ನೇಪಾಳದ 601 ಸದಸ್ಯರ ಸಂವಿಧಾನ ರಚನಾ ಸಭೆಗೆ ಏಪ್ರಿಲ್ 10ರಂದು ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಮಾವೋವಾದಿಗಳು ಗರಿಷ್ಠ 220 ಸ್ಥಾನಗಳಲ್ಲಿ ವಿಜೇತರಾಗಿದ್ದಾರೆ, ನೇರ ಹಾಗೂ ಪರೋಕ್ಷ ಚುನಾವಣಾ ವ್ಯವಸ್ಥೆಯಲ್ಲಿ ವಿವಿಧ ಪಕ್ಷಗಳ ಫಲಿತಾಂಶವನ್ನು ಪರಿಗಣಿಸಿ ಸ್ಥಾನ ಹೊಂದಾಣಿಕೆ ಬಳಿಕ ಚುನಾವಣೆಯಲ್ಲಿ ವಿಜೇತರ ಅಂತಿಮ ಪಟ್ಟಿಯನ್ನು ಚುನಾವಣಾ ಅಧಿಕಾರಿಗಳು ಶುಕ್ರವಾರ ಬಹಿರಂಗಗೊಳಿಸಿದ್ದಾರೆ.
ಪಕ್ಷ ಗರಿಷ್ಠ ಸೀಟುಗಳನ್ನು ಮಾವೋವಾದಿ ಪಕ್ಷದ ನಾಯಕ ಪಡೆದ ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ನಾಯಕ ಪ್ರಚಂಡ ಅವರು, ತಾನು ನೇಪಾಳದ ಅಧ್ಯಕ್ಷ ಪದವಿಗೆ ಅಭ್ಯರ್ಥಿಯಾಗುವುದಾಗಿ ಘೋಷಿಸಿದ್ದಾರೆ.
ತಾನು ನೇಪಾಳದ ಅಧ್ಯಕ್ಷನಾಗುತ್ತೇನೆ ವಿನಃ, ಪ್ರಧಾನಿಯಾಗುವ ಇಚ್ಛೆ ಇಲ್ಲ ಎಂದು ಸ್ಪಷ್ಟಪಡಿಸಿರುವ ಮಾವೋವಾದಿಗಳಮಾಜಿ ನಾಯಕ ಪ್ರಚಂಡ, ನನ್ನ ಗುರಿ ನೇಪಾಳದ ಪ್ರಧಾನಿ ಯಾಗುವುದಲ್ಲ, ನೇಪಾಳದ ಅಧ್ಯಕ್ಷನಾಗಬೇಕೆಂಬ ಇಚ್ಛೆ ಹೊಂದಿರುವುದಾಗಿ ಹೇಳಿದ್ದಾರೆ.
ದೇಶದ ಆಂತರಿಕ ಸಂವಿಧಾನದ ಪ್ರಕಾರ ರಾಷ್ಟ್ರದಲ್ಲಿ ಅಧ್ಯಕ್ಷನಾಗುವುದಕ್ಕೆ ಯಾವುದೇ ಅವಕಾಶ ಇಲ್ಲ, ಆ ನಿಟ್ಟಿನಲ್ಲಿ ಏಳು ಪಕ್ಷಗಳ ಮೈತ್ರಿಕೂಟದೊಂದಿಗೆ ಚರ್ಚಿಸಿ ಪರಿಹಾರ ಕಂಡು ಹಿಡಿಯುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಧ್ಯಕ್ಷ ಸ್ಥಾನದ ಬಗ್ಗೆ ಉಳಿದ ಪಕ್ಷಗಳೊಂದಿಗೂ ಚರ್ಚೆ ನಡೆಸಲಿರುವುದಾಗಿ ತಿಳಿಸಿದ ಅವರು, ಇದು ಸಕರಾತ್ಮಕವಾಗಿ ಇತ್ಯರ್ಥವಾಗುವ ಭರವಸೆ ಇರುವುದಾಗಿ ಪ್ರಚಂಡ ಆಲಿಯಾಸ್ ಪುಷ್ಪಾ ಕಮಾಲ್ ದಾಹಲ್ ತಿಳಿಸಿದ್ದಾರೆ.
|