ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆಫ್ಘಾನಿಸ್ತಾನ್: ಕರ್ಜಾಯ್ ಮೇಲೆ ಗುಂಡಿನ ದಾಳಿ
ಕಾಬೂಲ್‌‌ನಲ್ಲಿ ಭಾನುವಾರ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದ ಅಫ್ಘಾನ್ ಅಧ್ಯಕ್ಷ ಹಮೀದ್ ಕರ್ಜಾಯ್ ಹಾಗೂ ಭಾರತದ ರಾಯಭಾರಿ ಸೇರಿದಂತೆ ಭಾಗವಹಿಸಿದ್ದ ವರಿಷ್ಠರ ಮೇಲೆ ಏಕಾಏಕಿ ಸ್ವಯಂಚಾಲಿತ ಗುಂಡಿನ ಮಳೆಗೆರೆದ ಘಟನೆ ಸಂಭವಿಸಿದ್ದು, ಕರ್ಜಾಯ್ ಅವರು ಅಪಾಯದಿಂದ ಪಾರಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಅಧ್ಯಕ್ಷ ಹಮೀದ್ ಕರ್ಜಾಯ್, ಸಂಪುಟದ ಸಚಿವರು, ವಿದೇಶಾಂಗ ಸಚಿವರು ಹಾಗೂ ಭಾರತದ ರಾಯಭಾರಿಗಳೆಲ್ಲ ಪ್ರಾಣಾಪಾಯದಿಂದ ಪಾರಾಗಿರುವುದಾಗಿ ರಕ್ಷಣಾ ಸಚಿವಾಲಯದ ವಕ್ತಾರ ತಿಳಿಸಿದ್ದು, ಘಟನೆಯಲ್ಲಿ ಕಾನೂನು ಸಚಿವರೊಬ್ಬರು ಗಾಯಗೊಂಡಿರುವುದಾಗಿ ಹೇಳಿದ್ದಾರೆ.

ಕರ್ಜಾಯ್ ಹತ್ಯೆಯ ವಿರುದ್ಧ ನಡೆಸಿದ ವಿಫಲ ದಾಳಿಯ ಹೊಣೆಯನ್ನು ತಾಲಿಬಾನ್ ಉಗ್ರಗಾಮಿ ಸಂಘಟನೆ ಹೊತ್ತಿದ್ದು, ನಾವು ನಮ್ಮ ಬೆಂಬಲಿಗರ ಮೂಲಕ ಕರ್ಜಾಯ್ ಅವರಿಗೆ ಗುಂಡಿಕ್ಕುವಂತೆ ಸೂಚಿಸಿರುವುದಾಗಿ ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ರಹಸ್ಯತಾಣವೊಂದರಿಂದ ಸುದ್ದಿಸಂಸ್ಥೆ ಜತೆ ದೂರವಾಣಿಯಲ್ಲಿ ಮಾತನಾಡುತ್ತ ತಿಳಿಸಿದ್ದಾನೆ.

ಕರ್ಜಾಯ್ ಹತ್ಯೆಗಾಗಿಯೇ ನಾವು ಆಯಕಟ್ಟಿನ ಆರು ಸ್ಥಳಗಳಲ್ಲಿ ಜನರನ್ನು ನಿಯೋಜಿಸಿದ್ದೆವು, ಇದರಲ್ಲಿ ನಮ್ಮ ಮೂವರು ಮಂದಿ ಸಾವನ್ನಪ್ಪಿರುವುದಾಗಿ ಆತ ಹೇಳಿದ್ದಾನೆ.
ಗುಂಡಿನ ದಾಳಿಯಾದ ಕೂಡಲೇ ನೂರಾರು ಮಂದಿ ದಿಕ್ಕಾಪಾಲಾಗಿ ಓಡಿದ್ದರು, ಆದರೆ ಗುಂಡು ಯಾವ ದಿಕ್ಕಿನಿಂದ ಹಾರಿ ಬಂದಿತ್ತು ಎಂಬುದು ಮಾತ್ರ ಖಚಿತವಾಗಿ ತಿಳಿದುಬಂದಿಲ್ಲ. ಘಟನೆ ಚಿತ್ರಣ ಟಿವಿ ಮಾಧ್ಯಮಗಳು ಸೆರೆ ಹಿಡಿದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತಷ್ಟು
ನೇಪಾಳ: ಮಾವೋವಾದಿಗಳು ಮೊದಲು ಶಸ್ತ್ರಾಸ್ತ್ರ ತ್ಯಜಿಸಲಿ
ಭಾರತ-ಅಮೆರಿಕ ದೋಹಾ ಮಾತುಕತೆ ಪ್ರಾರಂಭ
ಹುಜಿಯಿಂದ ಹಸೀನಾರ ಹತ್ಯಾ ಪ್ರಯತ್ನ
ನೇಪಾಳ ಅಧ್ಯಕ್ಷ ಪದವಿಯತ್ತ ಪ್ರಚಂಡ ಕಣ್ಣು
ಮುಷರಫ್‌ರೊಂದಿಗೆ ಭಿನ್ನಾಭಿಪ್ರಾಯವಿಲ್ಲ: ಗಿಲಾನಿ
ನವಾಜ್ ಷರೀಫ್‌- ಸರಭ್‌ಜಿತ್ ಸೋದರಿ ಭೇಟಿ