ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸರಬ್‌‌ಜಿತ್ ಕುಟುಂಬಕ್ಕೆ ಭಾರತಕ್ಕೆ ವಾಪಸ್
ಪಾಕಿಸ್ತಾನದಲ್ಲಿ ಭಯೋತ್ಪಾದನೆ ಕೃತ್ಯ ನಡೆಸಿದ ಆರೋಪದ ಮೇಲೆ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತದ ಸರಬ್‌‌ಜಿತ್ ಸಿಂಗ್ ಕುಟುಂಬ ಭೇಟಿ ನೀಡಿ ಸರಭ್‌ಜಿತ್ ಸಿಂಗ್ ಅವರನ್ನು ಬಿಡುಗಡೆಗೊಳಿಸುವಂತೆ ಪಾಕ್ ಸರಕಾರಕ್ಕೆ ಮನವಿ ಸಲ್ಲಿಸಿ ಸ್ವದೇಶಕ್ಕೆ ಮರಳುತ್ತಿದೆ.

ದುರಾದೃಷ್ಟದಿಂದಾಗಿ ಬಲಿ ಪಶುವಾಗಿರುವ ಸರಬ್‌‌ಜಿತ್‌ಗೆ ವಿಧಿಸಿರುವ ಗಲ್ಲು ಶಿಕ್ಷೆಯಿಂದ ವಿನಾಯಿತಿ ನೀಡಿ ಕ್ಷಮಾದಾನ ನೀಡುವಂತೆ ಸಿಂಗ್ ಕುಟುಂಬ ಪಾಕ್ ಸರಕಾರಕ್ಕೆ ಈಗಾಗಲೇ ಮನವಿ ಸಲ್ಲಿಸಿದ್ದು, ವಾರಗಳ ಭೇಟಿ ನಂತರ ಇದೀಗ ಭಾರತಕ್ಕೆ ವಾಪಸಾಗುತ್ತಿರುವ ಸಂದರ್ಭದಲ್ಲಿ, ಯಾವಾಗ ನಾನು ಮತ್ತೆ ಪಾಕ್‌‌ಗೆ ಹಿಂತಿರುಗಿ ಬರುತ್ತೇನೋ ಆ ಸಂದರ್ಭದಲ್ಲಿ ನನ್ನ ಜತೆ ಸರಬ್‌‌ಜಿತ್‌‌ನನ್ನು ವಾಪಸು ಕರೆದೊಯ್ಯುತ್ತೇನೆ ಎಂದು ಸಹೋದರಿ ದಲ್‌‌ಬೀರ್ ಕೌರ್ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.

ನನ್ನ ಸಹೋದರ ದುರಾದೃಷ್ಟದಿಂದಾಗಿ ಈ ಘಟನೆಯಲ್ಲಿ ಬಲಿಪಶುವಾಗಿದ್ದಾನೆ ಎಂದು ದಲ್‌‌ಬೀರ್ ಈ ಸಂದರ್ಭದಲ್ಲಿ ಹೇಳಿದರು. ಏಪ್ರಿಲ್ 22ರಂದು ದಲ್‌‌ಬೀರ್ ಹಾಗೂ ಆಕೆಯ ಪತಿ ಬಲ್‌‌ದೇವ್ ಸಿಂಗ್ ಮತ್ತು ಸರಬ್‌‌ಜಿತ್ ಪತ್ನಿ ಸುಖ್‌‌ಪ್ರೀತ್ ಕೌರ್, ಪುತ್ರಿಯರಾದ ಸ್ವಪ್ನದೀಪ್ ಮತ್ತು ಪೂನಮ್ ಲಾಹೋರಿನ ಕೋಟ್ ಲಾಕ್‌‌ಪತ್ ಜೈಲಿನಲ್ಲಿದ್ದ ಸರಭ್‌ಜಿತ್ ಸಿಂಗ್‌ನನ್ನು ಕಾಣಲು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು.
ಮತ್ತಷ್ಟು
ನ್ಯಾಯಾಧೀಶರ ಪುನರ್ ನೇಮಕ: ಜರ್ದಾರಿ
ತನಿಖೆಯ ಹಾದಿ ತಪ್ಪಿಸಿದ ವೀಸಾ ಪುನರ್ ಜಾರಿ
21 ದಿನಗಳವರೆಗೆ ಸರಭ್‌ಜಿತ ಗಲ್ಲು ಮುಂದೂಡಿಕೆ
ಮಲೇಷಿಯಾ 10 ಭಾರತೀಯ ಸಂಸದರ ಪ್ರಮಾಣ ವಚನ ಸ್ವೀಕಾರ
ಉಪಚುನಾವಣೆಯಲ್ಲಿ ಜರ್ದಾರಿ ಸ್ಪರ್ಧೆ ಇಲ್ಲ
ಚೀನಾದಲ್ಲಿ ರೈಲು ಅಪಘಾತಕ್ಕೆ 43 ಬಲಿ