ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಸಹ ಅಧ್ಯಕ್ಷ ಅಸೀಫ್ ಅಲಿ ಜರ್ದಾರಿ ಮುಂಬರುವ ಸಂಸತ್ತಿನ ಉಪಚುನಾವಣೆಯಲ್ಲಿ ಸ್ಪರ್ದಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು, ಈ ಮೂಲಕ ಅವರು ರಾಜಕೀಯ ಬರುವ ಊಹಾಪೋಹಗಳಿಗೆ ತೆರೆ ಬಿದ್ದಂತಾಗಿದೆ. ಸಮ್ಮಿಶ್ರ ಸರಕಾರದ ಇನ್ನೊಂದು ಅಂಗ ಪಕ್ಷ ಪಾಕಿಸ್ತಾನ ಮುಸ್ಲಿಂ ಲೀಗ್ (ನವಾಜ್ ಬಣ) ಅಧ್ಯಕ್ಷ ಮತ್ತು ಮಾಜಿ ಪ್ರಧಾನಿ ನವಾಜ್ ಷರೀಫ್ ಅವರು ಕೂಡ ಚುನಾವಣೆಯಲ್ಲಿ ಪಾಲ್ಗೊಳ್ಳುವುದೇ ಅಸೀಫ್ ಅಲಿ ಜರ್ದಾರಿ ತಳೆದಿರುವ ನಿಲುವನ್ನು ಅನುಸರಿಸುವ ಸಾಧ್ಯತೆ ಇದೆ.
ನ್ಯಾಷನಲ್ ಅಸೆಂಬ್ಲಿ ಮತ್ತು ಕೇಳಮನೆಯ ಸದಸ್ಯರಾಗದೇ ಪಾಕಿಸ್ತಾನ ಪೀಪಲ್ಸ್ ಪಾರ್ಟಿಯನ್ನು ಮುನ್ನಡೆಸಲಿದ್ದಾರೆ ಎಂದು ಪಿಪಿಪಿ ಪಕ್ಷದ ಮೂಲಗಳು ಹೇಳಿವೆ.
ಇದಕ್ಕೂ ಜೂನ್ 178ರಂದು ನಡೆಯಲಿರುವ ನ್ಯಾಷನಲ್ ಅಸೆಂಬ್ಲಿಯ ಉಪಚುನಾವಣೆಯಲ್ಲಿ ಮೊದಲು ಬೆನಜೀರ್ ಭುಟ್ಟೊ ಅವರು ಪ್ರತಿನಿಧಿಸುತ್ತಿದ್ದ ಲಾರ್ಖಾನಾ ಕ್ಷೇತ್ರದಿಂದ ಚುನಾವಣೆಗೆ ಪ್ರತಿನಿಧಿಸಲಿದ್ದಾರೆ ಎಂಬ ವದಂತಿ ಇತ್ತು. ಜರ್ದಾರಿ ಅವರು ಚುನಾವಣೆಯಲ್ಲಿ ಸ್ಪರ್ದಿಸುವುದಿಲ್ಲ ಎಂದು ಹೇಳಿದ ನಂತರ ಬೆನಜೀರ್ ಸಹೋದರಿ ಫರ್ಯಾಲ್ ತಾಲಪುರ್ ಅವರನ್ನು ಚುನಾವಣಾ ಕಣಕ್ಕೆ ಇಳಿಸಲಿದೆ ಎಂದು ಪಕ್ಷದ ಮೂಲಗಳು ಹೇಳಿವೆ.
ಮಾಧ್ಯಮಗಳಿಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಅಸೀಫ್ ಅಲಿ ಜರ್ದಾರಿ ಅವರು ರಾವಲ್ಪಿಂಡಿ ಚುನಾವಣಾ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು. ರಾವಲ್ಪಿಂಡಿ ಕ್ಷೇತ್ರದಿಂದಲೂ ಸ್ಪರ್ಧಿಸುವುದಕ್ಕೆ ನಿರಾಕರಿಸಿದ ಕಾರಣ
|