ಮಲೇಷಿಯಾದಲ್ಲಿ ಮೊದಲ ಭಾರಿಗೆ ದಾಖಲೆಯ ಸಂಖ್ಯೆಯಲ್ಲಿ ಹತ್ತು ಜನ ಭಾರತೀಯ ಮೂಲದ ವ್ಯಕ್ತಿಗಳು ಜನಪ್ರತಿನಿಧಿಗಳಾಗಿ ಆಯ್ಕೆಯಾಗಿದ್ದು, ಇಂದು ಕಾರ್ಯಾರಂಭ ಮಾಡಿದ ಮಲೇಷಿಯಾದ 12ನೇ ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕಿಯಾಗಿ ಮಹಿಳೆಯೋರ್ವಳು ಆಯ್ಕೆಯಾಗುವ ಮೂಲಕ ಮಲೇಷಿಯಾದ ಸಂಸದೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ನೂತನ ಅಧ್ಯಾಯ ಪ್ರಾರಂಭವಾದಂತಾಗಿದೆ.
ಮಾರ್ಚ್ ಎಂಟರಂದು ನಡೆದ ಸಾರ್ವತ್ರಿಕ ಚುನಾವಣೆಯ ನಂತರ ಜನಪ್ರತಿನಿಧಿಗಳಾಗಿ ಆಯ್ಕೆಯಾದ ಹತ್ತು ಭಾರತೀಯ ಮೂಲದ ವ್ಯಕ್ತಿಗಳು ಮೊದಲ ಬಾರಿಗೆ ದಾಖಲೆಯ ಸಂಖ್ಯೆಯಲ್ಲಿ ಆಯ್ಕೆಯಾಗಿ ಇತಿಹಾಸ ನಿರ್ಮಿಸಿದರು. ಇತಿಹಾಸದಲ್ಲಿ ಎರಡನೆ ಬಾರಿಗೆ ಬಾರಿಸನ್ ನ್ಯಾಷನಲ್ ಪಕ್ಷವು ಆಡಳಿತದ ಗದ್ದುಗೆ ಎರುವುದಕ್ಕೆ ಅವಶ್ಯಕವಾದ ಎರಡು ಮೂರಾಂಶದಷ್ಟು ಬಹುಮತವನ್ನು ಚುನಾವಣೆಯಲ್ಲಿ ಪಡೆದಿಲ್ಲ. ಸಮ್ಮಿಶ್ರ ಸರಕಾರದ ಪ್ರಧಾನಿ ಅಬ್ದುಲ್ಲಾ ಅಹ್ಮದ್ ಬಡಾವಿ ಅವರು 13 ರಾಜ್ಯಗಳ ಪೈಕಿ ಐದು ರಾಜ್ಯಗಳಲ್ಲಿನ ಸ್ಥಾನಗಳು ವಿರೋಧ ಪಕ್ಷಕ್ಕೆ ಸೋತಿದ್ದಾರೆ.
ಆಡಳಿತದಲ್ಲಿ ಇರುವ ಬಾರಿಸನ್ ನ್ಯಾಷನಲ್ ಪಕ್ಷವು ಮಸೂದೆಗಳನ್ನು ಪಾಸು ಮಾಡಬಹುದಾಗಿದೆ ಆದರೆ ಸಂವಿಧಾನ ತಿದ್ದುಪಡಿ ಮಾಡಬೇಕಿದ್ದಲ್ಲಿ ವಿರೋಧ ಪಕ್ಷದ ಬೆಂಬಲ ಸಂಸತ್ತಿನಲ್ಲಿ ಬೇಕು.
ಮಲೇಷಿಯಾದ ಇತಿಹಾಸದಲ್ಲಿ ಮೊದಲ ಬಾರಿಗೆ ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕಿಯಾಗಿ ಮಹಿಳೆಯೋರ್ವಳು ಕಾರ್ಯನಿರ್ವಹಿಸಲಿದ್ದಾಳೆ. ಮಾಜಿ ಉಪ ಪ್ರಧಾನಿ ಅನ್ವರ್ ಇಬ್ರಾಹಿಮ್ ಅವರ ಪತ್ನಿ ವಾನ್ ಅಜಿಜಾಹ್ ವಾನ್ ಅವರು ಪೀಪಲ್ಸ್ ಜಸ್ಟೀಸ್ ಪಾರ್ಟಿಯ ಸಚೇತಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಸಂಸತ್ತಿನಲ್ಲಿ ನಾವು ದೇಶದ ಅರ್ಥ ವ್ಯವಸ್ಥೆ, ಭ್ರಷ್ಟಾಚಾರ ಮತ್ತು ನ್ಯಾಯಾಂಗೀಯ ಪಾರದರ್ಶಕತೆ ಕುರಿತು ಮಾತನಾಡಿ ಗಮನ ಸೆಳೆಯಲಿದ್ದೇವೆ ಎಂದು ಅವರು ಹೇಳಿದರು.
|