ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೀಜಿಂಗ್ ಒಲಿಂಪಿಕ್ಸ್: ಭಯೋತ್ಪಾದಕರ ದಾಳಿ ಸಂಭವ
ಬೀಜಿಂಗ್ ಒಲಂಪಿಕ್ಸ್ ಮೇಲೆ ಭಯೋತ್ಪಾದಕರು ದಾಳಿ ಮಾಡುವ ಸಂಭವನೀಯತೆ ಅಥವಾ ಅಥ್ಲೀಟ್‌ಗಳ ಮೇಲೆ ಚೀನಾ ವಿರೋಧಿ ಗುಂಪುಗಳು ದಾಳಿ ಮಾಡುವ ಸಾಧ್ಯತೆಯಿದೆ ಎಂದು ಇಂಟರ್‌ಪೋಲ್ ಪ್ರಧಾನಕಾರ್ಯದರ್ಶಿ ರೊನಾಲ್ಡ್ ನೋಬಲ್ ತಿಳಿಸಿದ್ದಾರೆ.

ಭಯೋತ್ಪಾದಕರು ಒಲಿಂಪಿಕ್ ಕ್ರೀಡಾಕೂಟದ ಸಂದರ್ಭದಲ್ಲಿ ದಾಳಿ ನಡೆಸುವ ಸಾಧ್ಯತೆಗಳು ದಟ್ಟವಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಎಲ್ಲ ಒಲಿಂಪಿಕ್ ಆತಿಥ್ಯ ರಾಷ್ಟ್ರಗಳು ಈ ಕಳವಳವನ್ನು ಹಂಚಿಕೊಂಡಿವೆ ಎಂದು ಬೀಜಿಂಗ್‌ನಲ್ಲಿ ಭದ್ರತಾ ಸಹಕಾರ ಕುರಿತ ಅಂತಾರಾಷ್ಟ್ರೀಯ ಸಮಾವೇಶದ ಉದ್ಘಾಟನೆಯಲ್ಲಿ ಅವರು ಹೇಳಿದರು.

ಒಲಿಂಪಿಕ್ ರಿಲೇಯಲ್ಲಿ ನಡೆದ ಇತ್ತೀಚಿನ ವಿದ್ಯಮಾನಗಳನ್ನು ಉಲ್ಲೇಖಿಸಿ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಅಥ್ಲೀಟ್‌ಗಳ ರಾಷ್ಟ್ರಗಳು ಮತ್ತು ಪೌರರು ಜ್ಯೋತಿ ರಿಲೇಯಲ್ಲಿ ಹಿಂಸಾಚಾರಕ್ಕೆ ಕಾರಣವಾದ ಶಕ್ತಿಗಳು ಒಲಿಂಪಿಕ್ ಕ್ರೀಡಾಕೂಟದಲ್ಲಿಯೂ ಹಿಂಸಾಚಾರಕ್ಕೆ ಮುಂದಾಗುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು
ಬಸ್‌ನಲ್ಲಿ ಸಿಲುಕಿ ಭಾರತೀಯ ಮಗುವಿನ ಸಾವು
ಅಂಗ್ ಸಾನ್ ಸೂಕಿಗೆ ಚಿನ್ನದ ಪದಕ
ಸರಬ್‌ಜಿತ್ ಮರಣದಂಡನೆ ಜೀವಾವಧಿಗೆ ಪರಿವರ್ತನೆ?
ದಲೈಲಾಮಾ ಪ್ರತಿನಿಧಿಯೊಂದಿಗೆ ಚೀನಾ ಮಾತುಕತೆ
ವಿಶ್ವಾಸಭಿವೃದ್ದಿ ಕ್ರಮಗಳತ್ತ ಭಾರತ ಒಲವು
ಇರಾನ್-ಭಾರತ ಸಂಬಂಧ: ಮಾತು ಬದಲಿಸಿದ ಅಮೆರಿಕ