ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಐಪಿಐ ಯೋಜನೆ 45 ದಿನಗಳಲ್ಲಿ ಅಂತಿಮ: ಇರಾನ್
ಭಾರತ, ಪಾಕಿಸ್ತಾನ ಮತ್ತು ಇರಾನ್ ನಡುವಿನ ಮಹತ್ವದ ಅನಿಲ ಕೊಳವೆ ಮಾರ್ಗದ ಒಪ್ಪಂದವನ್ನು ಅನುಷ್ಠಾನಗೊಳಿಸುವ ಮಾತುಕತೆಯನ್ನು 45ದಿನಗಳಲ್ಲಿ ಅಂತಿಮಗೊಳಿಸಲಾಗುವುದು ಎಂದು ಇರಾನ್ ಅಧ್ಯಕ್ಷ ಮಹಮ್ಮದ್ ಅಹಮದಿನೇಜಾದ್ ಅವರು ಮಂಗಳವಾರ ರಾತ್ರಿ ಮಾತನಾಡುತ್ತ ತಿಳಿಸಿದ್ದಾರೆ.

ಶ್ರೀಲಂಕಾದಿಂದ ತಡರಾತ್ರಿ ಭಾರತಕ್ಕೆ ಆಗಮಿಸಿದ ಅಮದಿನೇಜಾದ್, ಇರಾನ್ ಭಾರತ ಪಾಕಿಸ್ತಾನ ಅನಿಲ ಕೊಳವೆ ಮಾರ್ಗ ಸೇರಿದಂತೆ ಕೆಲವು ವಿಷಯಗಳು ಕುರಿತು ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ, ಸುದ್ದಿಗಾರರೊಂದಿಗೆ ಮಾತನಾಡಿದರು. ಯೋಜನೆಯ ಕುರಿತು 45 ದಿನಗಳೊಳಗೆ ಮಾತುಕತೆಯ ಮೂಲಕ ಅಂತಿಮಗೊಳಿಸಲಾಗುವುದು ಅಲ್ಲದೇ ಮೂರು ದೇಶಗಳ ವರಿಷ್ಠರೊಂದಿಗೆ ಮಾತುಕತೆ ನಡೆಸಿದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದರು.

ಇದರಲ್ಲಿ ಚೀನಾಕ್ಕೆ ಮತ್ತೊಂದು ಪೈಪ್ ಲೈನ್ ಅನ್ನು ಮುಂದುವರಿಸಬೇಕಾಗಿದೆ ಎಂದ ಅಹಮದಿನೇಜಾದ್, ಆ ನಿಟ್ಟಿನಲ್ಲಿ ಪ್ರಸ್ತಾಪವೊಂದನ್ನು ಸ್ವೀಕರಿಸಿದ್ದೇವೆ. ಆ ಕುರಿತು ಎಲ್ಲಾ ಸಾಧ್ಯತೆಗಳನ್ನು ಪರಿಶೀಲಿಸಿ ಆದ್ಯತೆಯ ಮೇಲೆ ಪ್ರಸ್ತಾಪವನ್ನು ಪರಿಗಣಿಸಲಾಗುವುದು ಎಂದರು.

ಭಾರತ ಮತ್ತು ಇರಾನ್ ಸಂಬಂಧಗಳು ಸದೃಢವಾದದ್ದು ಮತ್ತು ಐತಿಹಾಸಿಕವಾದದ್ದು ಎಂದು ಅಹಮದಿನೇಜಾದ್ ಬಣ್ಣಿಸಿದ್ದು, ಎರಡು ರಾಷ್ಟ್ರಗಳ ನಡುವೆ ಅನಿಲ ಕೊಳವೆ ಮಾರ್ಗ ಒಪ್ಪಂದ ಸೌಹಾರ್ದಯುತವಾಗಿ ಜಾರಿಗೆ ಬರಲಿದೆ ಎಂದು ಆಶಾಭಾವ ವ್ಯಕ್ತಪಡಿಸಿದರು.
ಮತ್ತಷ್ಟು
ಚೀನಾ: ಟಿಬೆಟ್ ಗಲಭೆಕೋರರಿಗೆ ಜೈಲು ಶಿಕ್ಷೆ
ಸರಬ್‌‌ಜಿತ್ ಕುಟುಂಬಕ್ಕೆ ಭಾರತಕ್ಕೆ ವಾಪಸ್
ನ್ಯಾಯಾಧೀಶರ ಪುನರ್ ನೇಮಕ: ಜರ್ದಾರಿ
ತನಿಖೆಯ ಹಾದಿ ತಪ್ಪಿಸಿದ ವೀಸಾ ಪುನರ್ ಜಾರಿ
21 ದಿನಗಳವರೆಗೆ ಸರಭ್‌ಜಿತ ಗಲ್ಲು ಮುಂದೂಡಿಕೆ
ಮಲೇಷಿಯಾ 10 ಭಾರತೀಯ ಸಂಸದರ ಪ್ರಮಾಣ ವಚನ ಸ್ವೀಕಾರ