ಇತ್ತೀಚೆಗೆ ನೇಪಾಳದ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಪಡೆದ ಮಾವೋವಾದಿಗಳು ಸರಕಾರ ರಚನೆಗೆ ಮುನ್ನ ಶಸ್ತ್ರಾಸ್ತ್ರಗಳನ್ನು ತ್ಯಜಿಸಬೇಕು ಎಂದು ನೇಪಾಳಿ ಕಾಂಗ್ರೆಸ್ ನಾಯಕರೋರ್ವರು ಒತ್ತಾಯಿಸಿದ್ದಾರೆ.
ಪಿಟಿಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡುತ್ತಿದ್ದ ನೇಪಾಳಿ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ಗೋಪಾಲ ಮನಶ್ರೇಷ್ಟ ಅವರು ಮಾವೋವಾದಿಗಳ ನಾಯಕ ಪ್ರಚಂಡ ಅವರು ಸರಕಾರದ ನೇತೃತ್ವ ವಹಿಸಿಕೊಳ್ಳುವ ಹಾಗಿದ್ದಲ್ಲಿ ಮೊದಲು ಮಾವೊವಾದಿ ಪೀಪಲ್ಸ್ ಲಿಬರೇಶನ್ ಆರ್ಮಿಯ ಪರಮೋಚ್ಚ ನಾಯಕನ ಸ್ಥಾನದಿಂದ ಅವರು ಕೆಳಗೆ ಇಳಿಯಬೇಕು.
ಒಂದೇ ಸಮಯದಲ್ಲಿ ನೇಪಾಳಿ ಮಿಲಿಟರಿ ಪಡೆಯ ಮತ್ತು ಪೀಪಲ್ಸ್ ಲಿಬರೇಷನ್ ಆರ್ಮಿಯ ಪರಮೋಚ್ಚ ನಾಯಕರಾಗಿ ಒಬ್ಬರೇ ಇರುವಂತಿಲ್ಲ ಎಂದು ಹೇಳಿದ್ದಾರೆ.
ಎರಡು ವರ್ಷಗಳ ಹಿಂದೆ ಸಂಯುಕ್ತ ರಾಷ್ಟ್ರ ಸಂಘದ ಮೇಲುಸ್ತುವಾರಿಯಲ್ಲಿ ನೇಪಾಳದ ಬಹುಪಕ್ಷೀಯ ಸರಕಾರದೊಂದಿಗೆ ಶಾಂತಿ ಒಪ್ಪಂದ ಮಾಡಿಕೊಳ್ಳುವ ಸಂದರ್ಭದಲ್ಲಿ ತಮ್ಮ ಆಯುಧಗಳನ್ನು ಸಂಯುಕ್ತ ರಾಷ್ಟ್ರದ ಉಸ್ತುವಾರಿಯಲ್ಲಿ ಇಟ್ಟಿದ್ದಾರೆ.
|