ಪ್ರಜಾಪ್ರಭುತ್ವವನ್ನು ವಿರೋಧಿಸುತ್ತಿರುವ ಮ್ಯಾನ್ಮಾರ್‌ನ ಮಿಲಿಟರಿ ಆಡಳಿತದಲ್ಲಿ ಸ್ವಾಧೀನದಲ್ಲಿರುವ ಉದ್ಯಮಗಳ ಆಸ್ತಿಯನ್ನು ಅಮೆರಿಕದಲ್ಲಿ ಜಪ್ತಿ ಮಾಡಿಕೊಳ್ಳುವ ಮೂಲಕ ಅಮೆರಿಕ ಆರ್ಥಿಕ ದಿಗ್ಬಂಧನವನ್ನು ಮತ್ತಷ್ಟು ಬಿಗಿ ಮಾಡಿತು.
ಅಮೆರಿಕದಲ್ಲಿ ವ್ಯವಹಾರ ನಡೆಸುತ್ತಿರುವ ಮ್ಯಾನ್ಮಾರ್ ಮೂಲದ ರತ್ನೋದ್ಯಮ ಮತ್ತು ಅರಣ್ಯೋತ್ಪನ್ನಗಳ ಉದ್ಯಮಗಳು ಮ್ಯಾನ್ಮಾರ್ ಜನತೆಯನ್ನು ಶೋಷಿಸಿ ಮಿಲಿಟರಿ ಅಧಿಕಾರಿಗಳು ಶ್ರೀಮಂತರಾಗುವಂತೆ ಮಾಡುತ್ತಿವೆ ಎಂದು ಅಮೆರಿಕದ ಅಧ್ಯಕ್ಷ ಜಾರ್ಜ್ ಬುಷ್ ಅವರು ಆಪಾದಿಸಿದ್ದಾರೆ. ನೂತನವಾಗಿ ಬುಷ್ ಆಡಳಿತ ಜಾರಿಗೆ ತಂದಿರುವ ಮಸೂದೆಯಿಂದ ಮ್ಯಾನ್ಮಾರ್ ಮೂಲದ ಸರಕಾರಿ ಕಂಪನಿಗಳ ಬ್ಯಾಂಕ್ ಖಾತೆಗಳ ಮೇಲೆ ಅಮೆರಿಕ ಮುಟ್ಟುಗೊಲು ಹಾಕಬಹುದು. ಮ್ಯಾನ್ಮಾರ್ ಮೂಲದ ಖಾಸಗಿ ಕಂಪನಿಗಳನ್ನು ಅಮೆರಿಕ ಈ ಮೂದಲು ಹೊರಡಿಸಿದ್ದ ಆರ್ಥಿಕ ದಿಗ್ಬಂಧನದ ಆದೇಶದಲ್ಲಿ ನಿಷೇಧಿಸಿದೆ.
ವೈಟ್ ಹೌಸಿನಲ್ಲಿ ನಡೆದ ಏಷಿಯಾ ಪ್ಯಾಸಿಪಿಕ್ ಅಮೆರಿಕನ್ ಹೆರಿಟೆಜ್ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅಮೆರಿಕದ ಅಧ್ಯಕ್ಷ ಬುಷ್ ಅವರು ಪ್ರಜಾಪ್ರಭುತ್ವವನ್ನು ಬಯಸುತ್ತಿರುವ ಮ್ಯಾನ್ಮಾರ್ ಜನತೆಯ ಆಶೋತ್ತರಗಳನ್ನು ಮಿಲಿಂಟರಿ ಜುಂಟಾ ಆಡಳಿತ 1962ರಿಂದ ವಿರೋಧಿಸುತ್ತ ಬಂದಿದೆ. 1990ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯ ಫಲಿತಾಂಶಗಳನ್ನು ಅಲ್ಲಿನ ಮಿಲಿಟರಿ ಆಡಳಿತ ಒಪ್ಪಿಕೊಳ್ಳದೇ ಪ್ರಜಾಪ್ರಭುತ್ವದ ಪರ ಹೋರಾಟ ನಡೆಸುತ್ತಿರುವ ಅಂಗ್ ಸಾನ್ ಸೂಕಿಯವರನ್ನು ಕಳೆದ ಒಂದು ದಶಕದಿಂದ ಗೃಹ ಬಂಧನದಲ್ಲಿ ಇರಿಸಿ ಜನರನ್ನು ಮಿಲಿಟರಿ ಆಡಳಿತ ತುಳಿಯುತ್ತಿದೆ ಎಂದು ಅವರು ಆಪಾದಿಸಿದರು.
|