ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಮೆರಿಕ-ಭಾರತ ಭಾವೀ ಸರಕಾರಗಳಿಂದ ಅಣುಬಂಧ ಜಾರಿ
ಸ್ಥಗಿತಗೊಂಡಿರುವ ಭಾರತ-ಅಮೆರಿಕ ಪರಮಾಣು ಒಪ್ಪಂದವು ಎರಡೂ ದೇಶಗಳ ಮುಂದಿನ ಆಡಳಿತದಲ್ಲಿ ಸುಖಾಂತ್ಯ ಕಾಣಲಿದೆ ಎಂದು ಅಮೆರಿಕದ ಮಾಜಿ ಸರಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದು, ಅಮೆರಿಕದ ನೂತನ ಅಧ್ಯಕ್ಷರು ಅಣ್ವಸ್ತ್ರ ಸಂಬಂಧಿತ ಈ ಪ್ರಕ್ರಿಯೆಗೆ ತಡೆಯೊಡ್ಡಲಾರರು ಎಂದು ತಿಳಿಸಿದ್ದಾರೆ.

ಇದೇ ವೇಳೆ, ಪರಮಾಣು ಒಪ್ಪಂದವು ಭಾರತ ಮತ್ತು ಇರಾನ್ ಮೈತ್ರಿಗೆ ತೊಡಕೂ ಆಗಬಾರದು ಮತ್ತು ಆಗದು ಎಂದು ರಾಷ್ಟ್ರೀಯ ಭದ್ರತಾ ಮಂಡಳಿಯ ಏಷ್ಯಾ ಉಸ್ತುವಾರಿ ಹೊತ್ತಿದ್ದ ಮಾಜಿ ಹಿರಿಯ ಅಧಿಕಾರಿ ಬ್ರೂಸ್ ರೀಡೆಲ್ ಹೇಳಿದ್ದಾರೆ.

ಇಂದಲ್ಲ ನಾಳೆ, ಕಾಂಗ್ರೆಸ್ ಸರಕಾರವು ಕಮ್ಯೂನಿಷ್ಟರನ್ನು ಎದುರು ಹಾಕಿಕೊಳ್ಳುತ್ತದೆ, ಬಹುಶಃ 2009ರ ಮೇ ತಿಂಗಳ ಚುನಾವಣೆ ವೇಳೆಗೆ ಇದು ಸಂಭವಿಸಬಹುದು ಎಂದು ರೀಡೆಲ್ ಅಭಿಪ್ರಾಯಪಟ್ಟಿದ್ದಾರೆ. ಬಹುಶಃ ಈ ಒಪ್ಪಂದವು ಭಾರತದ ಮುಂದಿನ ಸರಕಾರದವರೆಗೂ ವಿಸ್ತರಣೆಯಾಗಬಹುದಾಗಿದೆ ಎಂದವರು ಹೇಳಿದ್ದಾರೆ.
ಮತ್ತಷ್ಟು
ಕೊಲೊಂಬಿಯಾ: ಡ್ರಗ್ ಮಾಫಿಯಾ ಮೆಜಿಯಾ ಹತ್ಯೆ
ಅಮೆರಿಕ ಸೈನಿಕರ ದಾಳಿಗೆ 28 ಶಿಯಾ ಉಗ್ರರ ಬಲಿ
ಆಹಾರದ ಕೊರತೆಗೆ ಕಾರಣವಾದ ಜೈವಿಕ ಇಂಧನ
ಪಾಕ್ ಸರಕಾರಕ್ಕೆ ಷರೀಫ್ ಅಂತಿಮ ಗಡುವು
ಐಪಿಐ ಯೋಜನೆ 45 ದಿನಗಳಲ್ಲಿ ಅಂತಿಮ: ಇರಾನ್
ಚೀನಾ: ಟಿಬೆಟ್ ಗಲಭೆಕೋರರಿಗೆ ಜೈಲು ಶಿಕ್ಷೆ