ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಷರಫ್‌ರೊಂದಿಗೆ ಭಿನ್ನಾಭಿಪ್ರಾಯವಿಲ್ಲ: ಗಿಲಾನಿ
ಮಿಲಿಟರಿ ಅಧಿಕಾರಿಯೊಂದಿಗೆ ಕಾರ್ಯನಿರ್ವಹಿಸುವುದಕ್ಕೆ ತಮ್ಮ ಸರಕಾರಕ್ಕೆ ಯಾವುದೇ ರೀತಿಯ ತೊಂದರೆ ಇಲ್ಲ ಎಂದು ನೂತನ ಪಾಕ್ ಸರಕಾರದ ಪ್ರಧಾನಿ ಯುಸೂಫ್ ರಾಜಾ ಗಿಲಾನಿ ಅವರು ಹೇಳಿದ್ದಾರೆ.

ಪಾಕಿಸ್ತಾನ್ ಮುಸ್ಲಿಮ್ ಲೀಗ್ ಮತ್ತು ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಸಮ್ಮಿಶ್ರ ಸರಕಾರವು ಪರ್ವೇಜ್ ಮುಷರಪ್ ಅವರ ಬಳಿ ಇರುವ ವಿವಾದಾತ್ಮಕ ಅಧಿಕಾರಗಳನ್ನು ಬಳಸಿಕೊಂಡು ಚುನಾಯಿತ ಸರಕಾರವನ್ನು ಸರಕಾರ ವಜಾಗೊಳಿಸುವ ಉದ್ದೇಶ ಹೊಂದಿರಲಿಕ್ಕಿಲ್ಲ ಎಂದು ಭಾವಿಸಿವೆ.

ಕಳೆದ ಎಂಟು ವರ್ಷಗಳಿಂದ ಅಧ್ಯಕ್ಷ ಸ್ಥಾನದಲ್ಲಿ ಇರುವ ಪರ್ವೇಜ್ ಮುಷರಫ್ ಅವರು ಸ್ವಇಚ್ಚೆಯಿಂದ ಮಿಲಿಟರಿ ಮುಖ್ಯಸ್ಥನ ಅಧಿಕಾರವನ್ನು ಬಿಟ್ಟುಕೊಟ್ಟಿದ್ದಾರೆ. ಮುಷರಫ್ ಅಧಿಕಾರಾವಧಿಯಲ್ಲಿ ಚುನಾವಣೆಗಳು ನಡೆದು ಪ್ರಜಾಪ್ರಭುತ್ವದ ಪರ ಇರುವ ಪಕ್ಷಗಳು ಅಧಿಕಾರಕ್ಕೆ ಬಂದಿವೆ ಈ ಎಲ್ಲ ಅಂಶಗಳನ್ನು ಗಮನಿಸಿದಲ್ಲಿ ಮುಷರಫ್ ಅವರು ಸಮ್ಮಿಶ್ರ ಸರಕಾರಕ್ಕೆ ಯಾವುದೇ ತೆರನಾದ ಅಪಾಯ ಒಡ್ಡಲಿಕ್ಕಿಲ್ಲ ಎಂದು ಗಿಲಾನಿ ನವಾ ಇ ವಕ್ತ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಸಂವಿಧಾನದ ಕಲಂ 58(ಬಿ) ಅನ್ವಯ ಅಧ್ಯಕ್ಷರು ಸಂಸತ್‌ನ್ನು ವಜಾಗೊಳಿಸಬಹುದು ಎಂದು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು. ಕಳೆದ ಬಾರಿ ಸಂವಿಧಾನದ ಇದೇ ನಿಯಮದಡಿಯಲ್ಲಿ ಪರ್ವೇಜ್ ಮುಷರಫ್ ಅವರು ನ್ಯಾಯಾಧೀಶರನ್ನು ಪದಚ್ಯುತಗೊಳಿಸಿ ಸಂಸತ್‌ನ್ನು ವಿಸರ್ಜಿಸಿದ್ದರು ಎನ್ನುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಮತ್ತಷ್ಟು
ನವಾಜ್ ಷರೀಫ್‌- ಸರಭ್‌ಜಿತ್ ಸೋದರಿ ಭೇಟಿ
ಬೀಜಿಂಗ್ ಒಲಿಂಪಿಕ್ಸ್: ಭಯೋತ್ಪಾದಕರ ದಾಳಿ ಸಂಭವ
ಬಸ್‌ನಲ್ಲಿ ಸಿಲುಕಿ ಭಾರತೀಯ ಮಗುವಿನ ಸಾವು
ಅಂಗ್ ಸಾನ್ ಸೂಕಿಗೆ ಚಿನ್ನದ ಪದಕ
ಸರಬ್‌ಜಿತ್ ಮರಣದಂಡನೆ ಜೀವಾವಧಿಗೆ ಪರಿವರ್ತನೆ?
ದಲೈಲಾಮಾ ಪ್ರತಿನಿಧಿಯೊಂದಿಗೆ ಚೀನಾ ಮಾತುಕತೆ