ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತದಲ್ಲಿ ಭಯೋತ್ಪಾದನೆ ನಿಗ್ರಹಕ್ಕೆ ಸೌಕರ್ಯ ಅಡ್ಡಿ: ಅಮೆರಿಕ
2007ರಲ್ಲಿ ಸುಮಾರು 2300 ಮಂದಿಯ ಹತ್ಯೆಯೊಂದಿಗೆ ಭಾರತವು ಭಯೋತ್ಪಾದನೆಯಿಂದ ಅತ್ಯಂತ ಹೆಚ್ಚು ನಲುಗಿದ ರಾಷ್ಟ್ರಗಳಲ್ಲೊಂದಾಗಿದ್ದು, 'ಅಸಮರ್ಪಕ' ಕಾನೂನು ಅನುಷ್ಠಾನ ಪ್ರಕ್ರಿಯೆ ಮತ್ತು 'ನಿಧಾನಗತಿಯ ಹಾಗೂ ಸಂಕೀರ್ಣ' ನ್ಯಾಯಾಂಗ ವ್ಯವಸ್ಥೆಯಿಂದಾಗಿ ಸರಕಾರದ ಭಯೋತ್ಪಾದಕತೆ-ವಿರೋಧೀ ಪ್ರಯತ್ನಗಳಿಗೆ ಅಡ್ಡಿಯಾಗಿದೆ ಎಂದು ಅಮೆರಿಕ ರಾಜ್ಯಾಂಗ ಇಲಾಖೆ ಹೇಳಿದೆ.

ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಗುಂಟ ಭಯೋತ್ಪಾದನಾ ಚಟುವಟಿಕೆಗಳು ಕಡಿಮೆಯಾಗಿದೆ ಆದರೂ, ಲಷ್ಕರೆ ತೋಯ್ಬಾ ಮುಂತಾದ ಪಾಕಿಸ್ತಾನೀ ಮೂಲದ ಉಗ್ರಗಾಮಿ ಸಂಘಟನೆಗಳು ಕಣಿವೆಯಲ್ಲಿ ದಾಳಿಗಳನ್ನು ನಡೆಸುತ್ತಲೇ ಇದೆ ಎಂದು ಭಯೋತ್ಪಾದನೆ ಕುರಿತ ತನ್ನ ವಾರ್ಷಿಕ ವರದಿಯಲ್ಲಿ ರಾಜ್ಯಾಂಗ ಇಲಾಖೆ ತಿಳಿಸಿದೆ.

ಭಯೋತ್ಪಾದನೆ ನಿಗ್ರಹಿಸುವ ಸರಕಾರದ ಪ್ರಯತ್ನಗಳಿಗೆ ಹಳೇ ಕಾಲದ ಕಾನೂನು ಕಟ್ಟಳೆಗಳು ತಡೆಯಾಗಿವೆ ಎಂದೂ ಇದೇ ಸಂದರ್ಭ ವರದಿಯಲ್ಲಿ ಉಲ್ಲೇಖಿಸಲಾಗಿದೆ. 'ಭಾರತೀಯ ನ್ಯಾಯ ವ್ಯವಸ್ಥೆ ತೀರಾ ನಿಧಾನಗತಿಯದು, ಸಂಕೀರ್ಣವಾದದ್ದು ಮತ್ತು ಭ್ರಷ್ಟಾಚಾರಕ್ಕೆ ಈಡಾಗಬಹುದಾದಂಥದ್ದು. ಭಯೋತ್ಪಾದವೆ ಕುರಿತ ವಿಚಾರಣೆಗಳು ಪೂರ್ಣಗೊಳ್ಳಲು ವರ್ಷಗಟ್ಟಲೆ ಸಮಯ ಹಿಡಿಯುತ್ತದೆ. ಹೆಚ್ಚಿನ ಭಾರತೀಯ ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ, ತರಬೇತಿ ಕೊರತೆ ಮತ್ತು ಭಯೋತ್ಪಾದನೆಯನ್ನು ಪರಿಣಾಮಕಾರಿಯಾಗಿ ಎದುರಿಸುವ ಆಧುನಿಕ ಶಸ್ತ್ರಾಸ್ತ್ರಗಳ ಕೊರತೆ ಎದ್ದುಕಾಣುತ್ತದೆ' ಎಂದು ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ಸಂಝೋತಾ ಎಕ್ಸ್‌ಪ್ರೆಸ್ ರೈಲಿನ ಮೇಲೆ ದಾಳಿಯ ಬಗ್ಗೆ ಉಲ್ಲೇಖಿಸಿದ ವರದಿ, ಹಿಂದೂ ಮತ್ತು ಮುಸ್ಲಿಮರ ಮಧ್ಯೆ ಧ್ವೇಷ ಹುಟ್ಟುಹಾಕುವ ಪ್ರಯತ್ನದ ಫಲವಿದು ಎಂದು ಅಭಿಪ್ರಾಯಪಟ್ಟಿದೆ.
ಮತ್ತಷ್ಟು
ಅಮೆರಿಕ-ಭಾರತ ಭಾವೀ ಸರಕಾರಗಳಿಂದ ಅಣುಬಂಧ ಜಾರಿ
ಕೊಲೊಂಬಿಯಾ: ಡ್ರಗ್ ಮಾಫಿಯಾ ಮೆಜಿಯಾ ಹತ್ಯೆ
ಅಮೆರಿಕ ಸೈನಿಕರ ದಾಳಿಗೆ 28 ಶಿಯಾ ಉಗ್ರರ ಬಲಿ
ಆಹಾರದ ಕೊರತೆಗೆ ಕಾರಣವಾದ ಜೈವಿಕ ಇಂಧನ
ಪಾಕ್ ಸರಕಾರಕ್ಕೆ ಷರೀಫ್ ಅಂತಿಮ ಗಡುವು
ಐಪಿಐ ಯೋಜನೆ 45 ದಿನಗಳಲ್ಲಿ ಅಂತಿಮ: ಇರಾನ್