ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತ-ಅಮೆರಿಕ ದೋಹಾ ಮಾತುಕತೆ ಪ್ರಾರಂಭ
ಕೃಷಿ ರಿಯಾಯಿತಿ ಮತ್ತು ಔದ್ಯಮಿಕ ಮತ್ತು ಕೃಷಿ ಉತ್ಪನ್ನಗಳಿಗೆ ಮಾರುಕಟ್ಚೆಯನ್ನು ಮುಕ್ತಗೊಳಿಸುವ ಸಂಬಂಧ ಭಿನ್ನ ನಿಲುವು ತಳೆದಿರುವ ಭಾರತ ಮತ್ತು ಅಮೆರಿಕ ದೇಶಗಳ ಪ್ರತಿನಿಧಿಗಳು ದೋಹಾ ಮಾತುಕತೆಯನ್ನು ಪುನರಾರಂಭಿಸಲಿದ್ದಾರೆ.

ಜಾಗತಿಕ ಮಟ್ಟದಲ್ಲಿನ ಬಹುಪಕ್ಷೀಯ ಒಪ್ಪಂದವನ್ನು ಮಾಡಿಕೊಳ್ಳಲಾಗುವ ದೋಹಾ ಸುತ್ತಿನ ಮಾತುಕತೆಯು ಅಮೆರಿಕ ಕೃಷಿ ಉತ್ಪನ್ನಗಳ ರಪ್ತಿಗೆ ರಿಯಾಯಿತಿ ನೀಡುವ ವಿಚಾರಕ್ಕೆ ಭಾರತ ಸೇರಿದಂತೆ ಇತರ ತೃತೀಯ ಜಗತ್ತಿನ ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿದ್ದವು.

ಬಹುಪಕ್ಷೀಯ ದೋಹಾ ಮಾತುಕತೆಯನ್ನು ಪುನರಾರಂಭಗೊಳ್ಳುವ ಆಶಾವಾದವನ್ನು ವ್ಯಕ್ತಪಡಿಸಿದ ಕೇಂದ್ರ ವಾಣಿಜ್ಯ ಖಾತೆ ಸಚಿವ ಕಮಲ್ ನಾಥ್ ಅವರು ಅಮೆರಿಕದ ವಾಣಿಜ್ಯ ಖಾತೆ ಸಚಿವರೊಂದಿಗೆ ಈ ಕುರಿತು ಮಾತುಕತೆಯನ್ನು ಮುಂದಿನ ತಿಂಗಳು ಜಿನಿವಾದಲ್ಲಿ ನಡೆಸಲಾಗುವುದು ಎಂದು ಕಮಲ್ ನಾಥ್ ಅವರು ಹೇಳಿದರು.

2004ರಲ್ಲಿ ನಡೆದ ದೋಹಾ ಬಹುಪಕ್ಷೀಯ ಮಾತುಕತೆಯನ್ನು ಅಮೆರಿಕದ ಪ್ರಸ್ತಾವಣೆಗಳಿಗೆ ಭಾರತ ಮುರಸೋಳಿ ಮಾರನ್ ನೇತೃತ್ವದಲ್ಲಿ ವಿರೋಧಿಸಿದ್ದರೇ, ಕೃಷಿ ಉತ್ಪನ್ನಗಳ ಮೇಲಿನ ರಪ್ತು ರಿಯಾಯಿತಿಯನ್ನು ಅಮೆರಿಕ ಕೈಬಿಡಬೇಕು ಎಂಬ ಭಾರತದ ಒತ್ತಾಯಕ್ಕೆ ಅಮೆರಿಕ ಮಣಿದಿರಲಿಲ್ಲ. ಹೀಗಾಗಿ ಎರಡು ದೇಶಗಳು ದೋಹಾ ಸುತ್ತಿನ ಮಾತುಕತೆಯಲ್ಲಿ ಭಿನ್ನ ನಿಲುವು ತಳೆದ ಕಾರಣ ದೋಹಾ ಸುತ್ತಿನ ಮಾತುಕತೆ ಸ್ಥಗಿತಗೊಂಡಿವೆ.
ಮತ್ತಷ್ಟು
ಹುಜಿಯಿಂದ ಹಸೀನಾರ ಹತ್ಯಾ ಪ್ರಯತ್ನ
ನೇಪಾಳ ಅಧ್ಯಕ್ಷ ಪದವಿಯತ್ತ ಪ್ರಚಂಡ ಕಣ್ಣು
ಮುಷರಫ್‌ರೊಂದಿಗೆ ಭಿನ್ನಾಭಿಪ್ರಾಯವಿಲ್ಲ: ಗಿಲಾನಿ
ನವಾಜ್ ಷರೀಫ್‌- ಸರಭ್‌ಜಿತ್ ಸೋದರಿ ಭೇಟಿ
ಬೀಜಿಂಗ್ ಒಲಿಂಪಿಕ್ಸ್: ಭಯೋತ್ಪಾದಕರ ದಾಳಿ ಸಂಭವ
ಬಸ್‌ನಲ್ಲಿ ಸಿಲುಕಿ ಭಾರತೀಯ ಮಗುವಿನ ಸಾವು