ಜೈವಿಕ ಇಂಧನದ ಕೃಷಿ ಮತ್ತು ಅನರ್ಥಕಾರಿ ಕೃಷಿ ನೀತಿಗಳ ಪರಿಣಾಮವಾಗಿ ಜಾಗತಿಕ ಮಟ್ಟದಲ್ಲಿ ಆಹಾರ ಧಾನ್ಯಗಳ ಕೊರತೆ ಕಂಡುಬರುತ್ತಿದ್ದು, ಆಹಾರ ಧಾನ್ಯಗಳ ಕೊರತೆಯು ಲಕ್ಷಾಂತರ ಜನರಿಗೆ ಪೌಷ್ಟಿಕಾಂಶದ ಕೊರತೆದ ಸಮಸ್ಯೆ ಎದುರಾಗುವಂತೆ ಮಾಡಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಕ್ಕಿಯ ಉತ್ಪಾದನೆಗೆ ಹೋಲಿಸಿದಲ್ಲಿ ಉಪಭೋಗವು ದ್ವಿಗುಣಗೊಂಡಿದೆ. 2030ರ ಹೊತ್ತಿಗೆ ಜಾಗತಿಕ ಮಟ್ಟದಲ್ಲಿ ಕೃಷಿ ವರ್ಗವು ತನ್ನ ಕೃಷಿ ಉತ್ಪಾದನೆಯನ್ನು ದ್ವಿಗುಣಗೊಳಿಸಬೇಕು. ಅಲ್ಲದೇ ಗಗನಾಭಿಮುಖವಾಗಿ ಸಾಗುತ್ತಿರುವ ಆಹಾರ ಧಾನ್ಯಗಳ ಬೆಲೆಯನ್ನು ಹತೋಟಿಗೆ ತರಬೇಕಾದಲ್ಲಿ ಜೈವಿಕ ಇಂಧನದ ಕೃಷಿಯ ಮೇಲೆ ಸರಕಾರ ನಿಯಂತ್ರಣ ಹೇರಬೇಕು ಎಂದು ಅಂತಾರಾಷ್ಟ್ರೀಯ ಕೃಷಿ ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ಮೊದಲ ಬಾರಿಗೆ ನಾವು ಅಕ್ಕಿಯ ಉತ್ಪಾದನೆಗೆ ಹೋಲಿಸಿದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉಪಭೋಗ ಮಾಡುತ್ತಿದ್ದೇವೆ ಎಂದು ಫಿಲಿಪ್ಪಿನ್ಸ್ ಮೂಲದ ಅಂತಾರಾಷ್ಟ್ರೀಯ ಭತ್ತ ಸಂಶೋಧನಾ ಕೇಂದ್ರದ ವಿಜ್ಞಾನಿ ರಾಬರ್ಟ್ ಜೈಗ್ಲೆರ್ ಹೇಳಿದ್ದಾರೆ.
ಅಮೆರಿಕ ಮೂಲದ ಅಂತಾರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಕೇಂದ್ರದ ನಿರ್ದೇಶಕ ಜೊಕಿಮ್ ವೊನ್ ಬ್ರೌನ್ ಅವರು ಪ್ರಮುಖ ಕೃಷಿ ನೀತಿಗಳು ನಿರ್ಣಾಯಕ ಹಂತದಲ್ಲಿ ವಿಫಲವಾಗಿರುವುದು ಆಹಾರದ ಕೊರತೆಗೆ ಕಾರಣವಾಗಿದೆ. ಇತ್ತೀಚಿನ ದಿನಗಳ ಖಾಧ್ಯ ವಸ್ತುಗಳ ಬೆಲೆ ಏರಿಕೆಯು ಆಹಾರದ ಅಭದ್ರತೆ, ಉಪವಾಸ ಬೀಳುವ ಸಾಧ್ಯತೆಗಳು ಇರುವುದರಿಂದ ಸಂಯುಕ್ತ ರಾಷ್ಟ್ರ ಸಂಘವು ರಪ್ತುಗಳ ಮೇಲೆ ವಿಧಿಸಿರುವ ನಿಷೇಧ ತೆರುವುಗೊಳಿಸುವಂತೆ ಮಾಡಿದೆ ಎಂದು ಅವರು ಹೇಳಿದ್ದಾರೆ,
ಕಬ್ಬು ಆಧಾರಿತ ಜೈವಿಕ ಇಂಧನ ಉತ್ಪಾದನೆಯೊಂದನ್ನು ಹೊರತು ಪಡಿಸಿ ಉಳಿದ ಎಲ್ಲ ಜೈವಿಕ ಇಂಧನಗಳ ಕೃಷಿ ಮೇಲೆ ಸರಕಾರ 2008ರ ಹೊತ್ತಿಗೆ ನಿಯಂತ್ರಣ ವಿಧಿಸಿದರೆ 2009ರ ಹೊತ್ತಿಗೆ ಮೆಕ್ಕೆ ಜೋಳದ ಬೆಲೆಯಲ್ಲಿ ಶೇ 20, ಗೋದಿಯ ಬೆಲೆಯಲ್ಲಿ ಶೇ 10 ಇಳಿಕೆಯಾಗಲಿದೆ ಎಂದು ಅಂದಾಜು ಮಾಡಿದ್ದಾರೆ.
|