ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೊಲೊಂಬಿಯಾ: ಡ್ರಗ್ ಮಾಫಿಯಾ ಮೆಜಿಯಾ ಹತ್ಯೆ
ಡ್ರಗ್ ಮಾಫಿಯಾ ದೊರೆಯನ್ನು ಮಂಗಳವಾರದಂದು ಕೊಲೊಂಬಿಯಾ ಪೊಲೀಸರು ಹತ್ಯೆಗೈದಿರುವುದಾಗಿ ತಿಳಿಸಿದ್ದು, ಈತನನ್ನು ಹಿಡಿದುಕೊಟ್ಟವರಿಗೆ 5ಬಿಲಿಯನ್ ಅಮೆರಿಕನ್ ಡಾಲರ್ ಬಹುಮಾನ ನೀಡುವುದಾಗಿ ಘೋಷಿಸಿತ್ತು ಎಂದು ಕೊಲೊಂಬಿಯಾ ರಕ್ಷಣಾ ಸಚಿವರು ತಿಳಿಸಿದ್ದಾರೆ.

ಉತ್ತರ ಕೊಲೊಂಬಿಯಾದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಡ್ರಗ್ ದೊರೆ ಮಿಗ್ಯುಯೆಲ್ ಆಂಜೆಲ್ ಮೆಜಿಯಾ ಸಾವನ್ನಪ್ಪಿರುವುದಾಗಿ ರಕ್ಷಣಾ ಸಚಿವ ಜುನಾ ಮಾನ್ಯುಯೆಲ್ ಸಾಂತೋಸ್ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.

ಈತ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಆಗಿರುವುದಾಗಿ ಅವರು ತಿಳಿಸಿದರು. ಈ ಸಂದರ್ಭದಲ್ಲಿ ಆಂಜೆಲ್ ಮೆಜಿಯಾನ ಇಬ್ಬರು ಅಂಗರಕ್ಷಕರು ಹತರಾಗಿದ್ದು, ಅವರಲ್ಲಿ ಮೂವರನ್ನು ಬಂಧಿಸಲಾಗಿದೆ ಎಂದು ಹೇಳಿದರು.

ಆತನ ಸಹೋದರರನ್ನು ಬಂಧಿಸಿರುವುದರಿಂದ ಈಗಾಗಲೇ ಘೋಷಿಸಿರುವ 5ಬಿಲಿಯನ್ ಅಮೆರಿಕನ್ ಡಾಲರ್ ಹಣವನ್ನು ನೀಡುವುದಾಗಿ ಅಮೆರಿಕ ರಾಜ್ಯ ಇಲಾಖೆ ತಿಳಿಸಿದೆ. 2004ರಲ್ಲಿ ಆಂಜೆಲ್ ಮೆಜಿಯಾ ಸೇರಿದಂತೆ ಇಬ್ಬರ ಮೇಲೂ ಗಡಿಪಾರು ವಾರೆಂಟ್ ಹೊರಡಿಸಿತ್ತು. ಎರಡು ವರ್ಷಗಳಲ್ಲಿ ಅವರು ಸಮಾರು 70ಟನ್ ಕೊಕೇನ್‌‌ ಅನ್ನು ಹಡಗಿನ ಮೂಲಕ ಸಾಗಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತಷ್ಟು
ಅಮೆರಿಕ ಸೈನಿಕರ ದಾಳಿಗೆ 28 ಶಿಯಾ ಉಗ್ರರ ಬಲಿ
ಆಹಾರದ ಕೊರತೆಗೆ ಕಾರಣವಾದ ಜೈವಿಕ ಇಂಧನ
ಪಾಕ್ ಸರಕಾರಕ್ಕೆ ಷರೀಫ್ ಅಂತಿಮ ಗಡುವು
ಐಪಿಐ ಯೋಜನೆ 45 ದಿನಗಳಲ್ಲಿ ಅಂತಿಮ: ಇರಾನ್
ಚೀನಾ: ಟಿಬೆಟ್ ಗಲಭೆಕೋರರಿಗೆ ಜೈಲು ಶಿಕ್ಷೆ
ಸರಬ್‌‌ಜಿತ್ ಕುಟುಂಬಕ್ಕೆ ಭಾರತಕ್ಕೆ ವಾಪಸ್