ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹುಜಿಯಿಂದ ಹಸೀನಾರ ಹತ್ಯಾ ಪ್ರಯತ್ನ
ನಿಷೇಧಿತ ಹರ್ಕತ್ ಉಲ್ ಜೆಹಾದ್ ಇಸ್ಲಾಮಿ(ಹುಜಿ) ಉಗ್ರಗಾಮಿ ಸಂಘಟನೆ 2004ರ ಆಗೋಸ್ಟ್ 21ರಂದು ನಡೆಸಿದ ಬಾಂಬ್ ಸ್ಫೋಟದಲ್ಲಿ ಬಂಧಿತ ಮಾಜಿ ಪ್ರಧಾನಿ ಶೇಕ್ ಹಸೀನಾ ಅವರು ಮುಖ್ಯ ಗುರಿಯಾಗಿದ್ದರು ಎಂದು ಅಧಿಕಾರಿಗಳು ನೀಡಿದ ವರದಿ ಶನಿವಾರ ಬಹಿರಂಗಪಡಿಸಿದೆ.

2004ರಲ್ಲಿ ನಡೆದ ಹಸೀನಾ ಅವರನ್ನು ಗುರಿಯಾಗಿಟ್ಟು ನಡೆಸಿದ ಈ ಸ್ಫೋಟದಲ್ಲಿ 24ಮಂದಿ ಬಲಿ ಯಾಗಿದ್ದರು. ಈ ಸಂಚು ವಿಫಲವಾಗಿತ್ತು. ಆದರೆ ಈ ದಾಳಿಯಿಂದ ನಮಗೆ ಸಂತಸವಾಗಿತ್ತು ಎಂದು ನ್ಯಾಯಾಲಯದ ಮೂಲಗಳು ತಿಳಿಸಿವೆ.

ಏಪ್ರಿಲ್ 12ರಂದು ಬಂಧಿಸಲ್ಪಟ್ಟ ಹುಜಿಯ ಆರೀಫ್ ಹಸನ್‌‌ ಸುಮೊನ್‌‌ನನ್ನು ಬಂಧಿಸಿ, ನ್ಯಾಯಧೀಶ ರ ಮುಂದೆ ಹಾಜರುಪಡಿಸುವ ಮುನ್ನ ನೀಡಿದ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ಸಂಚಿನ ವಿವರವನ್ನು ಬಾಯ್ಬಿಟ್ಟಿದ್ದ.

ಅವಾಮಿ ಲೀಗ್ ಪಕ್ಷದ ರಾಲಿಯ ಸಂದರ್ಭದಲ್ಲಿ ಒಟ್ಟು 12 ಮಂದಿ 15 ಗ್ರೆನೇಡ್‌‌ಗಳಿಂದ ಸ್ಫೋಟ ನಡೆಸುವ ಜವಾಬ್ದಾರಿ ಹೊತ್ತಿದ್ದು, ಆಗ ಎರಡು ಗ್ರೆನೇಡ್ ಎಸೆದಿದ್ದು, ಅದರಲ್ಲಿ ಒಂದು ಸ್ಫೋಟ ಗೊಂಡಿತ್ತು ಎಂದು ಸುಮೊನ್ ತಿಳಿಸಿರುವುದಾಗಿ ಮ್ಯಾಜಿಸ್ಟ್ರೇಟ್ ಅವರು ವಿವರಿಸಿದರು.

ಇಲ್ಲಿನ ಕ್ರಿಮಿನಲ್ ಇನ್‌ವೆಸ್ಟಿಗೇಶನ್ ಡಿಪಾರ್ಟ್‌‌ಮೆಂಟ್(ಸಿಐಡಿ) ಏಪ್ರಿಲ್ 12ರಂದು ಢಾಕಾದ ಮೊಹಮ್ಮದ್‌‌ಪುರ್ ಪ್ರದೇಶದಲ್ಲಿನ ನಿವಾಸದಲ್ಲಿ ಬಂಧಿಸಲಾಗಿತ್ತು.
ಮತ್ತಷ್ಟು
ನೇಪಾಳ ಅಧ್ಯಕ್ಷ ಪದವಿಯತ್ತ ಪ್ರಚಂಡ ಕಣ್ಣು
ಮುಷರಫ್‌ರೊಂದಿಗೆ ಭಿನ್ನಾಭಿಪ್ರಾಯವಿಲ್ಲ: ಗಿಲಾನಿ
ನವಾಜ್ ಷರೀಫ್‌- ಸರಭ್‌ಜಿತ್ ಸೋದರಿ ಭೇಟಿ
ಬೀಜಿಂಗ್ ಒಲಿಂಪಿಕ್ಸ್: ಭಯೋತ್ಪಾದಕರ ದಾಳಿ ಸಂಭವ
ಬಸ್‌ನಲ್ಲಿ ಸಿಲುಕಿ ಭಾರತೀಯ ಮಗುವಿನ ಸಾವು
ಅಂಗ್ ಸಾನ್ ಸೂಕಿಗೆ ಚಿನ್ನದ ಪದಕ