ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶಾಶ್ವತ ಪರಿಹಾರ ಬೇಕು: ರೈಸ್
ಇಸ್ರೇಲ್- ಪ್ಯಾಲೆಸ್ತೀನ್ ಸಮಸ್ಯೆ
ಯಹೂದಿಗಳ ವಸತಿ ಪ್ರದೇಶ ವಿಸ್ತರಣೆಗೆ ಸಂಬಂಧಿಸಿದಂತೆ ಪ್ಯಾಲೆಸ್ತೀನ್ ಮತ್ತು ಇಸ್ರೇಲ್‌ಗಳ ನಡವೆ ಉದ್ಭವಿಸಿರುವ ಭಿನ್ನಾಭಿಪ್ರಾಯವನ್ನು ಗಡಿ ರೇಖೆಯನ್ನು ಗುರುತಿಸುವ ಮೂಲಕ ಶಾಶ್ವತವಾಗಿ ಪರಿಹರಿಸಬೇಕು ಎಂದು ಅಮೆರಿಕದ ರಾಜ್ಯ ಕಾರ್ಯದರ್ಶಿ ಕಾಂಡೊಲಿಸಾ ರೈಸ್ ಹೇಳಿದ್ದಾರೆ.

ಆಕ್ರಮಿತ ಪಶ್ಚಿಮ ತೀರದಲ್ಲಿ ಇಸ್ರೇಲ್ ಯಹೂದಿಗಳ ವಸತಿ ಪ್ರದೇಶಗಳನ್ನು ವಿಸ್ತರಿಸುತ್ತಿರುವುದರ ವಿರುದ್ಧ ಎಚ್ಚರಿಕೆ ನೀಡಿದ್ದು, ಇದು ಆರು ದಶಕಗಳ ಹಿಂದೆ ಬರಲಾಗಿರುವ ಒಪ್ಪಂದದಂತೆ ಆ ಪ್ರದೇಶಗಳು ಇಸ್ರೇಲಿನ ಆಡಳಿತಕ್ಕೆ ಒಳಪಡಲಿವೆ ಎಂದು ಹೇಳಿದ್ದಾರೆ.

ಆರು ತಿಂಗಳ ಹಿಂದೆ ಎರಡು ದೇಶಗಳ ನಡುವೆ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಅಮೆರಿಕದ ಅಧ್ಯಕ್ಷ ಜಾರ್ಜ್ ಬುಷ್ ಅವರು ಉದ್ಘಾಟಿಸಿದ್ದ ಶಾಂತಿ ಮಾತುಕತೆಯು ಯಹೂದಿಗಳ ವಸತಿ ವಿಸ್ತರಣೆಯ ಬಿಕ್ಕಟ್ಟು ಎದುರಾದ ಕಾರಣ ವಿಫಲಗೊಳ್ಳುವ ಸಾಧ್ಯತೆ ಇದೆ. ಆರು ತಿಂಗಳಿನಿಂದ ಈ ನಿಟ್ಟಿನಲ್ಲಿ ಕಿಂಚಿತ್ ಪ್ರಗತಿಯಾಗಿದ್ದು, ಇಸ್ರೇಲ್ ತನ್ನ ಭೂಪ್ರದೇಶವನ್ನು ವಿಸ್ತರಿಸುವ ಕಾರ್ಯವನ್ನು ಮುಂದುವರಿಸಿದೆ ಎಂದು ಪ್ಯಾಲೆಸ್ತೀನ್ ಆರೋಪ ಮಾಡುತ್ತಿದೆ.

ಲಂಡನ್‌‌ನಲ್ಲಿ ಉಭಯ ಪಕ್ಷಗಳೊಂದಿಗೆ ಮಾತುಕತೆ ನಡೆಸಿದ ನಂತರ ಮಾತನಾಡಿದ ರೈಸ್ ಅವರು, ಎರಡು ದೇಶಗಳ ನಡುವೆ ಗಡಿ ರೇಖೆಯನ್ನು ಗುರುತಿಸುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಹಿಡಿಯಬಹುದು. ಬುಷ್ ಅವರು ಅಧಿಕಾರಾವಧಿ ಅಂತ್ಯಗೊಳ್ಳುವ ಮುನ್ನ ಸ್ವತಂತ್ರ ಪ್ಯಾಲೇಸ್ತೀನ್ ಅಸ್ತಿತ್ವಕ್ಕೆ ಬರುವ ಸಾಧ್ಯತೆ ಇಲ್ಲ. ಎರಡು ಪಕ್ಷಗಳ ನಡುವಿನ ಶಾಂತಿ ಮಾತುಕತೆ ನೆನೆಗುದಿಗೆ ಬಿದ್ದಿದೆ ಎಂದು ಅರಬ್ ರಾಷ್ಟ್ರಗಳು ಆರೋಪ ಮಾಡಿವೆ.
ಮತ್ತಷ್ಟು
ಮಾನ್ಮಾರ್ ವಿರುದ್ಧ ಅಮೆರಿಕದ ದಿಗ್ಬಂಧನ ಮುಂದುವರಿಕೆ
ಭಾರತದಲ್ಲಿ ಭಯೋತ್ಪಾದನೆ ನಿಗ್ರಹಕ್ಕೆ ಸೌಕರ್ಯ ಅಡ್ಡಿ: ಅಮೆರಿಕ
ಅಮೆರಿಕ-ಭಾರತ ಭಾವೀ ಸರಕಾರಗಳಿಂದ ಅಣುಬಂಧ ಜಾರಿ
ಕೊಲೊಂಬಿಯಾ: ಡ್ರಗ್ ಮಾಫಿಯಾ ಮೆಜಿಯಾ ಹತ್ಯೆ
ಅಮೆರಿಕ ಸೈನಿಕರ ದಾಳಿಗೆ 28 ಶಿಯಾ ಉಗ್ರರ ಬಲಿ
ಆಹಾರದ ಕೊರತೆಗೆ ಕಾರಣವಾದ ಜೈವಿಕ ಇಂಧನ