ಇಲ್ಲಿನ ಸಾದಾರ್ ನಗರದಲ್ಲಿ ಬುಧವಾರ ಅಮೆರಿಕ ಸೈನಿಕರು ಮತ್ತು ಬಾಗ್ದಾದ್‌ನ ಶಿಯಾ ಉಗ್ರರ ನಡುವೆ ನಡೆದ ಘರ್ಷಣೆಯಲ್ಲಿ 28 ಮಂದಿ ಬಲಿಯಾಗಿರುವುದಾಗಿ ಮಿಲಿಟರಿ ವಕ್ತಾರರು ತಿಳಿಸಿದ್ದಾರೆ.
ಇರಾಕ್ ರಾಜಧಾನಿಯ ಸಮೀಪ ನಡೆದ ಈ ದಾಳಿಯಲ್ಲಿ ಕೆಲವು ರಾಕೆಟ್ ಮತ್ತು ಮೊರ್ಟಾರ್ ಅನ್ನು ಕೂಡ ಬಳಸಲಾಗಿತ್ತು. ಆದರೆ ಅಮೆರಿಕ ಸೈನ್ಯ ಪಡೆಯ ವೈಮಾನಿಕ ಪಡೆ ಇಲ್ಲದಿದ್ದರ ಪ್ರಯೋಜನವನ್ನು ಉಗ್ರರು ಸದುಪಯೋಗಪಡಿಸಿಕೊಂಡಿರುವುದಾಗಿ ಪ್ರತ್ಯಕ್ಷದರ್ಶಿಯೊಬ್ಬ ತಿಳಿಸಿದ್ದಾನೆ.
ಈ ವಾರದಲ್ಲಿ ನಡೆದ ಪ್ರಮುಖ ಘರ್ಷಣೆ ಇದಾಗಿದ್ದು, ಸಾದಾರ್ ನಗರದಲ್ಲಿ ಅಮೆರಿಕ ಸೈನಿಕರು 28 ಉಗ್ರರನ್ನು ಹತ್ಯೆಗೈದಿರುವುದಾಗಿ ಮಿಲಿಟರಿ ವಕ್ತಾರರು ಹೇಳಿದ್ದಾರೆ. ಈ ಸಂದರ್ಭದಲ್ಲಿ ಒಬ್ಬ ಅಮೆರಿಕ ಸೈನಿಕ ಗಾಯಗೊಂಡಿರುವುದಾಗಿ ಕರ್ನಲ್ ಸ್ಟೀವನ್ ಸ್ಟೋವರ್ ಎಎಫ್‌ಪಿ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ರಸ್ತೆಯಲ್ಲಿ ಅಡಗಿಸಿಟ್ಟ ಎರಡು ಬಾಂಬ್‌ಗಳು ಸ್ಫೋಟಗೊಂಡ ಪರಿಣಾಮ ಅಮೆರಿಕದ ಎರಡು ವಾಹನಗಳು ಜಖಂಗೊಂಡಿದ್ದು, ಇದರಲ್ಲಿ ಮೂರು ಮಂದಿ ಸೈನಿಕರು ಗಾಯಗೊಂಡಿರುವುದಾಗಿ ಹೇಳಿದ್ದಾರೆ.
|