವರದಿಗಳು ಹೇಳಿವೆ. ಸರಬ್‌ಜಿತ್ ಸಿಂಗ್ ಪಂಬಾಜ್ ಪ್ರಾಂತ್ಯದಲ್ಲಿ ಸರಣಿ ಬಾಂಬ್‌ಸ್ಫೋಟಗಳನ್ನು ನಡೆಸಿರುವ ಆಪಾದನೆ ಮೇರೆಗೆ ಮರಣದಂಡನೆ ಶಿಕ್ಷೆ ಎದುರಿಸುತ್ತಿದ್ದಾರೆ.
|